Benefits Of Donkey Milk ಮಹಿಳೆಯರ ಸೌಂದರ್ಯವರ್ಧನೆಯ ಕುರಿತು ಮೇನಕಾ ಗಾಂಧಿ ಅವರು ಮಾತನಾಡಿದ್ದು, ಕತ್ತೆಯ ಹಾಲಿನ ಸಾಬೂನು ಯಾವಾಗಲೂ ಮಹಿಳೆಯರ ದೇಹವನ್ನು ಸುಂದರವಾಗಿ ಇಡುತ್ತದೆ ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುತ್ತದೆ ಎಂದು ಮೇನಕಾ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
Benefits Of Donkey Milk ಇದರ ಜೊತೆಯೇ ನೀವು ಕತ್ತೆಯನ್ನು ನೋಡಿ ಎಷ್ಟು ದಿನವಾಯಿತು? ಅವುಗಳ ಸಂಖ್ಯೆ ಕುಸಿಯುತ್ತಿದೆ. ದೋಬಿಗಳು ಕೂಡ ಕತ್ತೆಗಳನ್ನು
ಬಳಸುವುದನ್ನು ನಿಲ್ಲಿಸಿದ್ದಾರೆ ಎಂದರು.
ಇದರೊಂದಿಗೆ ಈಜಿಪ್ಟ್ ರಾಣಿ ಕ್ಲಿಯೋಪಾತ್ರಾ ಕೂಡ ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಎಂದು ಹೇಳಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಈ ಸ್ವಾರಸ್ಯಕರ ಸುದ್ದಿ ಓದಿದ ಮೇಲೆ ನೀವು ಯಾರಿಗೂ “ಥೂ ಕತ್ತೆ!” ಅಂತ ಬೈಯಲಾರಿರಿ ಅಲ್ಲವೆ?