Saturday, December 6, 2025
Saturday, December 6, 2025

Women’s Day ವೃದ್ಧಾಪ್ಯದಲ್ಲಿ ಬಹಳ ಪೋಷಕರು ಒಂಟಿಯಾಗಿರುವುದು ದುರಾದೃಷ್ಟಕರ- ರವೀಂದ್ರನಾಥ್ ಐತಾಳ್

Date:

Women’s Day ಶಿವಮೊಗ್ಗ: ಪ್ರಪಂಚದಲ್ಲಿ ಹೆಚ್ಚಿನ ಮನೆಯಲ್ಲಿ ತಂದೆ ತಾಯಿಯರು ವೃದ್ಧಾಪ್ಯದಲ್ಲಿ ಒಂಟಿಯಾಗಿರುವುದು ದುರದೃಷ್ಟಕರ ಎಂದು ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ್ ಹೇಳಿದರು.

ಕೆನರಾ ಬ್ಯಾಂಕ್ ನಿವೃತ್ತರ ಅಸೋಸಿಯೇಷನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ನಗರದ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವ, ಪ್ರೀತಿಸುವ ಮನೋಭಾವ ಇರಬೇಕು. ಉತ್ತಮ ಕೆಲಸಗಳನ್ನು ಜೀವನದಲ್ಲಿ ಮಾಡಬೇಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಪ್ರಯುಕ್ತ ಕೆನರಾ ಬ್ಯಾಂಕ್ ನಿವೃತ್ತರ ರಾಜ್ಯ ಅಸೋಸಿಯೇಷನ್ ಮುಖಂಡರು 30,000 ರೂ. ದೇಣಿಗೆ ನೀಡಿದರು.

ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಎನ್.ಚಂದ್ರಶೇಖರ್ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಹಣಕಾಸು ಒದಗಿಸುವ ಉದ್ದೇಶ ವಿವರಿಸಿದರು.

ರಾಜ್ಯ ಅಸೋಸಿಯೇಷನ್ ಕಾರ್ಯದರ್ಶಿ ಉಮಾ ವಿ.ಕುಮಾರ್ ಮಾತನಾಡಿ, ಇವತ್ತು ನಾವು ನೀಡುವ ದೇಣಿಗೆ ಅಲ್ಪವಾಗಿದ್ದರೂ ಸಂದರ್ಭೋಚಿತ ನ್ಯಾಯಸಮ್ಮತ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪಲಾನುಭವಿಗಳು ಇರುವುದು ಆಚರಣೆಗೆ ಶಕ್ತಿ ಬಂದಿದೆ ಎಂದು ಹೇಳಿದರು.

Women’s Day ಎಲ್ಲರ ಬದುಕಿಗೆ ಆಧಾರ ಸ್ತಂಭ ಮಹಿಳೆ. ಮಗುವಾಗಿ, ಮಗಳಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಮತ್ತು ಮಡದಿಯಾಗಿ ಶಕ್ತಿಯನ್ನು ಹೊಂದಿರುವ ದೇವತೆ ಮಹಿಳೆ. ನನ್ನ ಬಯಕೆ ಅನಾಥಾಶ್ರಮದಲ್ಲಿ ಸೇರುವ ಜನರ ಸಂಖ್ಯೆ ಕಮ್ಮಿಯಾಗಬೇಕು. ಅವರವರ ಮನೆಯಲ್ಲಿ ಹಿರಿಯರಲ್ಲಿ ಪ್ರೀತಿ ಗೌರವ ವಿಶ್ವಾಸ ಜಾಸ್ತಿಯಾಗಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಟನೆಯ ಪ್ರಮುಖರಾದ ಸುಬ್ಬಲಕ್ಷ್ಮೀ ಪ್ರಮೀಳಾ ಹಾಗೂ ನವೀನ ಕುಮಾರವರು ಸಮಸ್ತ ನಾರಿಶಕ್ತಿಗೆ ಶುಭ ಹಾರೈಸಿದರು. ಆರೈಕೆ ಕೇಂದ್ರದ ಶಿವಪ್ಪ ಗೌಡರು ಎಲ್ಲರನ್ನು ಸ್ವಾಗತಿಸಿದರು.

ಆರೈಕೆ ಕೇಂದ್ರದ ಕಾರ್ಯದರ್ಶಿ ಹಿರೇಮಠ ಅವರು ಚಂದ್ರಶೇಖರ ಹಾಗೂ ನಿರ್ದೇಶಕರಾದ ಜಯಾ ಸುರೇಶ್, ಉಮಾ ವಿ.ಕುಮಾರ್ ಅವರನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಕೆನರಾ ಬ್ಯಾಂಕ್‌ನ ಅನೇಕ ನಿವೃತ್ತ ನೌಕರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...