ಶಿವಮೊಗ್ಗ: ನವ ಕರ್ನಾಟಕ ನಿರ್ಮಾಣ ವೇದಿಕೆ ಇವರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹುಣಸೂಡು ಸ್ಪೋಟದಿಂದ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ 21-01-2021ರ ರಾತ್ರಿ ಕಲ್ಲುಕ್ವಾರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಲೆಟಿನ್ ಕಡ್ಡಿಗಳು ಹಾಗೂ ಸಿಡಿಮದ್ದುಗಳು, ಸ್ಪೋಟಗೊಂಡು ಶಿವಮೊಗ್ಗ ಜಿಲ್ಲಾಯಾದ್ಯಂತ ಭೂಕಂಪನ ಉಂಟಾಗಿದೆ.
ಜಲ್ಲಿ ಕ್ರಶರ್ ಮತ್ತು ಕಲ್ಲು ಕ್ವಾರೆಗಳ ಸುದೀಪ್ ಸಮೀಪದಲ್ಲೇ ಇರುವ
ಸುತ್ತಮುತ್ತಲಿನ ಗ್ರಾಮಗಳಾದ ಗೆಜ್ಜೆನಹಳ್ಳಿ, ಹನುಮಂತನಗರ, ಹುಣಸೋಡು, ಅಬ್ಬಲಗೇರೆ, ಬಸವನ ಗಂಗೂರು, ಬೊಮ್ಮನಕಟ್ಟೆ ಹೀಗೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಕೆಲ ಮನೆಗಳ ಚಾವಣಿ ಹಾಳಾಗಿದೆ. ಇನ್ನು ಕೆಲವು ಮನೆಗಳು ಟಿವಿ, ಎಲೆಕ್ಟ್ರಾನಿಕ್ಸ್ ಉಪಕರಣಗಳು ಸ್ಫೋಟದಿಂದ ಹಾನಿಗೊಳದಾಗಿದೆ. ಜಿಲ್ಲಾಡಳಿತದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷದಿಂದ ತಮ್ಮ ದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ. ಸುಮಾರು 850 ಸಂತ್ರಸ್ತರು ಪರಿಹಾರ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಪ್ರತಿಮನೆಗಳು ಶೇ.10 ರಷ್ಟು ಹಾನಿಗೊಳಗಾಗಿದೆ ಎಂದು ವರದಿ ನೀಡಿದ್ದಾರೆ.
ಆದರೆ ಘಟನೆ ನಡೆದು ಎರಡು ವರ್ಷ ಕಳೆದರೂ ಇಲ್ಲಿಯವರೆಗೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಘಟನೆಯಲ್ಲಿ ಕಾಣೆಯಾದವರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ದಯಮಾಡಿ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಂತಹ ದುರ್ಘಟನೆಗೆ ಕಾರಣವಾದ ಮೇಲ್ಕಂಡ ಗ್ರಾಮಗಳ ಸುತ್ತಮುತ್ತಲಿರುವ ಕ್ವಾರೆ ಗಳನ್ನು,ಕ್ರಶರ್ ಗಳನ್ನು ಮುಚ್ಚ ಬೇಕು ಎಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಗೋ. ರಮೇಶ್ ಗೌಡ . ರಾಜ್ಯಾದ್ಯಕ್ಷರು, ಸಂತೋಷ್ ಜಿಲ್ಲಾಧ್ಯಕ್ಷರು, ನಿಂಗರಾಜ್, ದೇವೇಂದ್ರಪ್ಪ, ಶ್ರೀಮತಿ ನಯನ, ನಾಗರಾಜ್, ಪುಷ್ಪ, ರಾಜು ಗುಜ್ಜರ್, ಲೋಕೇಶ್. ಹೆ, ಆಸಿಫ್ ಫಯಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.