Friday, September 27, 2024
Friday, September 27, 2024

World Theater Day ಪ್ರಪಂಚದ ಎಲ್ಲಾ ನಾಗರಿಕತೆಗಳಲ್ಲಿ ನಾಟಕ ಆರಂಭದ ಹಂತದಲ್ಲೇ ಬೆಳೆದ ಕಲೆ-ಪ್ರೊ.ಬಿ.ಎಂ.ಕುಮಾರಸ್ವಾಮಿ

Date:

World Theater Day ಭಾವನೆಗಳನ್ನು ಇತರಿಗೆ ವ್ಯಕ್ತಪಡಿಸುವುದಕ್ಕೆ ಪಳಗಿಸಿಕೊಂಡಂತಹ ಅತ್ಯಂತ ಪುರಾತನ ಹಾಗೂ ಸಹಜವಾದ ಮಾಧ್ಯಮವೆಂದರೆ ಅದು ರಂಗಭೂಮಿ ಎಂದು ಹಿರಿಯ ರಂಗಕರ್ಮಿ ಗಳಾದ ಪ್ರೊ. ಬಿ ಎಂ. ಕುಮಾರಸ್ವಾಮಿಯವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಕೆ ಲೈವ್ ನ್ಯೂಸ್ ಮಾಧ್ಯಮ ಹಾಗೂ ಕಟೀಲ್ ಅಶೋಕ್ ಪೈ. ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆಯ ಪ್ರಯುಕ್ತ ರಂಗ ಮಂಚ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಪಂಚದ ಎಲ್ಲಾ ನಾಗರಿಕತೆಗಳಲ್ಲಿ ಪ್ರಾರಂಭದ ಹಂತದಲ್ಲಿ ನಾಟಕ ಅಥವಾ ರಂಗಭೂಮಿ ಬಹಳ ಮುಖ್ಯವಾದದ್ದು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ‌ ತಿಳಿಸಿದರು.

ಹಿಂದಿನ ಕಾಲದಲ್ಲಿ ಯಾವುದೇ ಆಧುನಿಕ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ನಾಟಕವು ಪ್ರಮುಖವಾದಂತಹ ಮಾಧ್ಯಮವಾಗಿತ್ತು. ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಕಾಲ ನಿರಂತರವಾಗಿ, ಜೀವಂತವಾಗಿ ಪ್ರಸಾರ ಮಾಡಿದ ಕೀರ್ತಿ ನಮ್ಮ ನಾಟಕಗಳಿಗೆ ತಲುಪಬೇಕು ಎಂದರು.

ಮುಖ್ಯ ಅತಿಥಿಗಳಾದ ಹಿರಿಯರಂಗ ಸಂಘಟಕರು, ರಂಗ ಸಮಾಜದ ಮಾಜಿ ಸದಸ್ಯರಾದ ಎಸ್ ಆರ್ ಹಾಲಸ್ವಾಮಿ ಅವರು ಮಾತನಾಡಿ, ರಂಗಭೂಮಿಯಲ್ಲಿ ನಟರೆಲ್ಲರೂ ಒಂದೇ. ವೈಯಕ್ತಿಕ ಜೀವನದಲ್ಲಿ ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ರಂಗಭೂಮಿಯಲ್ಲಿ ನಟರೆಲ್ಲರೂ ಒಂದೇ ಎಂದು ತಿಳಿಸಿದರು.

ರಂಗ ಭೂಮಿಯಲ್ಲಿ ಒಬ್ಬ ನಟ ತನ್ನ ಸಂಭಾಷಣೆಯನ್ನ ಮರೆತರೆ, ಇನ್ನೊಬ್ಬ ನಟ ಸಂಭಾಷಣೆಯನ್ನು ಸರಿದೂಗಿಸಿಕೊಂಡು ಹೋಗಬೇಕು. ರಂಗಭೂಮಿಯಲ್ಲಿ ನಟರಿಗೆ ಹಾಗೂ ಪ್ರೇಕ್ಷಕರಿಗೆ ನೇರವಾದ ಸಂಬಂಧವಿರುತ್ತದೆ ಎಂದರು.

