Tuesday, April 22, 2025
Tuesday, April 22, 2025

Vidyaganapati Seva Sanga Shimogga ಮೇ 15 ರಿಂದ 23 ರವರೆಗೆ ವಿದ್ಯಾಗಣಪತಿ ಸೇವಾ ಸಂಘದಿಂದ ಸಂಗೀತೋತ್ಸವ

Date:

Vidyaganapati Seva Sanga Shimogga ಶಿವಮೊಗ್ಗ ನಗರದ ಎಸ್‌ಪಿಎಂ ರಸ್ತೆಯ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ಸವ ಸಂಗೀತ ಮಾಲಿಕೆಯಲ್ಲಿ ಮೇ. 15ರಿಂದ 23 ರವರೆಗೆ ನಾಡಿನ ಹೆಸರಾಂತ ಸಂಗೀತಗಾರರಿಂದ ಹಿಂದೂಸ್ಥಾನಿ ಹಾಗೂ ಕರ್ನಾಟಕ ಶಾಸ್ರ್ತೀಯ ಸಂಗೀತ ಕಾರ್ಯಕ್ರಮಗಳನ್ನು ಶ್ರೀ ಮಾರಿಕಾಂಬ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ಪ್ರತಿನಿತ್ಯ 05:30ಕ್ಕೆ ಈ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮೊದಲಿಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹದಾಯಕವಾಗಿ ಅವಕಾಶ ನೀಡಲಾಗುತ್ತಿದೆ. ಒಂಭತ್ತು ದಿನಗಳ ಕಾರ್ಯಕ್ರಮಗಳ ವಿವರ ಇಂತಿದೆ.

ಮೇ. 15ರಂದು ಮಂಗಳ ಅಶೋಕ್‌ರವರಿಂದ ವೀಣಾವಾದನಕ್ಕೆ ವಿದ್ಯಾ ಅಶೋಕ್ ಕುಮಾರ್‌ರವರ ಮೃದಂಗ, ಎ. ಆದಿತ್ಯರವರಿಂದ ಘಟಂ ಸಹಕಾರವಿದೆ. ನಂತರ ಬೆಂಗಳೂರಿನ ಉಡುಪಿ ಅಭಿ ಜ್ಞ್ ರಾವ್‌ರವರಿಂದ ಹಾಡುಗಾರಿಕೆಯಿದ್ದು, ಮಧು ಮುರಳಿರವರಿಂದ ವಯೋಲಿನ್, ಶೃಂಗೇರಿಯ ಪನ್ನಗ ಶರ್ಮನ್‌ರವರಿಂದ ಮೃದಂಗ ಸಹಕಾರವಿದೆ. ಮೇ. 16ರಂದು ಸಾಕೇತ್ ಶಾಸ್ರ್ತೀಯ ಮತ್ತು ವೃಂದದವರಿಂದ ಹಿಂದೂಸ್ಥಾನಿ ಗಾಯನ, ನಂತರ ಪಂಡಿತ್ ಸಿದ್ಧಾರ್ಥ್ ಬೆಳ್ಮಣ್ಣುರವರ ಹಿಂದೂಸ್ಥಾನಿ ಗಾಯನಕ್ಕೆ ತೇಜಸ್ ಕಾಟೋಚಿರವರಿಂದ ಹಾರ್ಮೋನಿಯಂ, ಕಾರ್ತಿಕ್ ಭಟ್‌ರವರಿಂದ ತಬಲಾ ವಾದನವಿದೆ.

ಮೇ. 17ರಂದು ಅದಿತಿ ಎಂ. ಎಸ್. ಮತ್ತೂರುರವರಿಂದ ಹಾಡುಗಾರಿಕೆಯಿದ್ದು, ನಂತರ ಅಮೇರಿಕಾದ ರಮ್ಯಾ ಸಾರಿಕಾರವರ ಹಾಡುಗಾರಿಕೆಗೆ ಹೊಸಹಳ್ಳಿ ರಘುರಾಮ್‌ರವರಿಂದ ವಯೋಲಿನ್, ನಿಕ್ಷಿತ್ ಮತ್ತೂರುರವರಿಂದ ಮೃದಂಗ ಹಾಗೂ ಶರತ್ ಕೌಶಿಕ್‌ರವರಿಂದ ಘಟಂ ಪಕ್ಕವಾದ್ಯವಿದೆ. ಮೇ. 18 ರಂದು ಟಿ. ವಿ. ಶಿಲ್ಪ ಮತ್ತು ತಂಡದವರಿಂದ ಹಾಡುಗಾರಿಕೆ, ನಂತರ ತ್ರಿಚ್ಯೂರ್ ಸಹೋದರರಾದ ಶ್ರೀಕೃಷ್ಣ ಮೋಹನ್, ರಾಮ್‌ಕುಮಾರ್ ಮೋಹನ್‌ರವರಿಂದ ಯುಗಳ ಹಾಡುಗಾರಿಕೆ.

