Assembly Election ಮತದಾನ ಪ್ರಜಾಪ್ರಭುತ್ವದ ಗಟ್ಟಿಯಾದ ಧ್ವನಿ. ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ನಾವು ಚಲಾಯಿಸು ತ್ತೇವೆ. ಮತದಾನ ಎಂಬುವುದು ಒಂದು ರೀತಿಯ ಹಬ್ಬದ ಹಾಗೆ. ಮತದಾನ ತಪ್ಪದೇ ಮಾಡಿ ಎಂದು ಹಲವಾರು ಸಂಘಟನೆಗಳು ಕರೆ ನೀಡುತ್ತಲೇ ಬಂದಿವೆ. ಆದರೂ ಸಹ ಹಳ್ಳಿಗೆ ಹೋಲಿಸಿದರೆ ನಗರಗಳಲ್ಲಿ ಮತದಾನದ ಪ್ರಮಾಣ ಕಡಿಮೆ.
ಪಟ್ಟಣದಲ್ಲಿರುವವರು ಅಕ್ಷರಸ್ಥ ರಾಗಿದ್ದರೂ ಸಹ ಮತದಾನವನ್ನು ಮಾಡಲು ಮತಗಟ್ಟೆಗಳಿಗೆ ಹೋಗೋದಿಲ್ಲ. ಹೀಗಿರಬೇಕಾದರೆ, ತನ್ನ ಮದುವೆ ಇಂದೇ ಇರುವ ಒಬ್ಬ ವರ ಮತದಾನ ಚಲಾವಣೆ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ಈ ರೀತಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂಬ ಚುನಾವಣಾ ಆಯೋಗದ ಪ್ರಯತ್ನಕ್ಕೆ ಸಾತ್ ನೀಡಿದ್ದಾರೆ.
Assembly Election ಈ ಅಪರೂಪದ ಘಟನೆ ಸಾಗರದ ಶಿವಪ್ಪ ನಗರದ ಬಡಾವಣೆಯ ನಾರಾಯಣ್ ಅವರ ಪುತ್ರ ವಿನೋದ್ ಕುಮಾರ್ ಎಂಬುವರು ಮದುವೆಯ ವರನಾಗಿದ್ದಾರೆ. ಮದುವೆಗೆ ಹೊರಡುವ ಮುನ್ನ ಮತವನ್ನು ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.
ವಿನೋದ್ ಅವರು ರಿಪ್ಪನ್ ಪೇಟೆಯ ಪಲ್ಲವಿ ಎಂಬುವರನ್ನು ಇಂದು ಮದುವೆಯಾಗುತ್ತಿದ್ದಾರೆ. ಇವರ ವಿವಾಹದ ದಿನಾಂಕ ಚುನಾವಣೆಯ ದಿನಾಂಕಕ್ಕೂ ಮುನ್ನವೇ ನಿರ್ಧಾರವಾಗಿತ್ತು. ತನ್ನ ಮದುವೆಯಿಂದಾಗಿ ತನ್ನ ಪ್ರಜಾಪ್ರಭುತ್ವದ ಹಕ್ಕು ಕೆಡಬಾರದು ಎಂದು ತನ್ನ ಕುಟುಂಬಸ್ಥರೊಂದಿಗೆ ವಿವಾಹದ ದಿನ ಬೆಳಿಗ್ಗೆ ಮತ ಚಲಾವಣೆ ಮಾಡಿದ್ದಾರೆ.
ಈ ಮೂಲಕ ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ನಾವು ನಿಷ್ಠೆಯಿಂದ ಪಾಲಿಸಬೇಕು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ.
-ರಚನಾ