Sri Kudali Moola Sharada Peetam ಶ್ರೀ ಕ್ಷೇತ್ರ ಕೂಡಲಿ ಮಹಾಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರಿಂದ ದತ್ತರಾಜ ದೇಶಪಾಂಡೆ ಅವರ ಸನ್ಯಾಸ ಪೂರ್ವಕ ಶಿಷ್ಯ ಪರಿಗ್ರಹಣ ಇಂದಿನಿಂದ ( ಮೇ.18) ಮೇ 22ರ ವರೆಗೆ ನಡೆಯಲಿದೆ. ನೂತನವಾಗಿ ಆಯ್ಕೆಯಾಗಿರುವ ದತ್ತರಾಜ್ ದೇಶಪಾಂಡೆ ಅವರ ಕಿರು ಪರಿಚಯ ಇಲ್ಲಿದೆ..
ಹೆಸರು: ದತ್ತರಾಜ್ ದೇಶಪಾಂಡೆ.
ತಂದೆ ತಾಯಿ. ಅಶೋಕ ರಾವ್ ಹಾಗೂ ಸೀತಾಲಕ್ಷ್ಮಿ ದೇಶಪಾಂಡೆ.
ಜನ್ಮಸ್ಥಾನ : ಧಾರವಾಡ
ಅಧ್ಯಯನ: ಋಗ್ವೇದ ಸಲಕ್ಷಣ ಘನಾಂತ, ಯಜುರ್ವೇದ ಹಾಗೂ ಸಾಮವೇದ ಮೂಲಾಂತ.
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ ಎಂಬ ಆರು ವೆದಾಂಗಗಳು ಸಂಪೂರ್ಣ.
ಧರ್ಮಶಾಸ್ತ್ರ, ಹಾಗೂ ವೇದಾಂತ ಶಾಸ್ತ್ರ, ಜ್ಞಾನೇಶ್ವರಿ, ದಾಸಬೋಧ ಮುಂತಾದ ಮರಾಠೀ ಧಾರ್ಮಿಕ ಗ್ರಂಥಗಳ ಅಧ್ಯಯನ.
ಗುರುಗಳು:
ಋಗ್ವೇದ: ಮಾರ್ತಾಂಡಪುರ ಶಂಕರ ಭಟ್ ಘನಪಾಠಿಗಳು.
ವೆಗಾಂಗಗಳು: ಶ್ರೀ ನರೇಂದ್ರ ಕಾಪರೆ
ಯಜುರ್ವೇದ : ರಾಮಚಂದ್ರ ಘನಪಾಠಿಗಳು, ಚೆನ್ನೈ
ಸಾಮವೇದ: ವಿಜಯ್ ಕುಮಾರ್ ಶರ್ಮಾ, ಕಾಶಿ.
ಶಾಸ್ತ್ರಗಳು: ಶ್ರೀ ಜ್ಞಾನೇಂದ್ರ ಸಪಕೋಟಾ, ಕಾಶಿ
2004 ರಿಂದ 2010 ರ ವರೆಗೆ ಬೀದರ್ ಜಿಲ್ಲೆಯ ಮಾಣಿಕ್ಯ ಪ್ರಭು ಸಂಸ್ಥಾನದಲ್ಲಿ ಅಧ್ಯಾಪಕನಾಗಿ ಹಾಗೂ ಮಾಣಿಕ ರತ್ನ ಪತ್ರಿಕೆಯ ತೆಲುಗು ಅವತರಣಿಕೆಯ ಸಂಪಾದಕನಾಗಿ ಕೆಲಸ.
ನಂತರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಸ್ವರ್ಣ ಪದಕ.
ಇಂಡಾಲಜಿ, ವೈದಿಕ ವಿಜ್ಞಾನ, ಡಾಕ್ಯುಮೆಂಟರಿ ಫಿಲ್ಮ್ ನಿರ್ಮಾಣ, ಫೋಟೋಗ್ರಫಿ, ಆರ್ಕಿಟೆಕ್ಚರ್, ಕಂಪ್ಯೂಟರ್, ಪುಸ್ತಕ ಪ್ರಕಾಶನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಅನುಭವ.
Sri Kudali Moola Sharada Peetam ಮದ್ರಾಸ್ ಹಾಗೂ ಮುಂಬೈ ಜೊತೆ ಅನೇಕ ಪ್ರಾಜೆಕ್ಟ್ ಗಳ ನಿರ್ವಹಣೆ ಹಾಗೂ ಸೆಮಿನಾರ್ ಗಳ ಆಯೋಜನೆಯ ಅನುಭವ.
2018 ರಿಂದ ಭಾರತೀಯ ಶಿಕ್ಷಣ ಮಂಡಲದ ಪೂರ್ಣಾವಧಿ ಕಾರ್ಯಕರ್ತನಾಗಿ ಐದು ವರ್ಷಗಳ ಕಾಲ ದೇಶದೆಲ್ಲೆಡೆ ಸಂಚಾರ, ಸಾವಿರಕ್ಕೂ ಹೆಚ್ಚು ಗುರುಕುಲಗಳಲ್ಲಿ ಭೇಟಿ, ಸಂಘಟನೆ, ನೂತನ ಗುರುಕುಲಗಳ ನಿರ್ಮಾಣ, ಬೃಹತ್ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿ.
4 ವಿಶ್ವವಿದ್ಯಾಲಯಗಳ ಬೋರ್ಡ್ ಆಫ್ ಸ್ಟಡೀಸ್ ಸದಸ್ಯ.
ರಾಷ್ಟ್ರ ಮಟ್ಟದ ವೈದಿಕ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯ.
10 ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಹಾಗೂ 5 ಭಾಷೆಗಳಲ್ಲಿ ಬರವಣಿಗೆ.
9 ಪುಸ್ತಕಗಳು ಹಾಗೂ 300ಕ್ಕೂ ಹೆಚ್ಚು ಲೇಖನಗಳು, ರಿಸರ್ಚ್ ಪೇಪರ್ ಗಳು ಪ್ರಕಟಿತ.