Wednesday, June 25, 2025
Wednesday, June 25, 2025

Assembly Election ಮೂರು ಬುಗುರಿ ಒಂದೇ ಚಾಟಿ

Date:

Assembly Election ಶಿವಮೊಗ್ಗದ ಚುನಾವಣೆ ದಿಕ್ಕಿನ ದಿಕ್ಸೂಚಿ ಕ್ಚಣಕ್ಷಕ್ಕೆ ಬದಲಾಗುತ್ತಿದೆ. ಐದು ಬಾರಿ ಗೆದ್ದ ಈಶ್ವರಪ್ಪನವರೀಗ ಕಣದಲ್ಲಿಲ್ಲ. ಸೂಚ್ಯವಾಗಿ ಹರಕು ಬಾಯಿಗೆ ಹೊಲಿಗೆ ಹಾಕಲಿ,ಶಾಂತಿ ನೆಲೆಸಲಿ ಎಂದು ಸೈಲೆಂಟಾಗಿ ಫ್ಲೆಕ್ಸಿ ನಿಲ್ಲಿಸಿದವರೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಕಾಂಗ್ರೆಸ್, ಬಹಳಷ್ಟು ಅಳೆದು ತೂಗಿ ಯೋಗೀಶ್ ಅವರಿಗೆ ಟಿಕೆಟ್ ನೀಡಿದೆ. ಆ ಪಕ್ಷದಲ್ಲಿ ಘಟಾನುಘಟಿಗಳಿಗೇನೂ ಕಮ್ಮಿಯಿಲ್ಲ.
ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಪ್ರಸನ್ನ ಕುಮಾರ್, ಪಿ.ಓ.ಶಿವಕುಮಾರ್ …ಹೀಗೆ ಪಟ್ಟಿ ಬೆಳೆದಿತ್ತು. ಕೊನೆಗೆ ಯುವಕನೆಂಬ ಕಾರಣದಿಂದ ಯೋಗೀಶ್ ಗೆ‌ ಟಿಕೆಟ್ ಸಿಕ್ಕಿತು. ನಂತರ ಅಸಮಾಧಾನದಿಂದ ಮಾಜಿ ಶಾಸಕ ಪ್ರಸನ್ನ ಕುಮಾರ್ ಜೆಡಿಎಸ್ ಗೆ ಸೇರಿದರು.

ಬಿಜೆಪಿಯಲ್ಲಿ ಈಶ್ವರಪ್ಪನವರ ನಂತರ ಆಯ್ಕೆಯ ಅವಕಾಶ ಸಹಜವಾಗಿ ಆಯನೂರು ಮಂಜುನಾಥರಿಗೆ ಇರಬೇಕಿತ್ತು. ಏಕೆಂದರೆ ಅನುಭವಿ ರಾಜಕಾರಣಿ. ಶಾಸಕರಾಗಿ,ಲೋಕಸಭೆ ,ರಾಜ್ಯಸಭೆ ಸಂಸದರಾಗಿ ಸೇವೆ ಸಲ್ಲಿಸಿದ್ದರು.
ಬಹುಷಃ ಬಿಜೆಪಿ ಈ ಬಾರಿ ಅವರನ್ನ ಪರಿಗಣಿಸದಿರಲು ಅವಕಾಶಗಳನ್ನ ಅವರಿಗೆ ಸಾಕಷ್ಟು ನೀಡಲಾಗಿದೆ ಎಂಬ ಹಿನ್ನೆಲೆಯಿರಬಹುದು.

Assembly Election ಈ ಅವಗಣನೆಯನ್ನ ಮಂಜುನಾಥರಿಗೆ ಸೂಕ್ತವಾಗಿ ತಿಳಿಸಲಿಲ್ಲವೇನೊ?
ನಿರ್ಲಕ್ಷದ ಫಲಿತಾಂಶ
ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇದೇ ನಿರ್ಲಕ್ಷ್ಯ ಶೆಟ್ಟರ್ ಅವರಿಗೂ ಕಾಡಿದೆ. ಎಸ ವರ ಹೇಳಿಕೆಯ ಪ್ರಕಾರ ಮುಂಚೆ ಅವರಿಗೆ ಟಿಕೆಟ್ ನಿರಾಕರಣೆ ಬಗ್ಗೆ ತಿಳಿಸಿರಲಿಲ್ಲವಂತೆ.
ಶಿಸ್ತಿನ ಪಕ್ಷ ಬಿಜೆಪಿ ಎಡವಿರುವುದು ಇಲ್ಲಿಯೆ. ನಂತರ ಹೈಕಮಾಂಡ್,ರಾಜ್ಯ ನಾಯಕರು ಏನೆಲ್ಲಾ ಮಾತಿನ ಕಸರತ್ತು ತೋರಿದರೂ ಶೆಟ್ಟರ್ ಅವಕ್ಕೆ ಸೊಪ್ಪು ಹಾಕಲಿಲ್ಲ.

