Emergency Treatment ಅಪಘಾತದ ತುರ್ತು ಸಂದರ್ಭದಲ್ಲಿ ದೊರೆಯುವ ಸೂಕ್ತ ಪ್ರಥಮ ಚಿಕಿತ್ಸೆ ಯಿಂದಾಗಿ ಜೀವವನ್ನು ಉಳಿಸಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಾಥಮಿಕ ಜ್ಞಾನ ಹೊಂದಿರಬೇಕು ಎಂದು ರೆಡ್‌ಕ್ರಾಸ್ ರಾಜ್ಯ ಸಮಿತಿ ನಿರ್ದೇಶಕ ಡಾ. ಕೆ.ಸುಂದರಗೌಡ ಹೇಳಿದರು.
ಚಿಕ್ಕಮಗಳೂರು ನಗರದ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅಪಘಾತಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ಜೀವರಕ್ಷಣೆಗೆ ಸಹಕಾರಿ. ಆದರೆ, ಹಲವಾರು ಅಡ್ಡಿ, ಆತಂಕ ಗಳಿಂದ ಜನಸಾಮಾನ್ಯರು ದೂರ ಸರಿಯುತ್ತಾರೆ. ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಯಾರು ಹಿಂಜರಿಯಬಾರದು. ಇದಕ್ಕೆ ಯಾವುದೇ ಕಾನೂನು ತೊಡಕು ಬರಲಾರದು ಎಂದು ಕಿವಿಮಾತು ಹೇಳಿದರು.
ಪ್ರಥಮ ಚಿಕಿತ್ಸೆಯ ಮುಖ್ಯ ಅಂಶಗಳೆಂದರೆ ರಸ್ತೆ ಅಪಘಾತಗಳಂತಹ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದರೆ ಅವರನ್ನು ದೂರವಿರಿಸಿ ಉತ್ತಮ ಗಾಳಿ ದೊರೆಯುವಂತೆ ಮಾಡಬೇಕು. ರಕ್ತಸೋರಿಕೆ ಕಂಡುಬಂದಲ್ಲಿ ಕೂಡಲೇ ವಸ್ತçದ ಮೂಲಕ ಗಟ್ಟಿಯಾಗಿ ಒತ್ತಿಕೊಂಡು ಗಾಯದ ಜಾಗಕ್ಕೆ ಕಟ್ಟುವುದರಿಂದ ರಕ್ತಸ್ರಾವ ಕಡಿಮೆಯಾ ಗಲಿದೆ ಎಂದು ಮಾಹಿತಿ ನೀಡಿದರು.
1859 ರಲ್ಲಿ ಯುದ್ಧಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್ ಎಂಬುವವರು ರೆಡ್‌ಕ್ರಾಸ್ ಸಂಸ್ಥೆಯನ್ನು ಆರಂಭಿಸಿ ಪ್ರಥಮ ಚಿಕಿತ್ಸೆಯ ಮಹತ್ವವನ್ನು ತಿಳಿಸಿದರು.
ಪ್ರಥಮ ಚಿಕಿತ್ಸೆಯ ಸರಿಯಾದ ಜ್ಞಾನವಿಲ್ಲ ದೇ ಹೋದರೆ ಗಾಯಾಳು ವ್ಯಕ್ತಿ ಅಕಾಲಿಕ ಮರಣವೂ ಸಂಭವಿಸಲಿದೆ ಎಂದು ಎಚ್ಚರಿಸಿದರು.
ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ ಪ್ರಥಮ ಚಿಕಿತ್ಸೆ ಎಂದರೆ ಯಾವುದೇ ರೀತಿಯ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂದು ಹೇಳಲಾಗಿದೆ.
Emergency Treatment ಆಸ್ಪತ್ರೆಗೆ ಕರೆದೊಯುವ ಮೊದಲು ಜನಸಾಮಾನ್ಯರು ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಉಪಕರಣಗಳ ಅಥವಾ ಅತ್ಯಾಧುನಿಕ ವೈದ್ಯಕೀಯ ಬಳಕೆಗೆ ಇರುವುದಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಕಾರ್ಯದರ್ಶಿ ರಸೂಲ್‌ಖಾನ್, ನಿರ್ದೇಶಕ ವಿಲಂ ಪಿರೇರಾ, ಶಾಲೆಯ ಮುಖ್ಯಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.