Kannada Sahitya Parishad District Committee ಆರೋಗ್ಯದ ಅರಿವಿಲ್ಲದೆ ತಪ್ಪು ಕಲ್ಪನೆಗೆ ಒಳಗಾಗಿ ಅನಾಹುತ ಮಾಡಿಕೊಳ್ಳುವುದನ್ನು ತಡೆಯಲು ನಮ್ಮ ತಂದೆ, ತಾಯಿ ಹೆಸರಲ್ಲಿ ದತ್ತಿ ನೀಡಿ ಆ ಮೂಲಕ ಅರಿವು ಮೂಡಿಸುವ ಪ್ರಯತ್ನದ ಫಲವಿದು. ಆರೋಗ್ಯ ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವು ಬಹಳ ಮುಖ್ಯ ಎಂದು ಮನಶಾಸ್ತ್ರಜ್ಞರು, ಖ್ಯಾತ ವೈದ್ಯರಾದ ಡಾ. ಕೆ.ಆರ್. ಶ್ರೀಧರ ಅವರು ವಿವರಿಸಿದರು.
ಅವರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ಮೇ. 18 ರಂದು ಶಿವಮೊಗ್ಗ ನಗರದ ಗಾರ್ಡನ್ ಏರಿಯಾದಲ್ಲಿರುವ ಜಿ.ಜೆ. ಸೂರ್ಯ ಕಾಲೇಜ್ ಆಫ್ ನರ್ಸಿಂಗ್ ಸಭಾಂಗಣ ದಲ್ಲಿ ಶ್ರೀ ರಾಮಭಟ್ಟ ಮತ್ತು ಶ್ರೀಮತಿ ದೇವಕಮ್ಮ ದತ್ತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಹೃದಯದ ಆರೋಗ್ಯ ವಿಚಾರವಾಗಿ ಉಪನ್ಯಾಸ ನೀಡಿದ ಸಹ್ಯಾದ್ರಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಪಿ. ಕೆ. ಪೈ ಅವರು ಜೀವಕ್ಕೆ ಹೃದಯ ಬೇಕು. ಜೀವಂತಿಕೆಗೆ ಹೃದಯವಂತಿಕೆ ಇರಬೇಕು. ಹೃದಯ ಕಾಪಾಡಿಕೊಳ್ಳಲು ಅಗತ್ಯ ಜಾಗೃತಿ ಬೇಕು. ತಾಯಿ ಉದರದಲ್ಲಿ ಬ್ರೂಣಕ್ಕೆ ನಾಲ್ಕು ವಾರವಾದಗಿಂದ ಅದು ಕೆಲಸ ಮಾಡಲು ಶುರುಮಾಡಿದ್ದು ಕೊನೆಗೆ ಇಹಲೋಕ ತ್ಯಜಿಸುವ ವರೆಗೆ ಅದು ಮಾಡುವ ಕಾರ್ಯಕ್ರಮವನ್ನು ವಿವರಿಸಿ ಜೋಪಾನವಾಗಿ ನಿರ್ವಹಣೆ ಮಾಡುವ ಹುಟ್ಟುಗಳನ್ನು ವಿವರಿಸಿದರು.
Kannada Sahitya Parishad District Committee ಡಾ. ಹೆಚ್. ಶಿವಲಿಂಗಪ್ಪ ಅವರು ತಮ್ಮ ತಂದೆ, ತಾಯಿ ಹೆಸರಿನಲ್ಲಿ ನೀಡಿದ್ದ ದತ್ತಿ ಲಿಂಗೈಕ್ಯ ಎಚ್ಚಪ್ಪರ ಎಚ್ಚಜ್ಜ ಮತ್ತು ಎಚ್ಚಪ್ಪರ ಹನುಮಮ್ಮ ದತ್ತಿ ಅಂಗವಾಗಿ ಮಡಿವಾಳ ಮಾಚಿದೇವರ ಆಯ್ದ ವಚನಗಳ ಕುರಿತು ಭದ್ರಾವತಿಯ ಹಿರಿಯ ಸಾಹಿತಿಗಳಾದ ಜಿ. ವಿ. ಸಂಗಮೇಶ್ವರ ಅವರು ಮಾತನಾಡಿ ವಚನಕಾರರು ನುಡಿದಂತೆ ನಡೆದವರು. ಅವರ ಬದುಕು ಆದರ್ಶವಾಗಿದೆ. ಇವತ್ತಿನ ಬದುಕು ಸಂತೆಯಲ್ಲಿನ ವ್ಯಾಪಾರದಂತಾಗಿದೆ. ಇಂತಹ ವಾತಾವರಣದಲ್ಲಿ ನಿಶ್ಚಿಂತೆಯಿಂದ ಓದುವುದೂ ಒಂದು ತಪಸ್ಸಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಕು. ಶ್ವೇತ , ಡಿ. ಗಣೇಶ್ , ಆರ್. ರತ್ನಯ್ಯ , ಪಿ. ಕೆ. ಸತೀಶ್ ಉಪಸ್ಥಿತರಿದ್ದರು.