karnataka Assembly Election ಸಾಗರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೋಪಾಲಕೃಷ್ಣ ಬೇಳೂರು ಅವರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಹೇಳಿದರು.
ಮಾದ್ಯಮಮಿತ್ರರೊಂದಿಗೆ ಮಾತನಾಡಿದ ಅವರು,’ ಹಾಲಪ್ಪ ಹರತಾಳು ಅವರಿಗೆ ಮತ ನೀಡಬೇಡಿ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೇ ಪ್ರಚಾರ ಮಾಡುತ್ತಿದ್ದಾರೆ. ಈ ಕಾರಣ ಇಲ್ಲಿ ಕಾಂಗ್ರೆಸ್ ಗೆ ಆಮ್ ಆದ್ಮಿ ಪಕ್ಷ ಪ್ರತಿಪಕ್ಷ ಸ್ಪರ್ಧಿಯೇ ಹೊರತು ಬಿಜೆಪಿಯಲ್ಲ ‘ ಎಂದು ಹೇಳಿದರು.
karnataka Assembly Election ಗೋಪಾಲಕೃಷ್ಣ ಬೇಳೂರು ತಮ್ಮ ಆಸ್ತಿಯ ಮೌಲ್ಯ 2.78 ಕೋಟಿ ರೂ , ಪತ್ನಿಯ ಆಸ್ತಿ ಮೌಲ್ಯ42.61 ರೂ ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ‘ಜನರ ಬದುಕಿನಲ್ಲಿ ಬದಲಾವಣೆ ತರುವ ಅಭಿವೃದ್ಧಿ ಕಾರ್ಯವನ್ನು ಜನಪ್ರತಿನಿಧಿ ಆದವರು ಮಾಡಬೇಕು. ಭೂಮಿಯ ಹಕ್ಕು ನೀಡುವಲ್ಲಿ ಶಾಸಕ ಹಾಲಪ್ಪ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವಿನ ಪತಾಕೆ ಹಾರಿಸಲಿದೆ ‘ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷ ಬಿ,ಆರ್ ಜಯಂತ್. ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್. ವಕೀಲ ವಿ,ಶಂಕರ್ ಉಪಸ್ಥಿತರಿದ್ದರು.