kannada sahitya parishath Shivamogga ಬುದ್ಧನನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದು, ಬುದ್ಧನ ಪ್ರತಿಮೆಯ ಮುಂದೆ ನಿಂತು ಆ ಮುಖದಲ್ಲಿನ ಪ್ರಶಾಂತತೆ ಎಲ್ಲರೊಳಗೂ ಬೆಳಕಾಗುವ ಶಕ್ತಿ ಹೊಂದಿದೆ ಎಂದು ಪ್ರಾಧ್ಯಾಪಕ ಡಾ. ಸಿರಾಜ್ ಅಹಮದ್ ಹೇಳಿದರು.
ಶಿವಮೊಗ್ಗದ ಶಕ್ತಿಧಾಮ ಬಡಾವಣೆಯ ಎರಡನೇ ಹಂತದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಶಕ್ತಿ ಧಾಮ ಬಡಾವಣೆಯ ಎರಡನೇ ಹಂತದ ನಿವಾಸಿಗಳ ಸಂಘದ ಸಹಯೋಗದಲ್ಲಿ 212ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಮತ್ತು ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬುದ್ಧನ ತತ್ವಗಳನ್ನು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಸ್ವಯಂ ವಿವೇಕ ಪಡೆಯಲು ಸಾಧ್ಯ. ಅವರೇ ಹೇಳುವಂತೆ ನೀನು ಯಾರ ಅನುಯಾಯಿ ಆಗಬೇಕಿಲ್ಲ. ನಿನ್ನನ್ನು ನೀನು ಅರಿಯುವಂತಾದರೆ ಅದೇ ಮೋಕ್ಷಪ್ರಾಪ್ತಿಯ ದಾರಿ ಆಗಲಿದೆ. ಸ್ವಯಂ ಅರಿವು ಪಡೆಯಬೇಕು ಎಂದು ತಿಳಿಸಿದರು.
kannada sahitya parishath Shivamogga ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿದರು. ಬಾಲಪ್ರತಿಭೆ ಅನುಷಾ ಹಿರೇಮಠ ಮಾತನಾಡಿದರು. ಸಾಕೇತ್ ಶಾಸ್ತ್ರೀ, ಕೀರ್ತಿಕಾ ಕನ್ನಡ ಗೀತೆಗಳನ್ನು ಹಾಡಿದರು. ಅನ್ನಪೂರ್ಣ ಸತ್ಯನಾರಾಯಣ, ಅಮೃತ ಶಿಶಿರಾ, ಜಯಲಕ್ಷ್ಮಿ ಜಿ. ಅಣ್ಣಿಗೇರಿ ತಂಡದವರು ಭಜನೆ ಹಾಡಿದರು.
ಕವಿಗಳಾದ ಡಾ. ಕೆ.ಎಸ್. ಗಂಗಾಧರ, ಬಿ.ಟಿ. ಅಂಬಿಕಾ, ಶಾಹಿರಾ ಭಾನು, ಶ್ರೀನಿವಾಸ ನಗಲಾಪುರ, ಪಿ.ಕೆ. ಸತೀಶ್, ರಚಿತಾ ಚೇತನ ಕವನ ವಾಚಿಸಿದರು. ಪಂಕಜಾ ಗೋಪಾಳ ಹನಿಗವನ ಹೇಳಿದರು. ಮಹಾದೇವಿ ಕಥೆ ಹೇಳಿದರು.
ಶಕ್ತಿಧಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಂ. ಹಾಲಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಗುಡದಪ್ಪ ಕಸಬಿ ಸ್ವಾಗತಿಸಿದರು. ಖಜಾಂಚಿ ಎ.ಎಲ್. ಪರಮೇಶ್ವರ, ಭಾರತಿ ರಾಮಕೃಷ್ಣ ನಿರೂಪಿಸಿದರು.
ಕರ್ನಾಟಕ ಜಾನಪದ ಪರಿಷತ್ತು ನೀಡಿದ ಜಾನಪದ ಕಲೆಗಳ ಕಲಿಕಾ ಶಿಬಿರದ ಶಿಬಿರಾರ್ಥಿಗಳಿಂದ ಲಂಬಾಣಿ ನೃತ್ಯ ನಡೆಯಿತು. ನಿವಾಸಿಗಳ ಸಂಘದ ಪದಾಧಿಕಾರಿಗಳು ಪಂಚೆ, ಅಂಗಿ, ಶಲ್ಯ ಧರಿಸಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.