ಕೆ ಲೈವ್ ನ್ಯೂಸ್ ಪ್ರಧಾನ ಸಂಪಾದಕರಾದ ಡಾ. ಸುಧೀಂದ್ರ ಅವರು ಮಾತನಾಡಿ,
ಆಡಿಟೋರಿಯಂ ನಲ್ಲಿ ಕುಳಿತು ನಾಟಕವನ್ನು ವೀಕ್ಷಿಸುವ ನಾಟಕಗಳು ಬೇರೆ, ಒಬ್ಬರೇ ಕುಳಿತು ನಾಟಕಗಳನ್ನ ಕೇಳುವುದೇ ಬೇರೆ. ಕೇಳುಗ, ಕಥೆಯನ್ನು ಕೇಳುವ ಮುಖಾಂತರ ತನ್ನ ಕಲ್ಪನೆಯಲ್ಲಿ ತನ್ನದೇ ಆದ ದೃಶ್ಯಗಳನ್ನ ಕಲ್ಪಿಸಿಕೊಳ್ಳುತ್ತಾನೆ. ರಂಗಭೂಮಿಯಲ್ಲಿ ಒನ್ ಸ್ಮೋರ್ ಗೆ ಅವಕಾಶವಿರುತ್ತದೆ. ಆದರೆ ಸಿನಿಮಾ ರಂಗದಲ್ಲಿ ವನ್ಸ್ ಮೋರ್ ಗೆ ಅವಕಾಶವಿರುವುದಿಲ್ಲ ಎಂದು ಸಿನಿಮಾ, ಮಾಧ್ಯಮ ಹಾಗೂ ರಂಗಭೂಮಿಗೆ ಇರುವ ವ್ಯತ್ಯಾಸವನ್ನು ತಿಳಿಸಿದರು.

ಕೆ ಲೈವ್ ನ್ಯೂಸ್ ಕೇವಲ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆ
ಸಮುದಾಯದ ,ಯುವ ಜನತೆಯ ಆಶೋತ್ತರಗಳನ್ನ ಬಿಂಬಿಸುವಲ್ಲಿಯೂ ತನ್ನದೇ ವಿಶಿಷ್ಟ ಪ್ರಯತ್ನ ಮಾಡುತ್ತಿದೆ ಎಂದು ಡಾ.ಸುಧೀಂದ್ರ ಅವರು ತಿಳಿಸಿದರು.

ನಂತರದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ವಿದ್ಯಾರ್ಥಿಗಳು ನಾಟಕಗಳನ್ನ ಹೆಚ್ಚು ಹೆಚ್ಚು ನೋಡಬೇಕು. ನಾಟಕವನ್ನು ಬಳಸಿ ಇತರರಿಗೆ ಅರಿವನ್ನ ಉಂಟು ಮಾಡಬಹುದು. ನಾಟಕವು ನೋಡುಗನಿಗೆ ಮಾನಸಿಕ ಚಿಕಿತ್ಸೆಯನ್ನು ಕೊಡುವ ಕೆಲಸ ಕೂಡ ನಾಟಕ ಮಾಡುತ್ತದೆ ಎಂದರು.

ರಂಗ ಕಲಾವಿದರಾದ ಕು.ನಾದ ಅವರು ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ನಾಟಕದ ಹೃದಯಂಗಮ ಭಾಗವನ್ನ ಏಕಪಾತ್ರಾಭಿನಯದಲ್ಲಿ ಪ್ರಸ್ತುತ ಪಡಿಸಿದರು. ಅವರ ಅಭಿನಯ ವೀಕ್ಷಕರ ಮನಗೆದ್ದಿತು.

World Theater Day ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಂದ ಜನರಲ್ಲಿ ಅರಿವು ಮೂಡಿಸುವ ಕಾನ್ಸರ್ ಕುರಿತು ಕಿರು ನಾಟಕ ಪ್ರದರ್ಶನ ಗೊಂಡಿತು.

ಈ ಸಂದರ್ಭದಲ್ಲಿ ಶ್ರೀ. ಬೇಲೂರು ರಘುನಂದನ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬೋಧಕ, ಬೋಧಕೇತರು, ವಿದ್ಯಾರ್ಥಿಗಳು, ಕೆ ಲೈವ್ ನ್ಯೂಸ್ ಮಾಧ್ಯಮ ಮಿತ್ರರು ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...