Assembly Election ರಾಜ್ಯಾದ್ಯಂತ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ತಯಾರಾಗಿದ್ದು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ಭ್ರಷ್ಟಚಾರ ರಹಿತ ಆಡಳಿತ ನೀಡುವ ವ್ಯಕ್ತಿಯನ್ನು ಗುರು ತಿಸಲು ಮೇ.10 ಮಹತ್ವವಾದ ದಿನವೆಂದು ಎಂದು ಸಾಮಾಜಿಕ ಹೋರಾಟಗಾರ ಡಾ|| ಕೆ.ಸುಂದರಗೌಡ ತಿಳಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಕೆಲವು ರಾಜಕಾರಣಿಗಳು ಹಣ ಹಾಗೂ ಹೆಂಡದ ಆಸೆಯಿಂದ ಬಹುತೇಕ ಮತದಾರರು ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಮತದಾರರು ಸೂಕ್ಷö್ಮವಾಗಿ ಅರಿಯಬೇಕು. ಇಂದಿನ ಒಂದು ದಿನದ ಆಸೆಯಿಂದ ಮುಂದಿನ ಐದು ವರ್ಷಗಳ ಕಾಲ ಸತತವಾಗಿ ಸಂಕಷ್ಟಗಳು ಹಾಗೂ ಸಮಸ್ಯೆಗಳು ಎದುರಾಗುವ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆಗೊಳಿಸಲುಮುಂದಾಗಿದ್ದಾರೆ.
Assembly Election ಭಾರತವು ಪ್ರಜಾಪ್ರಭುತ್ವದಲ್ಲಿ ಅತಿದೊಡ್ಡ ದೇಶವಾಗಿದೆ. ಇದೀಗ ರಾಜ್ಯದಲ್ಲಿ ಚುನಾವಣಾ ಮತದಾನಕ್ಕೆ ತೆರ ಳುತ್ತಿರುವುದು ನಿಜವಾದ ಪ್ರಜಾಪ್ರಭುತ್ವ ಮರುಸೃಷ್ಟಿಸಲು ಮುಂದಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವು ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದೆ. ಅದಲ್ಲದೇ ಮತದಾರರ ಆಮಿಷಗಳನ್ನು ಒದಗಿಸಲು ಕೆಲವು ರಾಜಕಾರಣಿ ಹಣ, ಮದ್ಯವನ್ನು ಹಂಚಲು ಇರಿಸಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರು ವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಇಂದಿನ ಕೆಲವು ಮತದಾರರು ಎಷ್ಟರ ಮಟ್ಟಿಗೆ ಭ್ರಷ್ಟರು ಎಂಬುದಾದರೆ ಮತಯಾಚನೆಗೆ ತೆರಳಿದ ಅಭ್ಯರ್ಥಿ ಗಳಿಗೆ ನೀವೇನು ನೀಡುವಿರಿ ಎಂಬ ಮಟ್ಟಕ್ಕೆ ಬೆಳೆದಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿದೆ. ಇದನ್ನು ನಿವಾರಿಸಲು ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ನೆಲೆಯಲ್ಲಿ ಉತ್ತಮ ನಂಬಿಕೆ ಹಾಗೂ ಶುದ್ಧ ಆಡಳಿತ ನಡೆಸಲು ಮುಂದಾದರೆ ಮುಂದಿನ ಪೀಳಿಗೆಗೆ ಉತ್ತಮ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಾಗಲಿದೆ ಎಂದು ಹೇಳಿ ದ್ದಾರೆ.
ಭಾರತದ 140 ಕೋಟಿ ಜನಸಂಖ್ಯೆಯಲ್ಲಿ 40 ಕೋಟಿಯಷ್ಟು ಮಂದಿ ಒಂದು ದಿನದ ಊಟಕ್ಕೂ ಕಷ್ಟ ಪಡುವ ಸ್ಥಿತಿಯಲ್ಲಿದ್ದು ಇದನ್ನು ಬಗೆಹರಿಸಲು ಪ್ರತಿಯೊಬ್ಬ ಮತದಾರರು ಹಾಗೂ ರಾಜಕೀಯ ಪಕ್ಷಗಳು ಜವಾ ಬ್ದಾರಿ ವಹಿಸುವ ಅಗತ್ಯವಿದೆ. ಇದನ್ನು ಹೊರತುಪಡಿಸಿ ಭ್ರಷ್ಟಚಾರದಲ್ಲಿ ಚುನಾವಣೆ ನಡೆಸಿದ್ದಲ್ಲಿ ಮತದಾರರು ಮುಂದೆ ಬೀದಿಯಲ್ಲಿ ಬೆತ್ತಲಾಗಿ ಮೆರವಣಿಗೆ ನಡೆಸುವ ದಿನಗಳು ಸನ್ನಿಹಿತವಾಗಲಿದೆ ಎಂದು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಮತದಾರರು ಚುನಾವಣೆಯಲ್ಲಿ ಪರಿಶುದ್ಧತೆಯನ್ನು ಕಾಪಾಡಲು ಭ್ರಷ್ಟಚಾರಕ್ಕೆ ಒತ್ತು ಕೊಡದೇ ಶೇ.100ರಷ್ಟು ಮತದಾನದಲ್ಲಿ ಭಾಗಿಯಾಗಬೇಕು. ಪ್ರಜಾಪ್ರಭುತ್ವವನ್ನು ಅತ್ಯಂತ ಉನ್ನತ ಮಟ್ಟದಲ್ಲಿ ಬೆಳೆಸಲು ಮತದಾರರು ಜವಾಬ್ದಾರಿಯನ್ನು ತೆಗೆದುಕೊಂಡಾಗ ಮಾತ್ರ ದೇಶವು ಬಲಿಷ್ಟತೆ ಬೆಳೆಯಲಿದ್ದು ಇಲ್ಲವಾದಲ್ಲಿ ಜಾತಿ, ಹಣ, ಹೆಂಡ ಹೆಸರಿನಲ್ಲಿ ಚುನಾವಣೆ ಒಳಗಾದರೆ ಮುಂದಿನ ಸ್ವಾತಂತ್ರ್ಯವನ್ನು ಕಳೆದುಕೊಂಡಾಗುತ್ತದೆ ಎಂದಿದ್ದಾರೆ.