C. T. Ravi ಅಸಂಘಟಿತ ಕಾರ್ಮಿಕರಾದ ಸುವರ್ಣ ಕೆಲಸಗಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸುವುದು ಹಾಗೂ ವೃತ್ತಿಯಲ್ಲಿ ಆಗುತ್ತಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಿ ಸುಸ್ಥಿರ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಸುವರ್ಣಗಾರರ ಕ್ಷೇಮಾಭಿವೃದ್ದಿ ಸಂಘವು ಶಾಸಕ ಸಿ.ಟಿ.ರವಿ ಅವರನ್ನು ಒತ್ತಾಯಿಸಿದರು.
ಈ ಸಂಬಂಧ ಶಾಸಕರ ಸ್ವಗೃಹದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು ಸರ್ಕಾರದ ಸೌಲಭ್ಯ ಹಾಗೂ ವೃತ್ತಿಯಲ್ಲಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಆರ್.ಸುಧೀರ್‌ಕುಮಾರ್ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಸುವರ್ಣ ಕೆಲಸಗಾರರು ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮುಂಗಟ್ಟುದಾರರಿಗೆ ಚಿನ್ನಾಭರಣ ಆರೋಪದ ಸುಳ್ಳು ಮಾಹಿತಿ ಮೇರೆಗೆ ಕೆಲವು ಪೊಲೀಸ್ ಅಧಿಕಾರಿಗಳು ಪದೇ ಪದೇ ತೊಂದರೆ ನೀಡಲಾಗುತ್ತಿದೆ.ಇದನ್ನು ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಇತ್ಯರ್ಥಪಡಿಸಿಕೊಡಬೇಕು ಎಂದರು.
C. T. Ravi ಪ್ರಸ್ತುತ ನಗರದಲ್ಲಿ ದೊಡ್ಡಮಟ್ಟದ ಚಿನ್ನಾಭರಣದ ಅಂಗಡಿ ಮುಂಗಟ್ಟುಗಳು ಬೃಹದಾಕಾರದಲ್ಲಿ ತಲೆಎತ್ತಿರುವ ಪರಿಣಾಮ ಸಣ್ಣಪುಟ್ಟ ಅಂಗಡಿ ಮುಂಗಟ್ಟುದಾರರಿಗೆ ಕೆಲಸಗಳು ಕಡಿಮೆಯಾಗಿದೆ. ಇದರೊಂದಿಗೆ ಚಿನ್ನಾಭರಣಕ್ಕೆ ಸಂವಾಬ್ಧಿಸಿದಂತೆ ಕೆಲವು ಅಧಿಕಾರಿಗಳು ತೊಂದರೆ ನೀಡುತ್ತಿರುವ ಪರಿಣಾಮ ನಿತ್ಯದ ವ್ಯವಹಾರಕ್ಕೂ ತೊಂದರೆ ಯಾಗಿದೆ ಎಂದರು.
ಅಸಂಘಟಿತ ಸುವರ್ಣ ಕೆಲಸಗಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಒದಗಿಸುವುದು ಹಾಗೂ ಸುಖಸುಮ್ಮನೆ ಚಿನ್ನಾಭರಣದ ಆರೋಪ ಮಾಡುವ ಕೆಲವು ಅಧಿಕಾರಿಗಳಿಗೆ ತೊಂದರೆ ನೀಡದಂತೆ ಕ್ರಮವಹಿ ಸಿದ್ದಲ್ಲಿ ಸುವರ್ಣ ಕೆಲಸಗಾರರು ಉತ್ತಮ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ್‌ಶೆಟ್, ಸಿ.ಎಸ್.ಅರುಣ್, ಸುನೀಲ್ ಜಾದವ್, ಖಜಾಂಚಿ ತೀರ್ಥ, ಸದಸ್ಯರುಗಳಾದ ಉಮೇಶ್, ಸುದೀಪ, ಪೋಪಟ್, ಕಲ್ಲೇಶ್ ಆಚಾರ್ಯ, ಹಿರೇಬೆಂಗಾಲಿ, ದೇವರಾಜ್, ಧನಂಜಯ್, ಚಂದ್ರಶೇಖರ್, ಪ್ರಕಾಶ್ ಮತ್ತಿತರರು ಹಾಜರಿದ್ದರು.