KLive Special Article ಸಮಾಧಾನದ ಸಂಗತಿಯೆಂದರೆ ರಾಜ್ಯದ ಮತದಾರ ಸುಸ್ಥಿರ ಸರ್ಕಾರ ಬಯಸಿದ್ದಾನೆ. ಅದರಂತೆ ಕಾಂಗ್ರೆಸ್ ಪಕ್ಷಕ್ಕೆ 135
ಸ್ಥಾನಗಳು ಲಭಿಸಿವೆ.
ಸದ್ಯ ಈ ಸಾಧನೆ ದೇಶದ ಹಲವು ರಾಜ್ಯಗಳಲ್ಲಿ ಸೋತು ಸುಣ್ಣಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಂಜೀವಿನಿಯಂತಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯ ದೌರ್ಬಲ್ಯಗಳನ್ನ ಪ್ರಬಲ ಅಸ್ತ್ರವನ್ನಾಗಿಸಿತು
ಆದರೆ ಜೆಡಿಎಸ್, ಆಮ್ ಆದ್ಮಿ
ಪಕ್ಷಗಳು ತಮ್ಮದೇ ಸುಳಿಯಲ್ಲಿ
ಸಿಕ್ಕಿಕೊಂಡಂತಿದ್ದವು.
ಜೆಡಿಎಸ್ ತನ್ನ ಪ್ರಭಾವಿ ಶಾಸಕರನ್ನ ಕಳೆದುಕೊಂಡು ಒಂದು ರೀತಿ ಅನೀಮಿಕ್ ಆಯಿತು. ಹಿರಿಯರಾದ ಮಾಜಿ ಪ್ರಧಾನಿಗಳ ನುಡಿಗಳಿಗೂ ಜನ
ಕಿವಿಗೊಡಲಿಲ್ಲ. ಕುಮಾರಸ್ವಾಮಿ ಅವರೂ ತಮ್ಮ ಹಿಡಿತ ಸಡಿಲಿಸಲಿಲ್ಲ. ಅವರೊಂದಿಗೆ ಜನರಿದ್ದರು. ಅಷ್ಟೆ.ಮತಗಳಾಗಿ ಪರಿವರ್ತನೆಯಾಗಲಿಲ್ಲ.
ನಾಯಕತ್ವ ಹೇಗಿರಬೇಕು ಎಂಬುದನ್ನ ಮಾಧ್ಯಮಗಳು ಬಿಡಿಸಿ ಹೇಳಿದವು. ರಾಷ್ಟ್ರೀಯ ನಾಯಕರ ದಂಡುಗಳು ಬಂದರೂ ಪಕ್ಷಗಳಿಗೆ ಅದು ಮತಗಳಾಗಲಿಲ್ಲ.
ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಯಾಕೋ ನಮ್ಮ ರಾಜ್ಯದಲ್ಲಿ ಢಾಳಾಗಿ ನಿಲ್ಲುತ್ತಿಲ್ಲ.
ಕೇಜ್ರಿವಾಲ್ ದಾಳ ಉರುಳಿಸಲೂ ಅಸಾಧ್ಯವಾಯಿತು. ಪಕ್ಷ ಸೇರಿದ ಪ್ರಮುಖರೂ ಮತ್ತೆ ಹೊರಬಂದರು. ರಾಜ್ಯ ಮಟ್ಟದ ನಾಯಕತ್ವ ಇಲ್ಲದೇ ಆ ಪಕ್ಷ ಸೊರಗಿದೆ
ಈ ಬಾರಿಯ ಚುನಾವಣೆ
ಗ್ಯಾರಂಟಿ ಭಾಗ್ಯಗಳ ತಳಹದಿ ಮೇಲೆ ನಡೆದಿದೆ. ಪಕ್ಷಗಳ ರಾಷ್ಟ್ರೀಯ ವಿಚಾರಧಾರೆ,
ಭ್ರಷ್ಟಾಚಾರ ಇವೆಲ್ಲ ಮೇಲ್ನೋಟಕ್ಕಷ್ಟೆ. ಆದರೆ ಒಳ ರಭಸದ ಅಲೆ ಗ್ಯಾರಂಟಿ ಭಾಗ್ಯದ್ದೆ.
