Kuvempu University ಅಂತಾರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್‌ತಾಣವು ಬಿಡುಗಡೆಗೊಳಿಸಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಶಂಕರಘಟ್ಟ ಕುವೆಂಪು ವಿವಿಯ ಡಾ. ಬಿ ಜೆ ಗಿರೀಶ್ ಭಾರತದಲ್ಲಿಯೇ ಅಗ್ರ 8ನೇ ಸ್ಥಾನ ಪಡೆದಿದ್ದಾರೆ.
ರಿಸರ್ಚ್ ಡಾಟ್ ಕಾಂ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುವ ಖ್ಯಾತ ತಾಣವಾಗಿದೆ. ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ವರದಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಭಾರತದ ಉತ್ತಮ ಸಂಶೋಧಕರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದಾರೆ.
238 ಸಂಶೋಧನಾ ಲೇಖನ ಪ್ರಕಟಿಸಿದೆ. 6000ಕ್ಕೂ ಅಧಿಕ ಬಾರಿ ಅವು ಸಂಶೋಧಕರುಗಳಿಂದ ಮರು ಉಲ್ಲೇಖ, ಪರಾಮರ್ಶನ ಕಂಡಿವೆ. ಒಟ್ಟು ಡಿ-ಇಂಡೆಕ್ಸ್ನಲ್ಲಿ 43 ಅಂಕಗಳನ್ನು ಗಳಿಸಿದ್ದಾರೆ.
ಜಾಗತಿಕವಾಗಿ 942ನೇ ಸ್ಥಾನದಲ್ಲಿರುವ ಅವರು ಭಾರತದ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ.
Kuvempu University ಥರ್ಮೊಡೈನಾಮಿಕ್ಸ್, ಮೆಕ್ಯಾನಿಕ್ಸ್, ಶಾಖ ಪ್ರಸರಣೆ ವಿಷಯ ಮತ್ತು ಉಪವಿಷಯಗಳಲ್ಲಿನ ಅವರ ಸಂಶೋಧನಾ ಪ್ರಖರತೆಯನ್ನು ಗಮನಿಸಿ ಈ ಸ್ಥಾನವನ್ನು ನೀಡಿರುವುದಾಗಿ ರಿಸರ್ಚ್ ಡಾಟ್ ಕಾಂ ತಿಳಿಸಿದೆ.
ಸಂಸ್ಥೆಯು ಸಂಶೋಧನೆಯ ಗುಣಮಟ್ಟ ಮತ್ತು ಪರಾಮರ್ಶನವನ್ನು ಗಮನಿಸಿ ರ‍್ಯಾಂಕಿಂಗ್ ಹಾಗೂ ಡಿ-ಇಂಡೆಕ್ಸ್ ನೀಡುತ್ತದೆ. ಕಳೆದ ಹಲವು ವರ್ಷಗಳಿಂದ ವಿವಿಯು ಸಂಶೋಧನೆಯಲ್ಲಿ ಉತ್ತಮ ಸಾಧನೆಗೈಯುತ್ತಿದ್ದು, ಡಾ. ಗಿರೀಶ್ ಬಿ .ಜೆ ಸಾಧನೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿನಂದಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.