Friday, November 22, 2024
Friday, November 22, 2024

Samanvaya Kashi ಮದುವೆ ಸಮಾರಂಭದಲ್ಲಿ ಮತದಾರರ ಜಾಗೃತಿ ಸಮನ್ವಯ ಟ್ರಸ್ಟ್ ಅಭಿಯಾನ

Date:

Samanvaya Kashi 2023ನೇ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಮತದಾನ ಜಾಗೃತಿ ನಡೆಯುತ್ತಿದೆ. ಮದುವೆ ಮನೆಯೊಂದರಲ್ಲಿ ಸಮನ್ವಯ ಟ್ರಸ್ಟ್ ಸದಸ್ಯರು ಮತದಾನ ಮಾಡುವಂತೆ ಮದುವೆಗೆ ಆಗಮಿಸಿದ್ದವರಿಗೆ ಜಾಗೃತಿ ಮೂಡಿಸಿದರು.

ಶಿವಮೊಗ್ಗ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ ಅವರ ಪುತ್ರಿ ದಾಮಿನಿ ಟಿ.ಕೆ. ಹಾಗೂ ಶಿಕಾರಿಪುರದ ಡಾ. ಹೇಮಂತ್‌ಕುಮಾರ್ ಅವರ ವಿವಾಹವು ಭಾನುವಾರ ಜರುಗಿತು. ಇದೇ ಸಂದರ್ಭದಲ್ಲಿ ಸಮನ್ವಯ ಟ್ರಸ್ಟ್ ಪದಾಧಿಕಾರಿಗಳು ಮತದಾನ ಮಹತ್ವದ ಬಗ್ಗೆ ತಿಳಿಸಿದರು.
ಮತದಾನಕ್ಕೆ ಇನ್ನೂ 2-3 ದಿನ ಇದ್ದು, ಮತದಾನದ ಗುರುತೀನ ಚೀಟಿ ಹೊಂದಿರುವ ಪ್ರತಿಯೊಬ್ಬರು ಬುಧವಾರ ಮೇ 10ರಂದು ತಪ್ಪದೇ ಮತದಾನ ಮಾಡಬೇಕು. ನನ್ನ ಮತ ಮಾರಾಟಕ್ಕಿಲ್ಲ ಎಂಬ ಘೋಷ ವಾಕ್ಯದ ಬಗ್ಗೆಯು ಜಾಗೃತಿ ಮೂಡಿಸಲಾಯಿತು.

ಮತದಾನ ನಮ್ಮೆಲ್ಲರ ಹಕ್ಕು, ಮತ ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮತದಾನ ಜಾಗೃತಿ ಮಾಡಲಾಯಿತು.

ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರಿಗೆ ಮತದಾನ ಮಾಡುವಂತೆ, ಮತದಾನ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮತದಾನದ ದಿನ ಬೆಳಗ್ಗೆ ತಪ್ಪದೇ ಮತ ಚಲಾಯಿಸುವಂತೆ “ನಾವು ಮತ ಚಲಾಯಿಸೋಣ” ಅಭಿಯಾನ ನಡೆಸಲಾಯಿತು.

Samanvaya Kashi ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...