ಹೋಗಲಿ ಬಿಜೆಪಿ ಅನುಭವಸ್ಥ ರಾಜಕಾರಣಿಯನ್ನಾದರೂ ಆರಿಸಿತೆ?
ದತ್ತಾತ್ರಿ ಅಂತಹಹೊರಜಗತ್ತಿಗೆ ಎಕ್ಸ್ ಪೋಸ್ ಆಗಿರುವ ಅಭ್ಯರ್ಥಿತನವನ್ನೂ ಪರಿಶೀಲಿಸಲಿಲ್ಲ.
ಕಾರ್ಪೋರೇಟರ್ ಮತ್ತು ಸಂಘಪರಿವಾರದ ನಿಕಟತೆ ಎರಡೇ ಅರ್ಹತೆಗಳುಳ್ಳ ಚನ್ನಬಸಪ್ಪ ಅವರಿಗೆ ಅನಿರೀಕ್ಷಿತ ಟಿಕೆಟ್ ಒಲಿದುಬಂತು.

ಚುನಾವಣೆ ಹತ್ತಿರವಾದಂತೆ ಜಾತಿ ಲೆಕ್ಕಾಚಾರಗಳು ಎಲ್ಲರನ್ನೂ ಕಂಗೆಡಿಸುವಂತೆಮಾಡಿವೆ. ಇದು ಸಹಜವೆ.
ಆದರೆ ಮಂಜುನಾಥ್ ಜೊತೆ ಕೈಜೋಡಿಸಿರುವ ಪ್ರಸನ್ನಕುಮಾರ್ ಜೆಡಿಎಸ್ ಗೆ ಬಲ ತಂದಿರುವುದಂತೂ ವಾಸ್ತವ ಸಂಗತಿ.
ಅವರಿಂದ ಸದ್ಯ ಕಾಂಗ್ರೆಸ್ ಗೆ ಆಗುವ ಘಾತವೇನು?

ಈ ಬಗ್ಗೆ ವಿವೇಚಿಸಿದರೆ ಪ್ರಸನ್ನ ಕುಮಾರ್ ಅವರ ಸಂಗಡ ಒಂದಿಷ್ಟು ಸಾವಿರ ಮತಗಳಿವೆ. ಅವು ಕಾಂಗ್ರೆಸ್ ಕಣಜದಿಂದ ಹೊರಬರುತ್ತವೆಯೆ?
ಇದು ಯಕ್ಷಪ್ರಶ್ನೆ. ಏಕೆಂದರೆ ಜೆಡಿಎಸ್ ಸುಪ್ರಿಮೊ ಕುಮಾರಸ್ವಾಮಿ ಅವರು ಶಿವಮೊಗ್ಗ ಪ್ರದೇಶದಲ್ಲಿ ಫೇವರ್ ಆಗಿರುವ ವ್ಯಕ್ತಿತ್ವ ಹೊಂದಿಲ್ಲ. ಅವರು ತೋರಿದ ಸೂಕ್ಷ್ಮ ನಿರ್ಲಕ್ಷ್ಯ ಎಂದರೆ
ಬೆವರುಹರಿಸಿ ಪಕ್ಷಕಟ್ಟಿದ ಶ್ರೀಕಾಂತ್
ಗೆ ತಮ್ಮ ಸಿಎಂ ಅವಧಿಯಲ್ಲಿ ಎಮ್ ಎಲ್ ಸಿ ಸ್ಥಾನ ಕೊಟ್ಟಿದ್ದರೆ ಪಕ್ಷಕ್ಕೊಂದು ಇಮೇಜು ಬೆಳೆಯುತ್ತಿತ್ತು. ಈಗ ಮತ್ತೆ ಶ್ರೀಕಾಂತ ಅವರಿಂದಲೇ ಆಯನೂರು ಮಂಜುನಾಥ್, ಪ್ರಸನ್ನ ಕುಮಾರ್ ಜೆಡಿಎಸ್ ತೆಕ್ಕೆಗೆ ಬಂದಿದ್ದಾರೆ. ಒಂದಿಷ್ಟು ಎನ್ಟಿಟಿ ಸಿಕ್ಕಿದೆ.
ಸದ್ಯ ಈಗ ಮೂರೂ ಅಭ್ಯರ್ಥಿಗಳು ಒಂದೇ ಕೋಮಿನವರು. ಇಲ್ಲಿ‌
ಪಕ್ಷಗಳ ಆರ್ಥಿಕ ಧೃಢತೆ, ಸಂಘಟನೆ, ಪ್ರಚಾರದ ತಂತ್ರ ಇವುಗಳ ಮೇಲೆ ಗೆಲುವು ನಿಂತಿದೆ.
ವೀರಶೈವ ಲಿಂಗಾಯತ ಮತಗಳು ಚದುರುವುದಂತೂ ಖಂಡಿತ. ಯೋಗೀಶ್ ಯುವಕ. ತಂದೆ ಮತ್ತು ಅಜ್ಜ ರಾಜಕಾರಣದಲ್ಲಿ ಇದ್ದವರು. ಈಗ ಸ್ವತಃ ಯೋಗೀಶ್ ಗೆ ಕಾರ್ಪೋರೇಟರ್ ಆಗಿ ಜನಸ್ಪಂದನವಿದೆ. ಚನ್ನಿ ,ಮೇಯರ್,ಉಪ ಮೇಯರ್ ಆಗಿ ಅನುಭವಸ್ಥರು. ಇವೆಲ್ಲಕ್ಕೂ ಭಿನ್ನರಾಗಿ ಕಾಣುವವರು ಆಯನೂರು ಮಂಜುನಾಥ್.
ಮಾತುಗಾರ,ಕೆಲಸಗಾರ. ಆದರೆ ಅವರಲ್ಲಿ ಎದುರಾಳಿಗಳು ಹೇಳುವ ಮೈನಸ್ ಅಂಶವೆಂದರೆ. ಬಿಜೆಪಿ, ಕಾಂಗ್ರೆಸ್, ಮಲ್ಯ ಜನತಾ ಪಾರ್ಟಿ, ಈಗ ಜೆಡಿಎಸ್. ಎಷ್ಟು ಪಕ್ಷಾಂತರಗಳಿವೆ!.

