ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು., ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ 2022-23ನೇ ಶೈಕ್ಷಣಿಕ ಜನವರಿ ಸಾಲಿನಲ್ಲಿ ಯುಜಿಸಿಯ ಮಾನ್ಯತೆಯೊಂದಿಗೆ ದಿನಾಂಕ: 12.01.2022 ರಿಂದ ದಿನಾಂಕ: 31.02.2023 ರ ವರೆಗೆ ಪ್ರಥಮ ವರ್ಷದ ಬಿ.ಎ/ಬಿ.ಕಾಂ/ ಬಿ.ಬಿ.ಎ/ ಬಿ.ಸಿ.ಎ/ ಬಿ.ಎಸ್ಸಿ/ ಬಿ.ಎಲ್,ಐಎಸ್ಸಿ, ಪದವಿ ಹಾಗೂ ಎಂ.ಎ/ಎಂ.ಕಾಂ,/ಎಂಎಲ್,ಐಎಸ್ಸಿ ಮತ್ತು ಎಂ,ಎಸ್‌ಸ್ಸಿ, ಎಂ.ಬಿ.ಎ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ ಡಿಪ್ಲೋಮ, ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸಗಳ ಪ್ರವೇಶಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಗಳನ್ನು ನೇರವಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಭರ್ತಿಮಾಡಿ ಆಲ್ಕೊಳ ಸರ್ಕಲ್ ಹತ್ತಿರ ಇರುವ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಗೆ ಭೇಟಿ ನೀಡಬಹುದು ಹಾಗೂ ದೂರವಾಣಿ ಸಂಖ್ಯೆ 0818208-250367 ಮೊ: ೯೧೬೪೪೬೭೧೩೧,916446713295, 9480765905ಗೆ ಸಂರ್ಪಕಿಸುವುದು.
ಮಹಿಳಾ ಬಿ.ಪಿ.ಎಲ್ ವಿದ್ಯಾರ್ಥಿನಿಯರಿಗೆ 15% ಶುಲ್ಕ ವಿನಾಯಿತಿ ಹಾಗೂ ಆಟೋ ಹಾಗೂ ಕ್ಯಾಬ್ ಚಾಲಕರು ಹಾಗೂ ಅವರ ಮಕ್ಕಳಿಗೆ ೩೦% ಶುಲ್ಕ ವಿನಾಯಿತಿ ಇರುತ್ತದೆ.
ಡಿಫೆನ್ಸ್ / ಎಕ್ಸ್-ಸರ್ವಿಸ್‌ಮನ್‌ಗಳಿಗೆ ಪ್ರವೇಶಾತಿ ಶುಲ್ಕ ವಿನಾಯಿತಿ ಇರುತ್ತದೆ. ಕೋವಿಡ್‌ನಿಂದ ಮೃತರಾದ ಪೋಷಕರ ಮಕ್ಕಳಿಗೆ ಹಾಗು ದೃಷ್ಠಿಹೀನ ಅಂದ ಮಕ್ಕಳಿಗೆ ಮತ್ತು ತೃತೀಯ ಲಿಂಗಿಗಳಿಗೆ ಪ್ರವೇಶಾತಿಯ ಪೂರ್ಣ ಶುಲ್ಕ ವಿನಾಯಿತಿ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಶೇಕಡ ೨೫% ಶುಲ್ಕ ವಿನಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಯ ಕಲಿಕಾರ್ಥಿ ಸಹಾಯ ಕೇಂದ್ರಗಳಾದ ಡಿವಿಎಸ್ ಕಾಲೇಜು ಶಿವಮೊಗ್ಗ ಮತ್ತು ಹೊಯ್ಸಳ ಕಾಲೇಜು ಹಾಗೂ ತುಂಗ ಕಾಲೇಜು ತಿರ್ಥಹಳ್ಳಿ, ಸಾಗರದ ಎಲ್.ಬಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.