ಗ್ಯಾರಂಟಿ ಕಾರ್ಡ್ ಬಗ್ಗೆ ಬಹಳ ಊಹಾಪೋಹಗಳಿವೆ. ಚುನಾವಣಾ ಆಯೋಗ ಹೇಳಿವಂತೆ ಮತದಾರನಿಗೆ ಪಕ್ಷ ಅಥವಾ ವ್ಯಕ್ತಿಯಾಗಲೀ ಆಮಿಷ ಒಡ್ಡಿ ಮತ ಕೇಳಬಾರದು. ಹಾಗಾದಲ್ಲಿ ಅದು ಅನರ್ಹತೆ.
ಈಗ ಜನ ಸುಮುದಾಯದಲ್ಲಿ
ಸದ್ಯ ಗ್ಯಾರಂಟಿ ಕಾರ್ಡ ವಿತರಣೆ
ಆಮಿಷದ ವ್ಯಾಖ್ಯೆಯೊಳಗೆ ಬರುತ್ತದೆಯೆ ಎಂಬ ಚರ್ಚೆ ನಡೆಯುತ್ತಿದೆಯಂತೆ.
ಗ್ಯಾರಂಟಿ ಬಗ್ಗೆ ಈಗಾಗಲೇ ಸ್ವಂತ ಪಕ್ಷದವರೇ ಕಂಡೀಷನ್ ಅಪ್ಲೆ ಎಂಬ ರಾಗ ಎಳೆಯುತ್ತಿದ್ದಾರೆ
ಗ್ಯಾರಂಟಿಭಾಗ್ಯಗಳ ಬಗ್ಗೆ ಆಡಳಿತಾರೂಢ ಸರ್ಕಾರ ಯಾವುದೇ ಹಿಂದೇಟು, ಷರತ್ತು ಗಳ ಬಗ್ಗೆ ಹಿಂದೆ ನೋಡುವಂತಿಲ್ಲ.ಯಾಕೆಂದರೆ
ಚುನಾವಣಾ ಪ್ರಚಾರ ಸಮಯದಲ್ಲಿ ಸಿದ್ಧರಾಮಯ್ಯ
ಮತ್ತು ಡಿ.ಕೆ.ಶಿವಕುಮಾರ್ ನೀಡಿದ ಭರವಸೆಯ ಮಾತುಗಳ
ಆಡಿಯೊ ಮತ್ತು ವಿಡಿಯೋಗಳನ್ನ ಜನ ಕಾಯ್ದಿಟ್ಟುಕೊಂಡಿದ್ದಾರೆ.
ಈಗ ಮುಖ್ಯಮಂತ್ತಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ಸಭೆಯಲ್ಲೇ ಆದೇಶ ಹೊರಡಿಸುವ ಭರವಸೆ ನೀಡಿದ್ದಾರೆ.
KLive Special Article ಗ್ಯಾರಂಟಿ ..ಪಕ್ಕಾ ಆದರೆ ನಿಜಕ್ಕೂ ವಿರೋಧ ಪಕ್ಷಗಳು
ಇನ್ನೂ ಎರಡು ಅವಧಿಗೆ ಮಕಾಡೆಯಾಗುತ್ತವೆ. ಬರಲಿರುವ ಸಂಸದೀಯ ಚುನಾವಣೆಯಲ್ಲಿ
ಕಾಂಗ್ರೆಸ್ ತನ್ನ ಸ್ಥಿತಿ ಉತ್ತಮಪಡಿಸಿಕೊಳ್ಳುತ್ತದೆ.