Government Employee Strike ಮಾ. 1 ರಿಂದ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು
ಶಿವಮೊಗ್ಗದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.
ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲಾಗುತ್ತದೆ.
ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ನಾವೆಲ್ಲರೂ ಸರ್ಕಾರದ ಪರವಾಗಿ ಕೆಲಸ ಮಾಡಿದ್ದೆವೆ.
ಆದರೆ, ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ.
ಆದರೆ, 7 ನೇ ವೇತನ ಆಯೋಗ ಜಾರಿಗೊಳಿಸಿಲ್ಲ.
7 ನೇ ವೇತನ ಆಯೋಗದಿಂದ ಶೇ. 40 ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದೆವೆ ಎಂದು ಹೇಳಿದರು.
Government Employee Strike ನಾವು ಸರ್ಕಾರದ ವಿರುದ್ಧ ಪ್ರತಿಭಟನೆಯಾಗಲೀ, ಮುಷ್ಕರವಾಗಲಿ, ಅಥವಾ ಘೋಷಣೆ ಕೂಗುತ್ತಿಲ್ಲ.
ಆದರೆ, ನಾವು ಕರ್ತವ್ಯದಿಂದ ದೂರವುಳಿದು, ನಮ್ಮ, ನಮ್ಮ ಮನೆಯಲ್ಲಿರುತ್ತೇವೆ.
ಈ ರೀತಿ ಮೊದಲ ಹಂತದ ಪ್ರತಿಭಟನೆ ನಡೆಸಲಾಗುತ್ತಿಲ್ಲ.
ಎಲ್ಲಾ ಕ್ಷೇತ್ರದ 6 ಲಕ್ಷ ಸರ್ಕಾರಿ ನೌಕರರು ಪ್ರತಿಭಟನೆಗೆ ಮುಂದಾಗಿದ್ದೆವೆ.
ಪಂಜಾಬ್, ರಾಜಸ್ತಾನ, ಛತ್ತೀಸ್ ಘಢ, ಜಾರ್ಖಂಡ್, ಹಿಮಾಚಲಪ್ರದೇಶ, ರಾಜ್ಯಗಳ ಮಾದರಿಯಲ್ಲಿ ಎನ್.ಪಿ.ಎಸ್. ರದ್ದುಪಡಿಸಿ, ಓಪಿಎಸ್ ಯೋಜನೆ ಜಾರಿಗೆ ಆಗ್ರಹ.
ಮಾ. 1 ರಿಂದ ಯಾವ ನೌಕರರು ಕೂಡ ವಿಧಾನಸೌಧ, ವಿಕಾಸ ಸೌಧಕ್ಕೂ ಸೇರಿದಂತೆ, ಯಾವ ಸರ್ಕಾರಿ ಕಚೇರಿಗಳಿಗೂ ತೆರಳುವುದಿಲ್ಲ ಎಂದು ತಿಳಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.