KLive Speecial Article ಚುನಾವಣಾ ಅಸಯೋಗದ ಒಂದು ಸಮೀಕ್ಷೆಯನ್ನ ಮಾಧ್ಯಮಗಳು ಪ್ರಸಾರಮಾಡಿವೆ.
ಅದರಲ್ಲಿ, ಬೆಚ್ಚಿಬೀಳುವ ವರದಿಯಿದೆ.
ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ
ಮತದಾನ ಮಾಡುವವರ ಸಂಖ್ಯೆ ಶೇ. 33 ರಷ್ಟು ಕಡಿಮೆಯಾಗಲಿದೆಯಂತೆ.
ಇಡೀ ಆಡಳಿತ ಯಂತ್ರವೇ ರಾಜ್ಯದಲ್ಲಿ ಮತದಾರರ ಜಾಗೃತಿ ಬಗ್ಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನ
ಹಮ್ಮಿಕೊಂಡಿತ್ತು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ,ಸ್ವಯಂಸೇವಾ ಸಂಘಸಂಸ್ಥೆಗಳ ಸಹಕಾರದಿಂದ ಮತದಾರರ ಜಾಗೃತಿ ಅಭಿಯಾನ ನಡೆಯಿತು. ಆದರೆ,
ಈಗ ಸಿಕ್ಕ ವರದಿ ನೋಡಿದರೆ ನಿರಾಶೆಯಾಗುತ್ತದೆ.
ಶೇ. 33 ಅನಕ್ಷರಸ್ಥರಲ್ಲ. ಅವರಿಗೆ ವೋಟು ಮಾಡಲು ಆಸಕ್ತಿಯೇ ಇಲ್ಲವಂತೆ.
ತಿಳಿದವರು ತಿಳಿಯದವರಿಗೆ ಹೇಳಬೇಕು. ಆದರೆ, ಈಗ ತಿಳಿದವರೇ ಅನಾಸಕ್ತಿ ತಾಳಿದತರ ಅವರಿಗೆ ತಿಳಿಹೇಳುವವರು ಯಾರು? ಅದೇ ಯಕ್ಷ ಪ್ರಶ್ನೆ.
ಪ್ರಜಾಪ್ರಭುತ್ವದ ಬುನಾದಿಯೇ ಮತದಾನ ಮತ್ತು ಚುನಾವಣೆ ಮೂಲಕ ಜನಪ್ರತಿನಿಧಿಗಳ ಆಯ್ಕೆ. ಈ ಸರಳ ವಿಧಾನಕ್ಕೂ ಆಸಕ್ತಿ
ಇಲ್ಲವೆಂದರೆ ನಾಚಿಕೆಗೇಡಿನ ವಿಷಯವಾಗುತ್ತದೆ.
KLive Speecial Article NOTA ಎಂಬ ಆಯ್ಕೆಯೂ ಇದೆ.
ಚುನಾವಣಾ ಆಯೋಗ ಇಂತಹ ಅವಕಾಶ ಕಲ್ಪಸಿರುವಾಗ ಬಳಸಿಕೊಳ್ಳುವ ಮನಸ್ಸೇ ನಮಗಿಲ್ಲ ಎಂದರೆ ಹೇಗೆ?
ಯಾರೋ ಗೆಲ್ಲುತ್ತಾರೆ?
ಯಾವುದೋ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ, ಹೊಣೆಗಾರಿಕೆ,
ಕರ್ತವ್ಯಗಳ ಬಗ್ಗೆ
ಗಂಟೆಗಟ್ಟಲೆ ಮಾತಾಡುತ್ತೇವೆ. ಬೇರೆ ಬೇರೆ ದೇಶಗಳ ಚುನಾವಣೆ, ಆಡಳಿತ ಪದ್ಧತಿ, ಜನಜಾಗೃತಿ, ದೇಶದ ಪ್ರಗತಿಗಳ ಬಗ್ಗೆ ಮಾತಾಡುತ್ತೇವೆ.
ಅಂತಹ ಮಾದರಿ
ಪದ್ಧತಿಯನ್ನ ತರುವಲ್ಲಿ ನಮ್ಮ ಕೊಡುಗೆ ಏನಿದೆ?
ಎಂಬ ವಿವೇಚನೆ ನಮಗಿರಬೇಕು.
ಈಗ ನಮ್ಮಲ್ಲಿ ಇನ್ನೂ ಸಮಯ ಮೀರಿಲ್ಲ. ಅನಾಸಕ್ತಿಯನ್ನ ದೂರಮಾಡಿ ಮತದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳೋಣ.
ಒಳ್ಳೆಯ ಪ್ರತಿನಿಧಿ ಆಯ್ಕೆಯಿಂದ ಒಳ್ಳೆಯ ಸರ್ಕಾರ ಅಲ್ಲವೆ?