ಚಿಕ್ಕಮಗಳೂರು ಸಮೀಪ ಹಾಗೂ ಹೃದಯಭಾಗದಲ್ಲಿರುವ ಆಜಾದ್ ಪಾರ್ಕ್ ಶಾಲೆಯ ಕಟ್ಟಡವನ್ನು ಅಭಿವೃದ್ದಿಪಡಿಸದೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯತನ ವಹಿಸಿದೆ ಎಂದು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಅವರು ಆರೋಪಿಸಿದರು.
ಚಿಕ್ಕಮಗಳೂರಿನ, ಆಜಾದ್‌ಪಾರ್ಕ್ ಶಾಲೆಗೆ ಮಂಗಳವಾರ ದಿಡೀರ್ ಭೇಟಿ ನೀಡಿ ಮಾತನಾಡಿದ ಅವರು ಕನ್ನಡ ಹಾಗೂ ತಮಿಳು 2 ಭಾಷೆಯ ವಿದ್ಯಾಸಂಸ್ಥೆಗಳನ್ನು ಒಳಗೊಂಡಿರುವ ಆಜಾದ್‌ಪಾರ್ಕ್ ಶಾಲೆಯು ಮೂಲಭೂತ ಸೌಲಭ್ಯವಿಲ್ಲದೇ ಕುಂಠಿತವಾಗಿದೆ ಎಂದು ದೂರಿದರು.
ಶಾಲೆಯು ಪ್ರಾರಂಭಗೊಂಡು ಅನೇಕ ವರ್ಷಗಳೆ ಕಳೆದಿವೆ. ಸ್ಥಳೀಯ ಜನಪ್ರತಿನಿಧಿಗಳು ಈ ಕ್ಷೇತ್ರ ದಲ್ಲಿ ಸತತವಾಗಿ 20 ವರ್ಷಗಳ ಶಾಸಕರಾಗಿದ್ದರೂ ಹೃದಯಭಾಗದಲ್ಲಿರುವ ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಲಭ್ಯ ಕೊರತೆಯನ್ನು ನೀಗಿಸುವ ಬದಲು ರಾಜ್ಯ ಪ್ರವಾಸದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಶಾಲೆಯ ಕೊಠಡಿಯಲ್ಲಿ ಕಿಟಕಿ, ಬಾಗಿಲು, ವಿದ್ಯುತ್ ದೀಪ ಹಾಗೂ ಶೌಚಾಲಯ ಸೂಕ್ತ ವ್ಯವಸ್ಥೆ ಇಲ್ಲದಿರುವ ಪರಿಣಾಮ ಕೆಲವು ಪೋಷಕರು ಶಾಲೆಗೆ ಮಕ್ಕಳನ್ನು ಸೇರ್ಪಡೆ ಗೊಳಿಸಲು ಈ ಕಾರಣದಿಂದ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಬಂದ ಸಂದರ್ಭದಲ್ಲಿ ಹೆಚ್.ಡಿ.ಕೆ.ಯವರ ಗಮನಕ್ಕೆ ತರುವ ಮೂಲಕ ಆಜಾದ್‌ಪಾರ್ಕ್ ಶಾಲೆಗೆ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರು ಮತ್ತು ಸ್ಥಳೀಯ ಮುಖಂಡರುಗಳು ಹಾಜರಿದ್ದರು.
