Karnataka Neuroscience Academy ಕರ್ನಾಟಕ ನ್ಯುರೋ ಸೈನ್ಸ್ ಅಕಾಡೆಮಿ ವತಿಯಿಂದ 12ನೇ ವಾರ್ಷಿಕ ವೈಜ್ಞಾನಿಕ ಸಮ್ಮೇಳನವನ್ನು ಏ.28,29,30ರಂದು ಶಿವಮೊಗ್ಗದ ಸುಬ್ಬಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಮಟ್ಟದ ಈ ಸಮ್ಮೇಳನದ ಜವಾಬ್ದಾರಿ ಹಾಗೂ ಆತಿಥ್ಯವನ್ನು ಶಿವಮೊಗ್ಗದ ಸಹ್ಯಾದ್ರಿ, ನ್ಯೂರೋ ಸೈಕ್ಯಾಟರಿ ಅಸೋಸಿಯೇಷನ್ ವಹಿಸಲಿದೆ ಎಂದು ಸಮ್ಮೇಳನದ ಆಯೋಜಕ ಡಾ.ಎ. ಶಿವರಾಮಕೃಷ್ಣ ಆರೂರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಏ.28 ಮತ್ತು 29ರಂದು ಪೂರ್ವಭಾವಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ.
Karnataka Neuroscience Academy ಹಾಗೆಯೇ ಏ.29ರ ಮಧ್ಯಾಹ್ನ 12 ಗಂಟೆಗೆ ಉದ್ಘಾಟನಾ ನಡೆಯಲಿದ್ದು, ಮುಖ್ಯ ಅತಿಥಿ ಯಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಬ್ರೈನ್ ರೀಸರ್ಚ್ ಲ್ಯಾಬ್‌ನ ನಿರ್ದೇಶಕ ಡಾ.ವೈ. ನರಹರಿ, ಎಸ್ ಎನ್ ಪಿಎ ಅಧ್ಯಕ್ಷ ಡಾ. ಹರೀಶ್ ದೇಲಂತಬೆಟ್ಟು, ಡಾ. ಕೆ ಆರ್ ಶ್ರೀಧರ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕೆಎನ್ಎ ಅಧ್ಯಕ್ಷರಾದ ಡಾ.ಎಸ್.ಪಿ. ಬಳಿಗಾರ್ ವಹಿಸಲಿದ್ದಾರೆ.
ಈ ಸಮ್ಮೇಳನದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ನರಶಾಸ್ತ್ರ ತಜ್ಞರು, ನರ ರೋಗ ಶಸ್ತ್ರ ಚಿಕಿತ್ಸಕರು, ಮನು ವೈದ್ಯರು ಹಾಗೂ ಇತರೆ ವೈದ್ಯರು ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನ್ಯುರೋ ಸರ್ಜನ್ ಡಾ.ಎಲ್. ಕೃಷ್ಣಮೂರ್ತಿ, ಡಾ. ಬಿ. ಎ. ಚಂದ್ರಮೌಳಿ, ಡಾ ಜಿ ಎಸ್ ಉಮಾಮಹೇಶ್ವರ ರಾವ್ ಅವರನ್ನು ಸನ್ಮಾನಿಸಲಾಗುವುದು.