Vidyaganapati Seva Sanga Shimogga ಮತ್ತೂರು ಶ್ರೀನಿಯವರಿಂದ ವಯೋಲಿನ್, ಪ್ರಶಾಂತ್‌ರವರಿಂದ ಮೃದಂಗ ಸಹಕಾರವಿದೆ.
ಮೇ. 19ರಂದು ಬೆಂಗಳೂರಿನ ನಯನ ಕಾರಂತ್‌ರವರಿಂದ ಹಾಡುಗಾರಿಕೆ, ನಂತರ ರಾಜೇಶ್ವರಿ ನಾಗೇಂದ್ರ ಪ್ರಕಾಶ್ ಹೊಸಹಳ್ಳಿರವರಿಂದ ಹಾಡುಗಾರಿಕೆಗೆ ಜನಾರ್ಧನ್‌ವರಿಂದ ವಯೋಲಿನ್, ಹೊಸಹಳ್ಳಿ ಸಚಿನ್ ಪ್ರಕಾಶ್‌ರವರಿಂದ ಮೃದಂಗ, ಕಾರ್ತೀಕ್ ಬೆಂಗಳೂರುರವರಿಂದ ಖಂಜಿರ ಪಕ್ಕವಾದ್ಯವಿದೆ.

ಮೇ. 20ರಂದು ನಗರದ ಶ್ರೀ ಗುರುಗುಹ ಸಂಗೀತ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಪರಮಹಂಸ ಸದಾಶಿವ ಬ್ರಹ್ಮೇಂದ್ರರವರ ರಚನೆಯ ಆಧಾರಿತ ಅದ್ವೈತ ಸದಾಶಿವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಪಕ್ಕವಾದ್ಯದಲ್ಲಿ ಮೈಸೂರಿನ ಪಿ. ಎಸ್. ಶ್ರೀಧರ್‌ರವರಿಂದ ಮೃದಂಗ, ಬೆಂಗಳೂರಿನ ಶ್ರೇಯಸ್‌ರವರಿಂದ ಘಟಂ, ರಾಘವೇಂದ್ರ ಪ್ರಭುರವರಿಂದ ತಬಲಾ ಸಹಕಾರವಿದ್ದು, ವಿಶ್ರಾಂತ ಅಧ್ಯಾಪಕ ಎಂ.ಎಸ್. ವಿನಾಯಕ ನಿರೂಪಿಸಲಿದ್ದಾರೆ.

ಮೇ. ರ21ರಂದು ಮಹತಿ ಭಟ್‌ರಿಂದ ಹಾಡುಗಾರಿಕೆ, ನಂತರ ಮೈಸೂರಿನ ಆರ್.ಕೆ. ಪದ್ಮನಾಭರವರಿಂದ ವೀಣಾವಾದನ, ಪಿ. ಎಸ್. ಶ್ರೀಧರರವರಿಂದ ಮೃದಂಗ, ಶ್ರೇಯಸ್‌ರವರಿಂದ ಘಟಂ ಸಹಕಾರವಿದೆ. ಮೇ. 22ರಂದು ಚಿನ್ಮಯಿ ನಾಗೇಂದ್ರ, ಮಹತಿ ನಾಗೇಂದ್ರರವರಿಂದ ಯುಗಳ ಹಾಡುಗಾರಿಕೆ, ನಂತರ ಬೆಂಗಳೂರಿನ ಸಾನ್ವಿ ಕೊಪ್ಪರವರಿಂದ ಹಾಡುಗಾರಿಕೆಗೆ ಪ್ರಾದೇಶಾಚಾರ್ಯರಿಂದ ವಯೋಲಿನ್, ಎಂ. ಕೆ. ಶ್ರೀನಿರವರಿಂದ ಮೃದಂಗ, ಗುರುಮೂರ್ತಿರವರಿಂದ ಮೌರ್ಸಿಂಗ್ ಪಕ್ಕವಾದ್ಯವಿದೆ.

ಮೇ. 23ರಂದು ಭವಾನಿ ಕಲ್ಕೂರುವರಿಂದ ಹಾಡುಗಾರಿಕೆ ನಂತರ, ಚನೈ ಶೃತಿ ಎಸ್. ಭಟ್‌ರವರಿಂದ ಹಾಡುಗಾರಿಕೆಯಿದ್ದು, ಶ್ರೀಲಕ್ಷ್ಮಿ ಎಸ್. ಭಟ್‌ರವರಿಂದ ವಯೋಲಿನ್, ರಕ್ಷಿತ್ ಶರ್ಮರಿಂದ ಮೃದಂಗ, ಎಸ್. ಉತ್ತಮ್‌ರವರಿಂದ ಘಟಂ ಪಕ್ಕವಾದ್ಯವಿದೆ.

ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....

Dr. Raj Kumar ಡಾ.ರಾಜ್ ಅಭಿನಯದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

Dr. Raj Kumar ವರನಟ ಡಾ ರಾಜ್ ಕುಮಾರ್ ರವರ ಜನ್ಮದಿನಾಚರಣೆ...

S.N.Chennabasappa ಜನಿವಾರ ತೆಗೆಸಿದ ಪ್ರಕರಣ, ಘಟನೆ‌ಮುಂದೆ ತಪ್ಪಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿಪ್ರ ಸಂಘಟನೆಯ ಮನವಿ

S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ...