B. Y. Raghavendra ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ವರ್ಷದೊಳಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಗೆ ಮುಕ್ತಿ ನೀಡಲಿದೆ.
ಸಂಸದರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರದೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸಿ ಶಿವಮೊಗ್ಗ ಕ್ಷೇತ್ರದ ಪಶ್ಚಿಮ ಘಟ್ಟ ವ್ಯಾಪ್ತಿಯ ದಟ್ಟ ಅರಣ್ಯದ ನಿವಾಸಿಗಳ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದಾರೆ.
4ಜಿ ಸ್ಯಾಚುರೇಶನ್ ಯೋಜನೆ ಅಡಿ ಶಿವಮೊಗ್ಗ ಟೆಲಿಕಾಂ ಜಿಲ್ಲೆಗೆ 198 ಮತ್ತು ಬೈಂದೂರು ಕ್ಷೇತ್ರಕ್ಕೆ 27 ಸೇರಿದಂತೆ ಒಟ್ಟು 225 ಹೊಸ ಮೊಬೈಲ್ ಟವರ್ ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಸಂಸದ ಬಿ .ವೈ. ರಾಘವೇಂದ್ರ ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇವರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ದೂರ ಸಂಪರ್ಕ ಸಚಿವೆ ಅಶ್ವಿನಿ ವೈಷ್ಣವ್ ಮೊಬೈಲ್ ಟವರ್ ಗಳನ್ನು ಮಂಜೂರು ಮಾಡಿದ್ದಾರೆ.
ಪಶ್ಚಿಮ ಘಟ್ಟದ ಅರಣ್ಯದೊಳಗಿನ ಕುಗ್ರಾಮಗಳು ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಮೊಬೈಲ್ ಟವರ್ ಗಳ ಸ್ಥಾಪನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವನ್ನು ಒತ್ತಾಯಿಸಲಾಗಿತ್ತು. ಏರ್ಟೆಲ್, ಬಿಎಸ್ಎನ್ಎಲ್, ಜಿಯೋ ಜಿಯೋ ಹಾಗೂ ಇತರೆ ಕಂಪನಿಗಳಿಗೆ ಟವರ್ ಸ್ಥಾಪನೆಗೆ ಸೂಚನೆ ನೀಡಲಾಗಿತ್ತು. ಆದರೆ, ನಷ್ಟದ ನೆಪದಿಂದ ಖಾಸಗಿ ಸಂಸ್ಥೆಗಳು ಟವರ್ ನಿರ್ಮಾಣಕ್ಕೆ ಆಸಕ್ತಿ ತೋರಿಸಿರಲಿಲ್ಲ. ಆದ್ದರಿಂದ ಕೇಂದ್ರದ ಮೇಲೆ ಹೆಚ್ಚು ಒತ್ತಡ ಹಾಕಲಾಗಿತ್ತು. ತೀರ್ಥಹಳ್ಳಿಗೆ 27, ಹೊಸನಗರಕ್ಕೆ 35, ಶಿವಮೊಗ್ಗ 18, ಸಾಗರ ತಾಲೂಕಿಗೆ 89, ಭದ್ರಾವತಿ ಮತ್ತು ಸೊರಬ ತಾಲೂಕುಗಳಲ್ಲಿ ತಲಾ 8 ಟವರ್ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ.
B. Y. Raghavendra ಈಗಾಗಲೇ ಎಂಟು ಸ್ಥಳಗಳನ್ನು ಹಸ್ತಾಂತರಿಸಲಾಗಿದೆ. ಅಂತಿಮ ಹಂತದಲ್ಲಿ ರುವ ಯುವ ಮೊಗ್ಗ ಜಿಲ್ಲೆಯ 73, ಬೈಂದೂರ್ ನ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.