Saturday, December 6, 2025
Saturday, December 6, 2025

Happy Mother’s Day 2023 ಅಮ್ಮ ದೇವರಿಗಿಂತ..?

Date:

Happy Mother’s Day 2023 ಸಮಸ್ತ ತಾಯಂದಿರಿಗೂ ಮತ್ತು ನಿಮಗೂ “ವಿಶ್ವ ಅಮ್ಮಂದಿರ ದಿನದ ಹಾರ್ದಿಕ ಶುಭಕಾಮನೆಗಳು”

ಇದು ಮಾತೆಯ ಭವ್ಯ ಮಹಿಮೆಯ ಮಾರ್ದನಿಸುವ ಕವಿತೆ. ಮಾತೃಪ್ರಭೆಯ ದಿವ್ಯ ಹೊಂಗಿರಣಗಳ ಬಿಂಬಿಸುವ ಭಾವಪ್ರಣತೆ. ಅಮ್ಮನೆಂಬ ಅಪೂರ್ವ ಜೀವಕ್ಕೆ, ಮುಕ್ಕೋಟಿ ದೇವತೆಗಳಿಗಿಂತ ಮಿಗಿಲಾದ ದೈವಕ್ಕೆ ಅಂತರಾಳದ ಅನಂತ ನಮನಗಳೊಂದಿಗೆ ಅರ್ಪಿಸಿದ ಅಕ್ಷರ ಪ್ರಣತೆ” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಅಮ್ಮ ದೇವರಿಗಿಂತ..?

ನವಮಾಸ ಒಡಲೊಳಗೆ ಹೊತ್ತವಳು
ನನ್ನ ಹುಟ್ಟಿಗಾಗಿ ಹಂಬಲಿಸಿ ತಪಿಸಿ
ನನಗಾಗಿ ಜೀವವನೇ ಪಣವಾಗಿಟ್ಟು
ಸಹಸ್ರ ನೋವ ಸಹಿಸಿ ಹೆತ್ತವಳು.
ನನಗಾಗಿ ಸತ್ತು ಸತ್ತು ಹುಟ್ಟಿದವಳು
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ಹೊತ್ತೊತ್ತಿಗೆ ತುತ್ತಿಟ್ಟು ಸಲಹಿದವಳು
ನನ್ನಯ ತೇಗು ತೃಪ್ತಿಯಲಿ ತನ್ನೆಲ್ಲಾ
ಹಸಿವು ಸಂಕಟ ಮರೆತು ನಕ್ಕವಳು
ಒಮ್ಮೊಮ್ಮೆ ದೇವರನೇ ಉಪವಾಸವಿಟ್ಟು
ನನ್ನುದರ ನರಳದಂತೆ ತಣಿಸಿದವಳು.!
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ನನಗೆ ಬಟ್ಟೆಯುಡಿಸಿ ಸಂಭ್ರಮಿಸಿದವಳು
ಬಣ್ಣ ಬಣ್ಣದ ವಸ್ತ್ರ ತೊಡಿಸಿದವಳು
ಬಗೆ ಬಗೆಯಾಗಿ ನನ್ನ ಸಿಂಗರಿಸಿದವಳು
ಕೃಷ್ಣನಾ ವೇಷ ಭೂಷಣಗಳ ಹಾಕಿ
ನನ್ನನ್ನೇ ದೇವರಾಗಿಸಿ ಬೀಗಿದವಳು
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

ಮಳೆಗೆ ಸೆರಗು ಹೊದೆಸಿ ರಕ್ಷಿಸಿದವಳು
ಚಳಿಗೆ ಮಡಿಲೊಳಗಿಟ್ಟು ಪೊರೆದವಳು
ಗಾಳಿಗೆ ಎದೆಗವುಚಿಕೊಂಡು ನಿಂತವಳು
ಬೆಂಕಿ ಸೋಕದಂತೆ ನೋಡಿಕೊಂಡವಳು
ಕತ್ತಲಲಿ ಬೆಚ್ಚದಂತೆ ಇರುಳೆಲ್ಲ ಕಾದವಳು
ಅಮ್ಮ ದೇವರಿಗಿಂತ ಹೆಚ್ಚಂತೆ ಹೌದೆ.?

Happy Mother’s Day 2023 ಕೇಳುವುದಾದರೂ ಯಾರನ್ನು ಹೇಳಿ.?
ಅವಳನ್ನೇ ಕೇಳಿದರೆ “ಮುದ್ದು ಗೋಪಾಲ”
ಎಂದು ಬೊಚ್ಚು ಬಾಯಗಲಿಸಿ ನಗುತ್ತಾಳೆ
ಯಶೋಧೆ-ಕೃಷ್ಣರ ಚಿತ್ರ ತೋರಿಸುತ್ತಾಳೆ
ನಡುಗುವ ಕರಗಳಿಂದ ಶಿರ ನೇವರಿಸುತ್ತಾಳೆ
ನರನರದಲ್ಲು ಸಹಸ್ರ ವರ ಸ್ಫುರಿಸುತ್ತಾಳೆ.!

ಕವಿ: ಎ.ಎನ್.ರಮೇಶ್. ಗುಬ್ಬಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...