Saturday, December 6, 2025
Saturday, December 6, 2025

Kateel Ashok Pai College ಜ್ಞಾನದ ಬಳಕೆಯಲ್ಲಿ ಪ್ರತಿಯೊಬ್ಬರೂ ಫ್ಯಾಕ್ಟ್ ಚೆಕ್ ಮಾಡುವುದು ಅಗತ್ಯ- ಹೊನ್ನಾಳಿ ಚಂದ್ರಶೇಖರ್

Date:

Kateel Ashok Pai College ಶಿವಮೊಗ್ಗ ಮಾನಸ ಟ್ರಸ್ಟ್(ರಿ) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಒಂದು ವಾರಗಳ ವಿಶೇಷ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಶ್ರೀ. ಹೊನ್ನಾಳಿ ಚಂದ್ರಶೇಖರ್‌ರವರು ವಿದ್ಯಾರ್ಥಿಗಳಿಗೆ ಬೆರಳ ತುದಿಯಲ್ಲಿ ಸಿಗುವ ಜ್ಞಾನವನ್ನು ಬಳಸುವಾಗ ಪ್ರತಿಯೊಬ್ಬರಿಗೂ ಫ್ಯಾಕ್ಟ್ಚೆಕ್ ಅಥವಾ ನಿಜ ವಿಷಯದ ಪರಿಶೀಲನೆಯ ತಿಳುವಳಿಕೆ ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಶಿವಮೊಗ್ಗದ ಪ್ರಖ್ಯಾತ ಕನ್ನಡ ಮೀಡಿಯಂ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾದ ಶ್ರೀ ಹೊನ್ನಾಳಿ ಚಂದ್ರಶೇಖರ್‌ರವರನ್ನು ಮಾನಸ ಟ್ರಸ್ಟ್ ಹಾಗೂ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಅವರು ಯುವಜನರಾದ ವಿದ್ಯಾರ್ಥಿಗಳು ಉತ್ಸಾಹ ಹಾಗೂ ಉಲ್ಲಾಸದಿಂದ ಕಲಿಯಬಲ್ಲ ಹಲವಾರು ವಿಷಯಗಳು ಇಂದು ಇರುತ್ತವೆ. ಆದರೆ ಯಾವುದು ಅಗತ್ಯ ಹಾಗೂ ಸತ್ಯ ಎಂಬ ತಿಳುವಳಿಕೆ ಮುಖ್ಯ ಎಂದರು.

Kateel Ashok Pai College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಒಂದು ಮಾದರಿ ಶಿಕ್ಷಣ ಸಂಸ್ಥೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಓದುತ್ತಿರುವ ಬಿ.ಎ., ಬಿಎಸ್‌ಡಬ್ಲ್ಯೂ ಬಿ.ಎಸ್ಸಿ., ಬಿ.ಸಿ.ಎ., ಹಾಗೂ ಬಿ. ಕಾಂ ವಿದ್ಯಾರ್ಥಿಗಳಿಗೆ ಒಂದು ವಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿಯ ವಿಶೇಷ ಉಚಿತ ಕಾರ್ಯಾಗಾರ ಹಾಗು ಇಂಗ್ಲಿಷ್ ಸಂವಹನ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ದಿನಾಂಕ 28.03.2023 ರಿಂದ ಹಮ್ಮಿಕೊಳ್ಳಲಾಗಿತ್ತು.

ನಗರದ ಅಚೀರ‍್ಸ್ ಕೋಚಿಂಗ್ ಸೆಂಟರ್‌ನ ತರಬೇತುದಾರರು ಪ್ರತಿದಿನ ಎರಡು ಗಂಟೆಗಳ ಕಾಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ತರಬೇತಿಯನ್ನು ನೀಡಿದರು.

ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಇಂಗ್ಲಿಷ್ ಸಂವಹನ ತರಬೇತಿಯನ್ನೂ, ಮನಃಶಾಸ್ತ್ರ ವಿಭಾಗದಿಂದ ಜೀವನಕೌಶಲ್ಯ ತರಬೇತಿಯನ್ನೂ ನೀಡಲಾಯಿತು.

ಕಾಲೇಜಿನ ದಿಶಾ ಕೆರಿಯರ್ ಗೈಡನ್ಸ್ ಸೆಂಟರ್‌ನ ವತಿಯಿಂದ ನಡೆಸಲಾದ ಈ ತರಬೇತಿಯು ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಮುಂದಿನ ತಮ್ಮ ವೃತ್ತಿಗಳಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲು ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿತು.

ಈ ತರಬೇತಿಯ ಸಮಾರೋಪ ಸಮಾರಂಭವನ್ನು ದಿನಾಂಕ 05.04..2023 ರಂದು ಹಮ್ಮಿಕೊಳ್ಳಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಚೀರ‍್ಸ್ ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಶ್ರೀ ಎ. ಎಸ್. ಶಿವಕುಮಾರ್‌ರವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಪ್ರಥಮ ವರ್ಷದ ಪದವಿಯಿಂದಲೇ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯಂತ ವೈಜ್ಞಾನಿಕ ಕ್ರಮ. ಆದುದರಿಂದ ಈ ತರಬೇತಿ ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ರಾಜೇಂದ್ರ ಚೆನ್ನಿಯವರು ಏಳು ದಿನಗಳ ತರಬೇತಿಯ ನಂತರ ಈ ಎಲ್ಲಾ ವಿದ್ಯಾರ್ಥಿಗಳು ಈ ಅಧ್ಯಯನವನ್ನು ಮುಂದುವರೆಸಬೇಕು. ಪದವಿ ಶಿಕ್ಷಣದೊಂದಿಗೆ ವಿವಿಧ ಸರ್ಟಿಫಿಕೇಟ್ ಕೋಸ್‌ಗಳನ್ನು ಮಾಡಿಕೊಳ್ಳುವುದು ವಿದ್ಯಾರ್ಥಿಯ ಔದ್ಯೋಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಇವರೊಂದಿಗೆ ಕಾರ್ಯಕ್ರಮದಲ್ಲಿ ಅಚೀವರ್ಸ್ ಶ್ರೀ ವರುಣ್, ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ
ಪ್ರೊ. ಮಂಜುನಾಥ್ ಡಿ. ಎಸ್., ದಿಶಾದ ಸಂಚಾಲಕರಾದ ಶ್ರೀ ಗಣೇಶ್, ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಕೆ., ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ಅಜಯ್ ನಡೆಸಿದರು. ಕು. ಸಿಮಂತಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಶ್ರೀ ವಿಷ್ಣು ಸ್ವಾಗತಿಸಿ, ಶ್ರೀ ಗಣೇಶ್ ವಂದಿಸಿದರು.

5 COMMENTS

  1. The classes of competitive exams ( coaching class)were very useful. It motivated me to enter into exams. It gave the clear path to it. Thankyou all for all your efforts and giving this wonderful opportunity to us ..

  2. I got well and good experience in this 7days program it so use full to us thanks for college administration for this meaning full sessions

  3. Thankyou for the coaching class of competitive exams. It was very useful. It gave a clear path about the exams. Thankyou again..

  4. Thank you for giving this apporchunte I using this coaching class I wishing atten the comptative exam Thanks for ma’am

Leave a Reply to Sumathi R Cancel reply

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...