ಶಿವಮೊಗ್ಗ : ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಲಕ್ಷ್ಯ ಸ್ಕೂಲ್ ಮತ್ತು ಪೀಪಲ್ ಫಾರ್ ಎಜುಕೇಷನ್ ವತಿಯಿಂದ ನಗರದ ಸವಳಂಗ ರಸ್ತೆಯ ಕೃಷಿ ಕಾಲೇಜು ಮೈದಾನದಲ್ಲಿ ಗಾಳಿ ಪಟ ಹಬ್ಬ ಆಚರಿಸಲಾಯಿತು.
ಬೆಂಗಳೂರಿನಿಂದ ನುರಿತ ಗಾಳಿಪಟ ತಯಾರಕರು ಬಂದಿದ್ದರು ಮಕ್ಕಳಿಗೆ ಗಾಳಿಪಟ ತಯಾರಿಕೆ ಬಗ್ಗೆ, ಸೂತ್ರ ಹೇಗೆ ಕಟ್ಟುವುದು, ಅದರ ಬಾಲಂಗೋಚಿ ಎಷ್ಟಿರಬೇಕು ಎಂಬ ವಿಷಯವನ್ನು ಕಲಿಸಿದರು.
ಗಾಳಿಪಟ ಹಬ್ಬದಲ್ಲಿ ಸುಮಾರು 600 ಕ್ಕೂ ಹೆಚ್ಚು ಮಕ್ಕಳ ಜೊತೆಗೆ ಪಾಲಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಲಕ್ಷ್ಯ ಸ್ಕೂಲ್ ಪೀಪಲ್ ಫಾರ್ ಎಜುಕೇಷನ್ ವತಿಯಿಂದ ಆಗಸದಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಪಕ್ಷಿಗಳ ಜೊತೆಗೆ ಡ್ರ್ಯಾಗನ್ , ಸ್ಪೈಡರ್ ಮ್ಯಾನ್, ಅವತಾರ್, ತಿರಂಗ ಪ್ರತ್ಯಕ್ಷವಾಗಿದ್ದವು. ಮಕ್ಕಳು, ಮಹಿಳೆಯರು, ವೃದ್ಧರು ವಿಶೇಷ ಅತಿಥಿಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಸವಳಂಗ ರಸ್ತೆಯ ಕೃಷಿ ಕಾಲೇಜಿನ ಮೈದಾನದಲ್ಲಿ ಮಕ್ಕಳ ಗಾಳಿಪಟ ಹಬ್ಬದಲ್ಲಿ ಕಂಡುಬಂದ ಮನಮೋಹಕ ದೃಶ್ಯಗಳು. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಸಲುವಾಗಿ 2ನೇ ಬಾರಿಗೆ ಸಂಸ್ಥೆಯು 3 ವರ್ಷದಿಂದ 18 ವರ್ಷದೊಳಗಿನವರಿಗೆ 2 ವಿಭಾಗದಲ್ಲಿ ಗಾಳಿಪಟ ಹಬ್ಬವನ್ನು ಆಯೋಜಿಸಿತ್ತು.
ಕೃಷಿ ಕಾಲೇಜಿನ ಆವರಣದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಆಗಸದಲ್ಲಿ ರಾರಾಜಿಸಿದವು. ಗಾಳಿಪಟಗಳನ್ನು ಹಾರಿಸಿದ ಮಕ್ಕಳ ಸಂಭ್ರಮಕ್ಕೆ ಪಾರವೆ ಇರಲಿಲ್ಲ. ಅವರೊಂದಿಗೆ ಪಾಲಕರು ಕೂಡ ಗಾಳಿಪಟ ಹಾರಿಸಿ ಹಬ್ಬಕ್ಕೆ ಮೆರಗು ನೀಡಿದರು. 3 ರಿಂದ 13 ಮತ್ತು 13 ರಿಂದ 14 ವರ್ಷದೊಳಗಿನ ಅಂದಾಜು 450ಕ್ಕೂ ಅಧಿಕ ಮಕ್ಕಳು ಗಾಳಿಪಟ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಆಗಸದಲ್ಲಿ ಹಾರಾಡುತ್ತಿದ್ದ ಬಗೆ ಬಗೆಯ ಚಿತ್ತಾಕರ್ಷಕ ಗಾಳಿಪಟಗಳು ಜನರನ್ನು ಆಕರ್ಷಿಸಿದವು.