Thursday, June 18, 2026
Thursday, June 18, 2026

Death News ಕಾಣೆಯಾದ ವ್ಯಕ್ತಿನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

Date:

Death News ಕಳೆದ ಏಳು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಹಳ್ಳಿ ಗ್ರಾಮದ ಕೃಷಿಕ ವೀರಪ್ಪ(62)
ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಕಳೆದ ಏಳು ದಿನಗಳಿಂದ ಕಾಣೆಯಾಗಿದ್ದ ವೀರಪ್ಪ ರವರನ್ನು ಕುಟುಂಬಸ್ಥರು ಎಲಾ ಕಡೆ ಹುಡುಕಾಡಿದ್ದಾರೆ. ಬಳಿಕ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ಕೂಡಾ ದಾಖಲಿಸಿದ್ದರು.

ಇಂದು ವೀರಪ್ಪ ರವರ ಮನೆ ಹಿಂಭಾಗ ದಟ್ಟ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ.

ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಸಾವಿಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.

Death News ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...