Karnataka Assembly Election Results 2023 ಪ್ರತಿ ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಕಳೆದ ವಿಧಾನಸಭಾ ಚುನಾವಣೆಯ ಲ್ಲಿ ಬಿಜೆಪಿ ಪಕ್ಷ ಗೆಲುವನ್ನು ಸಾಧಿಸಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ.
ಪ್ರತಿ ಚುನಾವಣೆಯಲ್ಲಿಯೂ ಹೊಸ ಹೊಸ ಪ್ರಯೋಗಗಳ ಮುಖಾಂತರ ಟ್ರೆಂಡ್ ಸೃಷ್ಟಿಸುತ್ತಿದ್ದಂತಹ ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆಗೆ ಬಳಸಿದ ಕೆಲವು ಪ್ರಯೋಗಗಳು ಕೈ ಹಿಡಿದಿಲ್ಲ.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 75 ಹೊಸ ಮುಖಗಳಿಗೆ ಅವಕಾಶಗಳನ್ನು ನೀಡಿತ್ತು. ಈ ಮುಖಾಂತರ ಹೊಸ ತಂಡವನ್ನು ರೂಪಿಸಲು ಒಂದು ಸಾಹಸಕ್ಕೆ ಕೈ ಹಾಕಿತ್ತು. ಆದರೆ ಈ ಪೈಕಿಯಲ್ಲಿ 13 ಜನ ಮಾತ್ರ ಗೆಲುವನ್ನು ಸಾಧಿಸಿದ್ದಾರೆ.
ಶ್ರೀ. ಕೆ ಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದಂತಹ ಶಿವಮೊಗ್ಗ ಕ್ಷೇತ್ರದಿಂದ ಚೆನ್ನಬಸಪ್ಪ ಅವರನ್ನು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಪ್ರಯೋಗ ಫಲ ಲಭಿಸಿದೆ. ಆದರೆ ಬಹುಪಾಲು ಹೊಸ ಮುಖಗಳನ್ನು ಪರಿಚಯಿಸಿದ್ದರಿಂದ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ.
ಇನ್ನೊಂದು ಕಡೆ ಕರಾವಳಿಯಲ್ಲಿ ಬಿಜೆಪಿಯ ಸಂಘಟನಾತ್ಮಕ ಕೇಂದ್ರವೆಂದೇ ಪ್ರಸಿದ್ಧಿ ಪಡೆದ ಪುತ್ತೂರಿನ ಕ್ಷೇತ್ರದಲ್ಲಿ ಕಮಲ ಪಕ್ಷ ಮುದುಡಿದೆ.
ಈ ಹಿಂದೆ ರಾಜಕೀಯ ಪಕ್ಷವು ಸಾಮಾಜಿಕ ಜಾಲತಾಣವನ್ನು ಗರಿಷ್ಠ ಪ್ರಮಾಣದಲ್ಲಿ ಹೇಗೆಲ್ಲಾ ಬಳಸಬಹುದು ಎಂಬುದಕ್ಕೆ ಬಿಜೆಪಿ ಮಾದರಿ ಎಂಬಂತಿತ್ತು. ರಾಜ್ಯದಲ್ಲಿ ಹಿಂದಿನ ಚುನಾವಣೆಗಳಲ್ಲಿಯೂ ಅದನ್ನು ಸಾಬೀತುಪಡಿಸಿತ್ತು. ಈ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣವನ್ನು ಕಾಂಗ್ರೆಸ್ ಲೀಲಾಜಾಲವಾಗಿ ಬಳಸಿಕೊಂಡು ಪಕ್ಷದ ಪರ ಅಲೆ ಸೃಷ್ಟಿಸಿಕೊಳ್ಳಲು ಯಶಸ್ವಿಯಾಗಿರುವುದು ವಿಶೇಷವೇ ಸರಿ.
ಪೇ ಸಿಎಂ ಎಂಬ ಅಭಿಯಾನ ಕಾಂಗ್ರೆಸ್ ಆರಂಭಿಸಿ, ನಿರೀಕ್ಷೆಗೂ ಮೀರಿ ಯಶಸ್ಸನ್ನ ಕಂಡಿದೆ.
Karnataka Assembly Election Results 2023 ಮಾಧ್ಯಮಗಳಲ್ಲಿ 40% ಸರ್ಕಾರದ ವಿರುದ್ಧ ಅನೇಕ ಜಾಹೀರಾತುಗಳ ಸೃಷ್ಟಿಯಾಗಿ ದ್ದವು. ಬಿಜೆಪಿ ಸರ್ಕಾರದ ಅನೇಕ ವೈಫಲ್ಯಗಳ ಬಗ್ಗೆ ದಿನನಿತ್ಯವೂ ಹಲವಾರು ಪೋಸ್ಟ್ ಗಳ ಮುಖಾಂತರ ಜನರಿಗೆ ಮನನ ಮಾಡಿಕೊಡುವ ಪ್ರಯತ್ನವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ನಿರ್ವಹಿಸುತ್ತಲೇ ಬಂತು. ಈ ಎಲ್ಲಾ ಅಂಶಗಳು ನೆಟ್ಟಿಗರ ಮೇಲೆ ಪರಿಣಾಮವನ್ನು ಬೀರಿತು. ಆದ್ದರಿಂದ ಈ ಬಾರಿ ಕಮಲ ರಾಜ್ಯದಲ್ಲಿ ಮುದುಡಿರಬಹುದು ಎಂಬುದು ಕೆಲವರ ಪ್ರಶ್ನೆ… ಬಿಜೆಪಿ ಪಕ್ಷದ ಕೆಲವೊಂದು ಎಡವಟ್ಟುಗಳಿಂದಲೇ ಈ ಬಾರಿ ಗೆಲುವಿನ ಪತಾಕೆ ಹಾರಿಸಲು ಹಿಂದೆಟು ಹಾಕಿದೆ.