ಮತದಾರರು ವಿವೇಚನಾಶೀಲರಿದ್ದಾರೆ. ಶಿವಮೊಗ್ಗ ಅಕ್ಷರವಂತರು ಮತಗತು ಸಾಕ್ಷರರ ನೆಲ.
ಸಂಘ ಪರಿವಾರದ ಕೆಲಸ ಯಾವುದೇ ಚವಕಾಶಿ, ಹಿಂದೇಟು ಇಲ್ಲದೆಯೇ ನಡೆದರೆ
ಚನ್ನಿ ಅವರಿಗೆ ಗೆಲುವು. ಈಗ ಇಲ್ಲಿ‌
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮತಗಳನ್ನ ಒಡೆದು ಹಂಚಿಕೊಳ್ಳುವ ಸಂದರ್ಭ ಬರಬಹುದು. ಮಂಜುನಾಥರು ಹೇಗೆ ಪ್ರಸನ್ನ ಕುಮಾರ್ ಅವರ ಸಾಥ್ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಗೆಲುವು ಅವಲಂಬಿಸಿದೆ.

ಯೋಗೀಶ್ ಅವರಿಗೆ ಗೆಲುವು ಅಸಾಧ್ಯ ಅನ್ನುವಂತಿಲ್ಲ. ಯುವಕ ಎನ್ನುವ ಒಂದೇ ಅಂಶ ಮಿಕ್ಕವರಿಗೆ ಟಕ್ಕರ್ ಕೊಟ್ಟರೂ ಕೊಡಬಹುದು. ಅವರಿಗೆ ಎಲ್ಲ ತಂತ್ರಗಳು ತಿಳಿದಿವೆ.
ಎಷ್ಟರ ಮಟ್ಟಿಗೆ ಅವರು ಈ ಸೀನಿಯರ್ ಗಳ ಎದುರು ಬುಗುರಿ ಆಡಿಸುವರು? ಯೋಗೇಶ್ ಮೇಲೆ ಯಾವುದೇ ರಾಜಕೀಯ ಕಪ್ಪು ಚುಕ್ಕೆಗಳಿಲ್ಲ. ಎದುರಾಳಿಗಳ ಅನುಭವದ ಸುಳಿಯಲ್ಲಿ ಸಿಕ್ಕು ಹೇಗೆ ಹೊರಬರುತ್ತಾರೆ? ಎನ್ನುವುದೇ ಅವರು ಗೆದ್ದೇಗೆಲ್ಲಲಿ ಎಂದು ಇಷ್ಟಪಡುವವರ ಒಳ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Gurudatta Hegde ಅತ್ಯಾಧುನಿಕ ತಂತ್ರಾಂಶವನ್ನು ಅರಿತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಿ : ಗುರುದತ್ತ ಹೆಗಡೆ

Gurudatta Hegde ನಾಗಾಲೋಟದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ...

MESCOM ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ.26 ರಂದು ಬೆಳಿಗ್ಗೆ...

Backward Classes Welfare Department ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ...

Department of Horticulture ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Horticulture ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ...