Saturday, November 23, 2024
Saturday, November 23, 2024

Taxi Driver ಟ್ಯಾಕ್ಸಿ ಚಾಲಕರು ಪ್ರಯಾಣಿಕರೊಂದಿಗೆ ಉತ್ತಮ ಒಡನಾಟ ಹೊಂದಿರಬೇಕು- ನಿವೃತ್ತ ಯೋಧ ನಾಗಾರಾಜ್

Date:

Taxi Driver  ಟ್ಯಾಕ್ಸಿ ಚಾಲಕರು ವೃತ್ತಿ ಜೀವನದಲ್ಲಿ ಪ್ರಯಾಣಿಕರೊಂದಿಗೆ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದರೆ ಮಾತ್ರ ಚಾಲನೆ ವೃತ್ತಿಯಲ್ಲಿ ಮುಂದುವರೆದು ಯಶಸ್ಸುಗಳಿಸಲು ಸಾಧ್ಯ ಎಂದು ನಿವೃತ್ತ ಯೋಧ ನಾಗರಾಜ್ ತೋರಣಮಾವು ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ ಜಿಲ್ಲಾ ಘಟಕದ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯ ಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Taxi Driver  ದೇಶಕ್ಕಾಗಿ ಹೋರಾಡುವ ಸೈನಿಕನ ಶಿಸ್ತನ್ನು ಚಾಲಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಯಾಣಿಕರೊಂದಿಗೆ ಚಾಲಕರು ಸನ್ನಡತೆ, ಸದ್ಬುಧಿ ಹಾಗೂ ಉತ್ತಮ ವ್ಯವಹಾರಗಳನ್ನು ಮಾಡಿಕೊಂಡಲ್ಲಿ ಮಾತ್ರ ಮುಂದಿನ ವೃತ್ತಿ ಜೀವನದಲ್ಲಿ ಹೆಸರು ಸಂಪಾದಿಸಬಹುದು ಎಂದು ಕಿವಿಮಾತು ಹೇಳಿದರು.

ಚಾಲನೆ ವೃತ್ತಿಯಲ್ಲಿರುವವರು ಪ್ರಯಾಣಿಕರಲ್ಲಿ ಯಾವುದೇ ಜಾತಿ, ಬೇಧ ಮಾಡದೇ ಕಾರ್ಯನಿರ್ವ ಹಿಸಬೇಕು. ಆಗ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಚಾಲಕರು ತಮ್ಮ ವೃತ್ತಿಯನ್ನು ಗೌರವಿ ಸಿದಂತೆ ಪ್ರತಿಯೊಬ್ಬ ಪ್ರಯಾಣಿಕರನ್ನು ಗೌರವಿಸಿದಾಗ ಮಾತ್ರ ಯಶಸ್ಸು ಕಾಣಬಹುದು ಎಂದು ತಿಳಿಸಿದರು.

ಅರ್ಗನೈಜೇಷನ್ ರಾಜ್ಯಾಧ್ಯಕ್ಷ ರಮೇಶ್‌ಕುಮಾರ್ ಕುಂದಾಪುರ ಮಾತನಾಡಿ ಟ್ಯಾಕ್ಸಿ ಚಾಲಕರ ಬಳಗವು ಈಗಾಗಲೇ ರಾಜ್ಯಾದ್ಯಂತ ಸ್ಥಾಪನೆಯಾಗಿ ಅಧಿಕೃತವಾಗಿ 13 ಜಿಲ್ಲೆಗಳಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಂಘದಲ್ಲಿ ನೊಂದಣಿಯಾದ ಚಾಲಕರಿಗೆ ತುರ್ತು ಸಂದರ್ಭ ಎದುರಾದಲ್ಲಿ ಆಯಾ ಜಿಲ್ಲಾವಾರು ಸಂಘಗಳು ಸಹಾಯಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಿವೆ ಎಂದು ತಿಳಿಸಿದರು.

ಇದೀಗ ವೈಟ್‌ಬೋರ್ಡ್ ಟ್ಯಾಕ್ಸಿಗಳ ಹಾವಳಿಗಳು ಪ್ರತಿಯೊಂದು ಜಿಲ್ಲೆಗಳಲ್ಲೂ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ನ್ಯಾಯಬದ್ಧ ಹೋರಾಟ ಮಾಡಲಾಗುತ್ತದೆ ಎಂದ ಅವರು ಎಲ್ಲಾ ಟ್ಯಾಕ್ಸಿ ಚಾಲಕರುಗಳು ಒಗ್ಗಟ್ಟಾಗಿ ಕೈಜೋಡಿಸಿದರೆ ವೈಟ್‌ಬೋರ್ಡ್ ಹಾವಳಿಯ ವಾಹನಗಳನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರ್ಗನೈಜೇಷನ್ ಜಿಲ್ಲಾಧ್ಯಕ್ಷ ಹೆಚ್.ಕೆ.ಪ್ರಕಾಶ್ ಕೆಟಿಡಿಓದಲ್ಲಿ ನೊಂದಣೀಯಾದಂತಹ ಚಾಲಕರಿಗೆ ಆಕಸ್ಮಿಕವಾಗಿ ಅಪಘಾತ ಅಥವಾ ಅಂಗವೈಫಲ್ಯಗಳಂತಹ ಸಮಸ್ಯೆ ಕಂಡು ಬಂದಲ್ಲಿ ಸರ್ವ ಸದಸ್ಯರುಗಳ ಸಹಕಾರದೊಂದಿಗೆ ಪರಿಹಾರ ವಿತರಣೆ ಮಾಡಲಾಗುತ್ತದೆ. ಜೊತೆಗೆ ಆರೋಗ್ಯ ಶಿಬಿರ, ನೇತ್ರ ತಪಾಸಣೆಯನ್ನು ನಡೆಸಿ ಚಾಲಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೆಟಿಡಿಓ ಚಾಲಕರ ಕುಟುಂಬದವರಿಗೆ ಮನರಂಜನೆಯ ಸಲುವಾಗಿ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.

ಇದೇ ವೇಳೆ ಟ್ಯಾಕ್ಸಿ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ ನೂತನ ಅಧ್ಯಕ್ಷರಾಗಿ ಪ್ರಕಾಶ್, ಉಪಾಧ್ಯಕ್ಷರಾಗಿ ಪಿಲಿಕ್ಸ್ ಪಿಂಟೋ, ಉಮೇಶ್, ಗೌರವಾಧ್ಯಕ್ಷ ಸುಂದ್ರೇಶ್, ಕಾರ್ಯದರ್ಶಿ ಗಿರೀಶ್, ಸಹ ಕಾರ್ಯದರ್ಶಿಗಳಾಗಿ ಆರ್.ರವಿ, ಹರ್ಷದ್, ಕೋಶಾಧಿಕಾರಿ ಕಿಶೋರ್, ಸಹ ಕೋಶಾಧಿಕಾರಿ ಮಂಜು, ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಉಮೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಮೇಶ್ ಶೃಂಗೇರಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ರೇವಣ್ಣ, ಅರ್ಗನೈಜೇಷನ್ ಗೌರವಾಧ್ಯಕ್ಷ ಸುಂದ್ರೇಶ್, ಕಾರ್ಯದರ್ಶಿ ಗಿರೀಶ್, ಕೋಶಾಧಿಕಾರಿ ಕಿಶೋರ್ ಹಾಗೂ ಹಾಸನ ಮತ್ತು ಉಡುಪಿ ಜಿಲ್ಲಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...