Thursday, March 19, 2026
Thursday, March 19, 2026

JDS Candidate Ayanuru Manjunath ಆಯನೂರು ಮಂಜುನಾಥ್ ಅವರಿಂದ ಕಾರ್ನರ್ ಮೀಟಿಂಗ್ ಮೂಲಕ ಮತಯಾಚನೆ

Date:

JDS Candidate Ayanuru Manjunath ಜೆಡಿಎಸ್‌ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ ಅವರು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಚುನಾವಣೆ ಪ್ರಚಾರ ಮತ್ತು ಕಾರ್ನರ್‌ ಮೀಟಿಂಗ್‌ ನಡೆಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ರೋಡ್‌ ಶೋನಲ್ಲಿ ಭಾಗವಹಿಸಿದರು.

ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಒಂದನೇ ತಿರುವಿನಿಂದ 6ನೇ ತಿರುವಿನವರೆಗೆ, ಲಷ್ಕರ್‌ ಮೊಹಲ್ಲಾ, ಕೃಷಿ ನಗರ, ತ್ರಿಮೂರ್ತಿ ನಗರ, ಚೌಡೇಶ್ವರಿ ಕಾಲೋನಿ, ಪುರಲೆ, ಗಣೇಶ ಭವನ, ವಿದ್ಯಾನಗರ, ಟ್ಯಾಂಕ್‌ ಮೊಹಲ್ಲಾ, ಬೈಲ್‌ ಕಮ್ಮಾರ ಬೀದಿ, ಗಾಂಧಿ ಬಜಾರ್‌, ಸೀಗೆಹಟ್ಟಿಯಿಂದ ಹೊಳೆ ಬಸ್‌ ಸ್ಟಾಪ್‌ವರೆಗೆ, ಬುದ್ದ ನಗರ, ಮಿಳಘಟ್ಟ, ಗೋಪಾಳ, ಟಿಪ್ಪು ನಗರ, ಇಲಿಯಾಜ್‌ ನಗರ, ವೆಂಕಟೇಶ ನಗರ ಬಡಾವಣೆಗಳಲ್ಲಿ ಚುನಾವಣಾ ಪ್ರಚಾರ ನಡೆಯಿತು.

ಜೆಡಿಎಸ್‌ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ, ಎಂ.ಶ್ರೀಕಾಂತ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

JDS Candidate Ayanuru Manjunath ಪ್ರತಿ ಮನೆಗು ಕರಪತ್ರ ನೀಡಿದರು. ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್‌ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ರೋಡ್‌ ಶೋನಲ್ಲಿ ಭಾಗಹಿಸಿದ್ದರು.

ಶಿವಮೊಗ್ಗ ನಗರದ 32ನೇ ವಾರ್ಡ್‌ನಲ್ಲಿ ಜೆಡಿಎಸ್‌ ಪಕ್ಷದ ಆಯನೂರು ಮಂಜುನಾಥ ಅವರ ಪರವಾಗಿ ಮಹಿಳೆಯರು ಪ್ರತ್ಯೇಕವಾಗಿ ಪ್ರಚಾರ ನಡೆಸಿದರು. ವಾರ್ಡ್‌ನ ಪ್ರತಿ ಬೀದಿಯಲ್ಲಿ ಮಹಿಳೆಯರು ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರು. ಮನೆ ಮನೆಗೆ ತೆರಳಿ ಕರಪತ್ರ ನೀಡಿ ಆಯನೂರು ಮಂಜುನಾಥ ಅವರ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...