Chamber Of Commerce Shivamogga ನಮ್ಮ ಹೆಮ್ಮೆಯ ಚಾರಣಿಗರು ದೇವಭೂಮಿಯಾದ ಹಿಮಾಲಯದ ಶ್ರೇಣಿಯಲ್ಲಿ ದೇವಭಾಷೆಯಾದ ಸಂಸ್ಕೃತ ಪಸರಿಸಲು ಹಾಗೂ ಸಂಸ್ಕೃತ ಧ್ವಜವನ್ನು ಹಿಮಾಲಯದೆತ್ತರ ಶ್ರೇಣಿಯಲ್ಲಿ ಹಾರಿಸಲು ಹೊರಟಿರುವುದು ಸಂತೋಷದ ಸಂಗತಿ ಎಂದು ನನ್ನ ಕನಸಿನ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಗೀರ್ವಾಣ ಭಾರತಿ ಘಟಕ, ಶ್ರೀ ಆದಿಚುಂಚನಗಿರಿ, ಮಂಡ್ಯ ಜಿಲ್ಲೆ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ತರುಣೋದಯ ಘಟಕ, ಶಿವಮೊಗ್ಗ ಜಿಲ್ಲೆ, ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಮಾತನಾಡಿ, ಚಾರಣದ ಸಮಯದಲ್ಲಿ ಚಾರಣಿಗರಿಗೆ ಹಲವು ಉತ್ತಮ ಮಾಹಿತಿ ನೀಡಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ವಾಗೀಶ, ಚಾರಣಿಗರಿಗೆ ಶುಭಕೋರುತ್ತಾ ಹಿಮಾಲಯ ಚಾರಣದ ಸಮಯದಲ್ಲಿ ಪ್ರಕೃತಿಯ ವಿಸ್ಮಯಕರ ಸಂಧರ್ಭಗಳ ಬಗ್ಗೆ ಮಾಹಿತಿ ಕೊಟ್ಟರು.
ಐಎಂಎ ಅಧ್ಯಕ್ಷ ಡಾ. ಅರುಣ್ ಎರಡು ದಿನಗಳ ಹಿಂದೆ ಲೇಹ್ ಮತ್ತು ಲಡಾಕ್ ಚಾರಣ ಮಾಡಿದ್ದಾರೆ. ಚಾರಣದ ಸಮಯದಲ್ಲಿ ಚಾರಣ ಮಾಡುವವರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಹೇಗೆ ಎದುರಿಸಬೇಕೆಂದು ಉತ್ತಮ ಮಾಹಿತಿ ನೀಡಿದರು.
Chamber Of Commerce Shivamogga ದಿಲೀಪ್ ನಾಡಿಗ್ ಅವರಿಂದ ಕುಲು ಮನಾಲಿಯ ಮಣಿಕರಣ್ ಸ್ಥಳದ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಸಂಸ್ಕೃತ ಭಾಷಿಗರ ತಂಡದೊಂದಿಗೆ ಚಾರಣವನ್ನು ಏರ್ಪಡಿಸಿರುವ ಅ.ನಾ.ವಿಜೇಂದ್ರ ರಾವ್ ಅವರು ಹಿಮಾಲಯ ಪ್ರದೇಶಗಳಲ್ಲಿ ಚಾರಣದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಕಾರ್ಯಕ್ರಮದ ವಿವರಗಳನ್ನು ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕೃಪಾಶೀರ್ವಾದದಿಂದ ಹಿಮಾಲಯದ ಉನ್ನತ ಶಿಖರ ಚಂದ್ರಕಣಿಗೆ ರಾಜಸ್ಥಾನ, ಕರ್ನಾಟಕ ಹಾಗೂ ವಿವಿಧ ರಾಜ್ಯಗಳಿಂದ ನಲವತ್ತು ಜನ ಸಂಸ್ಕೃತ ಸಂಭಾಷಣಿಗರ ತಂಡ ಹಿಮಾಲಯ ಚಾರಣಕ್ಕೆ ಹೊರಟಿದ್ದು, ಶಿವಮೊಗ್ಗದಲ್ಲಿ ಬೀಳ್ಕೊಡಲಾಯಿತು.