ಒಂದಲ್ಲ ಒಂದು ಕಾರಣದಿಂದ ಇಷ್ಟೂದಿನ ಪಾಕಿಸ್ತಾನ ಅಂತಾರಾಷ್ಟ್ರೀಯ ವಾಗಿ ಸುದ್ದಿಯಲ್ಲಿತ್ತು.
ಹೆಚ್ಚಾಗಿ ಸುದ್ದಿಗಳು ರಾಜಕಾರಣ,ಉಗ್ರವಾದಿಗಳು ಇತ್ಯಾದಿ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು.
ಈಗ ಅವೆಲ್ಲವೂ ಮೀರಿದ ಮನಕಲಕುವ ಸಮಾಚಾರಗಳು ಬರುತ್ತಿವೆ. ಒಂದು ದೇಶ ತನ್ನ ಆರ್ಥಿಕತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳದಿದ್ದರೆ ಅದರ ಕೆಟ್ಟ ಪರಿಣಾಮ ಆ ದೇಶದ ನಾಗರಿಕರ ಮೇಲೇ ಬೀಳುತ್ತದೆ.
ಈಗ ಅಲ್ಲಿ ಆಹಾರದ ದರ ಏರುತ್ತಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್, ಡಿಸೆಲ್ ದರಗಳು ಗಗನಕ್ಕೇರಿವೆ. ಹಣದುಬ್ಬರ ಶೇ 25 ಆಗಿದೆ. ನಮ್ಮ ನೆರೆಯ ಶ್ರೀಲಂಕಾ ದಲ್ಲಿ ಈ ರೀತಿ ಹಾಹಾಕಾರವುಂಟಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚೀಲ ಗೋದಿ ಹಿಟ್ಟಿಗಾಗಿ ನಾಕಾರು ಜನ ಕೈ ಕೈ ಮಿಲಾಯಿಸಿ ಹಿಟ್ಟಿಗಾಗಿ ಹೊಡೆದಾಡುವ ವಿಡಿಯೊ ಸರಿದಾಡುತ್ತಿದೆ.
ಕರಾಚಿಯಲ್ಲಿ ಒಂದು ಕೆಜಿ ಗೋಧಿ ಹಿಟ್ಟಿಗೆ
₹ 160. ಬಲೂಚಿಸ್ತಾನದಲ್ಲಿ 20 ಕೆಜಿ ಗೆ ₹ 3100.
ಇನ್ನೂ ಮೂರು ತಿಂಗಳು ಇದೇ ರೀತಿ ಪಾಕ್ ಅನುಭವಿಸಬೇಕಿದೆ.
ಆಪತ್ತಿನಲ್ಲಿ ನೆರವಿಗೆ ಸೌದಿ ಅರೆರಬಿಯಾ ಹತ್ತು ಶತಕೋಟಿ ಡಾಲರ್ ನೆರವು ಘೋಷಿಸಿದೆ.
ಪಾಕ್ ಪ್ರಧಾನಿ ಶಹಬಾಜ್ ಅವರ ರಾಜತಾಂತ್ರಿಕ ನಡಿಗೆ
ಮುಂದೆ ಹೇಗಿದೆ ಎಂಬುದೇ ವಿಶ್ವ ಕಾದು ನೋಡಬೇಕಿದೆ.
ಇವನ್ನೆಲ್ಲ ನೋಡಿದರೆ ನಮ್ಮ ಭಾರತ ಎಷ್ಟು ಸದೃಢ ಎನ್ನುವ ಅಭಿಮಾನ ತೃಪ್ತಿ ಮೂಡುತ್ತದೆ. ಆದರೂ ನಾವು ಅತ್ಯಂತ ಜಾಗರೂಕವಾಗಿ ನಮ್ಮ ಯೋಜನೆಗಳು, ಸಂಪನ್ಮೂಲಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕಿದೆ