ಕೃತಕ ಬುದ್ದಿ ಮತ್ತೆ ಹಾಗೂ ಯಂತ್ರ ಕಲಿಕೆಯ ಹೊಸತಂತ್ರಜ್ಞಾನ ವನ್ನು ಮನುಷ್ಯನಿಗೆ ಸಹಾಯಕರಾಗಿ ಉಪಯೋಗಿಸಿಕೊಂಡಲ್ಲಿ ನಾಲ್ಕು ಮಂದಿಯ ಅನುಭವದ ಕೆಲಸವನ್ನು ಯಂತ್ರದ ಮೂಲಕ ಪಡೆಯಲು ಸಹಾಯವಾಗಲಿದೆ ಎಂದು ವಿದ್ಯಾಕೋಶ ಎಜುಕೇಷನ್ ಟೆಕ್ನಾಲಜಿ ಕಂಪನಿಯ ಸ್ಥಾಪಕ ಡಾ.ಅಶೋಕ್ ರಾವ್ ಹೇಳಿದರು.
ಚಿಕ್ಕಮಗಳೂರಿನ ಶ್ರೀ ಆದಿಚುಂಚನಗಿರಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಕೃತಕ ಜ್ಞಾನ ಮತ್ತು ಗಣಿತ ಶಾಸ್ತç ಪ್ರತಿಷ್ಟಾನ ಹಾಗೂ ಕೃತಕ ಬುದ್ದಿ ಮತ್ತೆ ಮತ್ತು ಯಂತ್ರ ಕಲಿಕೆಯ ಕುರಿತ ಕಾರ್ಯಕ್ರಮವನ್ನು ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ದಿನಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ ಅನುಭವ ಹೊಂದಿ ಕಾರ್ಯನಿರ್ವಹಿಸುವವರ ಸಂಖ್ಯೆ ಕ್ಷಿಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕಾಲಘಟ್ಟಕ್ಕೆ ಯಂತ್ರಗಳಿಗೆ ಸಂಪೂರ್ಣ ಮಾಹಿತಿಗಳನ್ನು ಕೊಡುವ ಮುಖಾಂತರ ಸಹಾಯಕರಾಗಿ ಕಾರ್ಯನಿರ್ವಹಿಸಿಕೊಳ್ಳಬಹುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕೆಲಸ ಹಾಗೂ ಮಾಹಿತಿಗಳು ಲಭಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ಕಲಿಕೆಯನ್ನು ಎಲ್ಲೆಡೆ ಬೆಳೆಸಲು ಆಯಾ ಕಾಲೇಜುಗಳು ತಯಾರಿಗಳು ನಡೆಸುತ್ತಿವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಳಜಿ ವಹಿಸಿ ಸೂಕ್ಮತೆ ಹಾಗೂ ಶ್ರದ್ದೆಯಿಂದ ಅಭ್ಯಾಸಿಸಿದ್ದಲ್ಲಿ ಮಾತ್ರ ಮುಂದೆ ಉನ್ನತಮಟ್ಟದ ಉದ್ಯೋಗವು ಲಭಿಸಲಿದೆ ಎಂದರು.
ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ ಮಾತನಾಡಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಎಐಟಿ ಕಾಲೇಜಿನಲ್ಲಿ ಕಳೆದ ವರ್ಷದಿಂದ ಕೃತಕ ಬುದ್ದಿ ಮತ್ತೆ ಹಾಗೂ ಯಂತ್ರ ಕಲಿಕೆಯ ತರಬೇತಿಯನ್ನು ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿಗಳು ಈ ಕಲಿಕೆಯಲ್ಲಿ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವ ಅವಶ್ಯವಿದೆ ಎಂದು ಹೇಳಿದರು.
ಯಂತ್ರಗಳಿಗೆ ಸಂಪೂರ್ಣ ಮಾಹಿತಿಗಳನ್ನು ಕೊಡುವ ಮೂಲಕ ಮನುಷ್ಯನ ರೀತಿಯಲ್ಲಿ ಯೋಚನೆ ಮಾಡುವ ಹಾಗೂ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿರುವ ಪರಿಣಾಮ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಅತ್ಯಂತ ಶ್ರಮವಹಿಸಿದ್ದಲ್ಲಿ ಯಶಸ್ಸು ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಐಎಂಎಲ್‌ನ ವಿಭಾಗದ ಮುಖ್ಯಸ್ಥೆ ಡಾ. ಎಂ.ಆರ್.ಸುನೀತಾ, ಸಹಾಯಕ ಪ್ರಾಧ್ಯಾಪಕ ವಿವೇಕಾನಂದ, ಡಾ.ಶ್ರೀಕಾಂತ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.