Saturday, December 6, 2025
Saturday, December 6, 2025

Assembly Election ಮತದಾನ ಹಲವೆಡೆ ಹಬ್ಬ ಕೆಲವೆಡೆ ಅಬ್ಬಬ್ಬಾ!

Date:

Assembly Election ಕರ್ನಾಟಕ ಚುನಾವಣೆ 2023ರ ಮತದಾನ ಪ್ರಕ್ರಿಯೆ ಹಲವು ವಿಭಿನ್ನ ವಾತಾವರಣಕ್ಕೆ ಸಾಕ್ಷಿಯಾಗಿದೆ.

ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ಸಾಹ ಇಮ್ಮಡಿಯಾಗಿತ್ತು. ಮತದಾನ ಬಹಿಷ್ಕಾರದಂತಹ ಘಟನೆ ಕೂಡ ನಡೆದವು.

ಗ್ರಾಮೀಣ ಪ್ರದೇಶದ ಮತದಾರರಿಗೆ ವಯಸ್ಸು ಮತ್ತು ಹವಾಮಾನ ಅಡೆತಡೆಗಳು ಕಾಳಜಿಯ ವಿಷಯವಾಗಿರಲಿಲ್ಲ. ಮತದಾನ ಪ್ರಕ್ರಿಯೆಯು ಯಾವುದೇ ಹಬ್ಬಕ್ಕಿಂತ ಕಡಿಮೆಯಿರಲಿಲ್ಲ.. ಜನರು ಹವಾಮಾನ, ವಯಸ್ಸು, ಆರೋಗ್ಯ ಇದಾವುದನ್ನೂ ಲೆಕ್ಕಿಸದೇ ಮತಗಟ್ಟೆಗಳತ್ತ ಧಾವಿಸಿ ಗಂಟೆಗಟ್ಟಲೆ ಕಾದು ಮತದಾನ ಮಾಡಿದ್ದಾರೆ.

ಗ್ರಾಮಾಂತರ ಪ್ರದೇಶಗಳಾದ ಮಾಗಡಿ ಗ್ರಾಮ, ತಾವರೆಕೆರೆ, ಸಾವನದುರ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತದಾನ ಆರಂಭವಾದಾಗಿನಿಂದ ಸಂಜೆಯವರೆಗೂ ಉತ್ತಮ ಮತದಾನವಾಗಿತ್ತು.

ಅಂತೆಯೇ ಇದಕ್ಕೆ ವ್ಯತಿರಿಕ್ತ ಎಂಬಂತೆ ಒಂದರೆಡು ಭಾಗದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದಂತಹ ಘಟನೆಗಳೂ ಕೂಡ ವರದಿಯಾಗಿವೆ.

ಪುರುಷರು ಮತ್ತು ಮಹಿಳೆಯರು ಮರಗಳ ನೆರಳಿನಲ್ಲಿ ಕುಳಿತು ಮತದಾನ ಮಾಡಲು ತಾಳ್ಮೆಯಿಂದ ಕಾಯುತ್ತಿದ್ದರು. ಮತದಾನಕ್ಕೆ ಸಮಯ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲವರು ತಮ್ಮ ತಮ್ಮ ಆಹಾರವನ್ನೂ ಮೊದಲೇ ಪ್ಯಾಕ್ ಮಾಡಿಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

Assembly Election ಆದರೆ ಮತದಾನ ಪ್ರಮಾಣ ಕಡಿಮೆ ಇರುವ ನಗರ ಪ್ರದೇಶಗಳಲ್ಲಿ ಕೊನೆಯ ಕ್ಷಣದಲ್ಲೂ ಪಕ್ಷದ ಕಾರ್ಯಕರ್ತರ ಪ್ರಚಾರ ಜೋರಾಗಿತ್ತು. ಬೂತ್ಗಳಿಗೆ ಬರುವ ಮತದಾರರ ಮೇಲೆ ಪ್ರಭಾವ ಬೀರಲು ಪಕ್ಷದ ಕಾರ್ಯಕರ್ತರು ಎಲ್ಲ ರೀತಿಯ ಕ್ರಮಗಳನ್ನು ಬಳಸಿಕೊಂಡರು.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮತದಾರರು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಅಷ್ಟೇನೂ ಆಸಕ್ತಿ ತೋರಿದಂತೆ ಕಾಣಲಿಲ್ಲ. ಬೂತ್ಗಳಲ್ಲಿದ್ದ ಪೊಲೀಸ್, ಅರೆಸೇನಾಪಡೆ ಮತ್ತು ಚುನಾವಣಾಧಿಕಾರಿಗಳು ಇದೇ ರೀತಿಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಈ ಹಿಂದೆ ಕೆಂಗೇರಿಯಲ್ಲಿ ನಿಯೋಜನೆಗೊಂಡಿದ್ದ ತಾವರೆಕೆರೆ ಮತಗಟ್ಟೆ ಅಧಿಕಾರಿಯೊಬ್ಬರು, ”ನಾನು ಕೆಲಸ ಮಾಡಿದ ಇತರ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿ ಮತದಾರರ ಶೇಕಡಾವಾರು ಉತ್ತಮವಾಗಿದೆ. ಮಧ್ಯಾಹ್ನದವರೆಗೆ ಮತದಾರರ ಸಂಖ್ಯೆ ಆಶಾದಾಯಕವಾಗಿತ್ತು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...