BJP Karnataka ಮಾಜಿ ಉಪ ಮುಖ್ಯಮಂತ್ರಿ ಜಗದೀಶ ಶೆಟ್ಟರ್
ಭಾರತೀಯ ಜನತಾ
ಪಕ್ಷ ತ್ಯಜಿಸಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದು
ಪಕ್ಷದ್ರೋಹ ಮತ್ತು ಅಕ್ಷಮ್ಯ ಅಪರಾಧ ಎಂದು ಹೇಳಿಕೆ
ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ
ಪಕ್ಷ ಎಲ್ಲಾ ರಾಜಕೀಯ ಸ್ಥಾನ ಮಾನಗಳನ್ನು ಕೊಟ್ಟಿದ್ದರೂ
ಕಳೆದ 05 ವರ್ಷಗಳ ಹಿಂದೆ ತಾವೇ ಭಾರತೀಯ ಜನತಾ ಪಕ್ಷವನ್ನು
ತ್ಯಜಿಸಿ, ಕೆ.ಜೆ,ಪಿ. ಕಟ್ಟಿದ್ದು ಪಕ್ಷದ್ರೋಹ, ಅಕ್ಷಮ್ಯ ಅಪರಾಧವಲ್ಲವೆ ?
ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್
ಪ್ರಶ್ನಿಸಿದ್ದಾರೆ.
BJP Karnataka ಕಳೆದ ಮೂರುವರೆ ವರ್ಷಗಳ ಹಿಂದೆ ಕಾಂಗ್ರೇಸ್ ಸೇರಿದಂತೆ
ಇತರೆ ಪಕ್ಷಗಳ 22 ಜನ ಚುನಾಯಿತ ಶಾಸಕರನ್ನು
ಬಿ.ಎಸ್,ಯಡಿಯೂರಪ್ಪರ ಕುಮ್ಮಕ್ಕಿನಿಂದ ಆಮಿಷ್ಯ ತೋರಿಸಿ
ಕರೆದೊಯ್ದು ಸರ್ಕಾರ ಮಾಡಿದಾಗ, ವಿರೋಧ ಪಕ್ಷಗಳು ತಮ್ಮ
ಶಾಸಕರನ್ನು ಹಿಡಿದಿಟ್ಟುಕೊಳ್ಳದೆ ನಮ್ಮ ಮೇಲೆ ಗೂಬೆ ಕೂರಿಸುತ್ತಿವೆ
ಎಂದಿದ್ದರು.
ಈಗ ನಿಮ್ಮ ಶಾಸಕರನ್ನು ನೀವೇಕೆ ಹಿಡಿದಿಟ್ಟುಕೊಳ್ಳಲಿಲ್ಲ.
ಕಳೆದ 40 ವರ್ಷಗಳಿಂದ ಅಧಿಕಾರ ಅನುಭವಿಸಿದ್ದ
ಯಡಿಯೂರಪ್ಪರವರು ಕೆ.ಜೆ.ಪಿ. ಕಟ್ಟುವ ಮೂಲಕ ಮಾಡಿದ
ಪಕ್ಷದ್ರೋಹ, ಅನಾಚಾರ ಸರಿಯಾದುದ್ದು ಎಂದಾದರೆ, ಈಗ ಬಿ.ಜೆ,ಪಿ.
ನಾಯಕರಾದ ಜಗದೀಶ ಶೆಟ್ಟರ್, ಲಕ್ಷ್ಮಣ್ ಸವದಿ ಇತರರು ಬಿ.ಜೆ.ಪಿ. ಬಿಟ್ಟು
ಕಾಂಗ್ರೇಸ್ ಪಕ್ಷ ಸೇರಿರುವ ನಿರ್ಧಾರವೂ ಸರಿಯಾದುದ್ದೆ ಆಗಿದೆ ಎಂದು
ಸಮರ್ಥಿಸಿಕೊಂಡಿರುವ ಅವರು, ಪ್ರಜಾಪ್ರಭುತ್ವ
ವ್ಯವಸ್ಥೆಯನ್ನೆ ಕಗ್ಗೊಲೆ ಮಾಡುವ ರೀತಿಯಲ್ಲಿ ಒಂದು ಚುನಾಯಿತ
ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಶಾಸಕರನ್ನು
ಖರೀದಿಸುವಂತಹ ಭ್ರಷ್ಟಾತಿ ಭ್ರಷ್ಟ ವ್ಯವಸ್ಥೆಯ ಹುಟ್ಟು ಹಾಕಿದ
ಮಹಾನ್ ಕೀರ್ತಿ ಬಿ.ಎಸ್.ಯಡಿಯೂರಪ್ಪರಿಗೆ ಸಲ್ಲಬೇಕು ಎಂದು
ವೈ.ಬಿ.ಚAದ್ರಕಾಂತ್ ಕುಟುಕಿದ್ದಾರೆ.
ಕರ್ನಾಟಕ ಜನತಾ ಪಕ್ಷ ಕಟ್ಟಿ ಮಹಾ ಅಪರಾಧ ಮಾಡಿದ್ದರ ಬಗ್ಗೆ
ನಾನು ಈಗಾಗಲೆ ಕ್ಷಮೆ ಕೇಳಿದ್ದೇನೆಂದು
ಬಿ,ಎಸ್.ಯಡಿಯೂರಪ್ಪನವರು ಹೇಳಿರುವುದು ತಮ್ಮ ವಯಸ್ಸಿಗೂ,
ರಾಜಕೀಯ ಅನುಭವಕ್ಕೂ ತಾವೇ ಮಾಡಿಕೊಂಡ ದೊಡ್ಡ
ಅವಮಾನವಾಗಿದೆ. ಈಗಲೂ ಸಹ ಭಾರತೀಯ ಜನತಾ ಪಕ್ಷದ ದೆಹಲಿ ನಾಯಕರ ಮೇಲೆ ಬಿ.ಎಸ್.ಯಡಿಯೂರಪ್ಪರವರಿಗೆ ಕೋಪವಿದ್ದರೂ
ಬಿ.ಜೆ.ಪಿ.ಯ ದೊಡ್ಡ ನಾಯಕರು ತಮಗೆ ತೋರಿಸಿರುವ ಇ.ಡಿ, ಸಿ.ಬಿ.ಐ.
ನಂತಹ ಗುಮ್ಮಗಳಿಗೆ ಹೆದರಿ ಮನಸ್ಸಿಲ್ಲದ ಮನಸ್ಸಿನಿಂದ ಭಾರತೀಯ
ಜನತಾ ಪಕ್ಷದಲ್ಲಿ ಇರುವುದನ್ನು ಬಿ.ಎಸ್.ಯಡಿಯೂರಪ್ಪನವರು
ಈಗಲಾದರೂ ರಾಜ್ಯದ ಜನರ ಮುಂದೆ ಒಪ್ಪಿಕೊಳ್ಳುವ ದೈರ್ಯವನ್ನು
ತೋರಿಸಬೇಕೆಂದು.ಭಾರತೀಯ ಜನತಾ ಪಕ್ಷದ ನಾಯಕರ
ಅನಾಚಾರ ಮತ್ತು ಬ್ಲಾಕ್‌ಮೇಲ್ ರಾಜಕೀಯವನ್ನು ಗಟ್ಟಿ ದೈರ್ಯ ಮಾಡಿ
ಹೊರಗೆ ಎಳೆಯಬೇಕೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ
ವೈ,ಬಿ,ಚಂದ್ರಕಾಂತ್ ಆಗ್ರಹಿಸಿದ್ದಾರೆ.