ಭಾರತ ದೇಶ ಬಹಳ ವಿಶಾಲ ಮತ್ತು ವಿಶಿಷ್ಟವಾದ ದೇಶ. ಸ್ವತಂತ್ರ ದೊರೆತ ನಂತರ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಎರಡನೇ ಪ್ರಧಾನಿಯಾಗಿದ್ದರು. ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿ.
ಶಾಸ್ತ್ರಿಯವರು ಉತ್ತರ ಪ್ರದೇಶದ ಮೊಘಲ್ ಸರಾಯಿ ಎಂಬಲ್ಲಿ ಅಕ್ಟೋಬರ್ 2, 1904 ರಂದು ಜನಿಸಿದರು. ಇವರ ತಂದೆ ಶಾರದ ಪ್ರಸಾದ್, ತಾಯಿ ರಾಮದುಲಾರಿ.
ಲಾಲ್ ಬಹುದ್ದೂರ್ ಶಾಸ್ತ್ರಿಯವರು ಬಡತನದಲ್ಲಿ ಹುಟ್ಟಿ ಬೆಳೆದವರು. ಇವರು ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು.
ನಮ್ಮ ದೇಶ ಕಂಡ ಸರಳ ಹಾಗೂ ಸಜ್ಜನ ಅತ್ಯುತ್ತಮ ಪ್ರಧಾನಿ ಎಂದರೆ ಅದು ಲಾಲ್ ಬಹುದ್ದೂರ್ ಶಾಸ್ತ್ರಿ. ಮೌಲ್ಯ ಭದ್ರ ರಾಜಕಾರಣಕ್ಕೆ ಮತ್ತು ಪ್ರಾಮಾಣಿಕತೆಗೆ ಶಾಸ್ತ್ರೀಯವರು ಹೆಸರುವಾಸಿಯಾಗಿದ್ದರು.
ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಶ್ರಮಿಸಿದವರು.
ಭಾರತದ ಸಮಗ್ರತೆ ಮತ್ತು ರಾಷ್ಟ್ರರಕ್ಷಣೆವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವು ಸಾವಿಗೂ ಅಂಜುವುದಿಲ್ಲ. ಹಾಗೂ ಜೈ ಜವಾನ್ ಜೈ ಕಿಸಾನ್ ಎಂಬುವುದು ಅವರ ಪ್ರಮುಖ ಘೋಷವಾಕ್ಯಗಳಾಗಿದ್ದವು. ಶಾಸ್ತ್ರಿಯವರು ಕೊನೆಯವರೆಗೂ ಸರಳ ಖಾಧಿಕಾರರಾಗಿದ್ದರು. ತಮ್ಮ ಸ್ವತಹ ಬಟ್ಟೆಗಳನ್ನು ತಾವೇ ನೂಲುತ್ತಿದ್ದರು.
ಉಜೇಕಿಸ್ತಾನದ ತಾಷ್ಕೆಂಟ್ ನಲ್ಲಿ ಜನವರಿ 11, 1966 ರಂದು ಶಾಸ್ತ್ರೀಯವರು ಅಕಾಲಿಕ ಮರಣಕ್ಕೆ ತುತ್ತಾದರು.