ಶಿಕಾರಿಪುರ: ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ಒಂದೇ ನಾಣ್ಯದ
ಎರಡು ಮುಖಗಳು. ಇವರ ಸಮಸ್ಯೆ ಬಗ್ಗೆ ಸರ್ಕಾರ ಈ ಕೂಡಲೇ ಗಮನ
ಹರಿಸಬೇಕು. ದೇಶ ಕಾಯಲು ಯೋಧರು ಸ್ವಚ್ಛತೆ ಮಾಡಲು ಪೌರ ಸೇನಾನಿಗಳು
ಇದ್ದಹಾಗೆ ಪತ್ರಿಕಾ ವಿತರಕರು ಸುದ್ದಿ ಸೇನಾನಿಗಳು ಎಂದು ಜಯ ಕರ್ನಾಟಕ ಜನ ಪರ
ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಅಭಿಪ್ರಾಯ
ವ್ಯಕ್ತಪಡಿಸಿದರು.
ಶಿಕಾರಿಪುರದ ಸುದ್ದಿಮನೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಮತ್ತು ಕರ್ನಾಟಕ ಪತ್ರಿಕಾ
ವಿತರಕ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ
ಭಾಗವಹಿಸಿ ಮಾತನಾಡಿದರು.
ದೃಶ್ಯ ಮಾಧ್ಯಮ ಬಂದ ಮೇಲೆ ಪತ್ರಿಕೆ ಓದುಗರ ಸಂಖ್ಯೆ ತುಂಬಾ
ಕಡಿಮೆಯಾಗುತ್ತದೆ ಇವತ್ತು ಇಷ್ಟರ ಮಟ್ಟಿಗೆ ಓದುಗರಿಗೆ ಸಿಗುವುದಕ್ಕೆ
ವಿತರಕರ ಕಾರಣ ಅವರ ಸೇವೆ ಅನನ್ಯ. ಚಳಿ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೆ ಬೆಳಿಗ್ಗೆ
ನಿಮ್ಮ ಮನೆಯ ಬಾಗಿಲಿಗೆ ಪತ್ರಿಕೆ ತಲಿಪಿಸು ವುದರಿಂದ ಪತ್ರಿಕೆ ಇನ್ನೂ ಉಳಿದಿದೆ ಬರೀ
ಸಂಪಾದಕರು ಹಾಗೂ ವರದಿಗಾರರು ಇದ್ದರೆ ಸಾಲದು. ಸಂಪಾದಕರ ಬಂಡವಾಳಕ್ಕೆ
ವರದಿಗಾರರ ವರದಿಗೆ ಬೆಲೆ ಬರಬೇಕಾದರೆ ವಿತರಕ ಪತ್ರಿಕೆ ಮನೆ ಮನೆ ಬಾಗಿಲಿಗೆ
ತಲುಪಿದಾಗ ಮಾತ್ರ ಸಾಧ್ಯ ಎಂದರು.
ಸರ್ಕಾರ ಪತ್ರಕರ್ತರು ಹಾಗೂ ವಿತರಕರಿಗೆ ಪತ್ರಿಕಾ ನಿಧಿ ಸ್ಥಾಪಿಸಿ ಕಟ್ಟಡ
ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಇವರಿಗೂ ಕೊಡುವ ವ್ಯವಸ್ಥೆ ಮಾಡಬೇಕು.
ವರದಿಗಾರರಿಗೆ ಮತ್ತು ವಿತರಿಕರ ಮಕ್ಕಳಿಗೆ ಉಚಿತ ಶಿಕ್ಷಣ ಉಚಿತ ವೈದ್ಯಕೀಯ ಸೌಲಭ್ಯ
ಮಾಸಿಕ ಗೌರವ ಧನ, ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಸರ್ಕಾರದ ಯಾವ ಯೋಜನೆ ಆಗಲಿ ಜನರಿಗೆ ತಲುಪಿಸುವುದು ವಿತರಕ ಅಂದರೆ
ಮಾಧ್ಯಮದವರು. ಆದರೆ ಅವರ ಯೋಗ ಕ್ಷೇಮಕ್ಕೆ ಜೀವನ ಬದ್ರತೆಗೆ
ಯೋಜನೆಗಳೇ ಇಲ್ಲ ಎಂತಹ ವಿಪರ್ಯಾಸ. ಈ ರೀತಿ ಪತ್ರಿಕಾ ಮಾದ್ಯಮ ನಿರ್ಲಕ್ಷಿಸಿದರೆ
ಪತ್ರಿಕಾ ರಂಗ ನಶಿಸಿದರೂ ಆಶ್ಚರ್ಯವಿಲ್ಲ. ಚುನಾವಣೆ ಬಂದಾಗ ಮದ್ಯಮದವರ ಬಗ್ಗೆ
ಆಸಕ್ತಿ ತೋರಿಸುವ ರಾಜಕಾರಣಿಗಳು ಉಳಿದ ದಿನಗಳಲ್ಲಿ ನಿರ್ಲಕ್ಷ ಒಳಿತಲ್ಲ ನಮ್ಮ
ವೇದಿಕೆ ಅದಕ್ಕೆ ಅವಕಾಶ ನೀಡಲ್ಲ ಈಗ ಮನವಿ ನೀಡಿ ಸರ್ಕಾರದ ಗಮನಕ್ಕೆ ತಂದಿದ್ದೇವೆ.
ಇದು ಜಾರಿಗೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ರೈತ ಸಂಘ ಜಿಲ್ಲಾ ಘಟಕದ ಮುಖಂಡ ಸತೀಶ್, ಕರ್ನಾಟಕ ರಾಜ್ಯ
ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎನ್. ಮಾಲತೇಶ್,
ನಿರ್ದೇಶಕರುಗಳಾದ ರಾಮು ಜಿ.ತೀರ್ಥಹಳ್ಳಿ, ನಾಗಭೂಷಣ್, ವಿನಯ್ ವಾಲಿ ಗಜೇಂದ್ರ
ಹಾಗೂ ಇತರ ವಿತರಕರನ್ನೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ಶಿವೈಯ ಶಾಸ್ತಿ ಇಮ್ರಾನ್ ಖಾನ್, ರವಿ ಪ್ರಕಾಶ್
ಶೆಟ್ಟಿ. ಸುರೇಶ್ ಯೋಗೀಶ್, ನವೀನ್ ಹಾಗೂ ಇತರರು ಉಪಸ್ಥಿತರಿದ್ದರು.