ಶ್ರೀರಾಮ ಜನ್ಮ ಭೂಮಿ ಮೊಕದ್ದಮೆಯ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷದವರಿಗೆ ಅಯೋಧ್ಯೆಯಲ್ಲಿ ಮಸೀದಿ ಕಟ್ಟುವುದಕ್ಕಾಗಿ ೫ ಎಕರೆ ಭೂಮಿ ನೀಡುವ ಆದೇಶ ನೀಡಿತ್ತು.
ಉತ್ತರ ಪ್ರದೇಶ ಸರ್ಕಾರದಿಂದ ಮುಸಲ್ಮಾನರಿಗೆ ಅಯೋಧ್ಯೆಯಲ್ಲಿ 5 ಎಕರೆ ಭೂಮಿ ನೀಡಲಾಯಿತು. ಈಗ ಅಲ್ಲಿ ಮಸೀದಿ ಕಟ್ಟುವ ಕಾಮಗಾರಿ ನಡೆಯುತ್ತಿದೆ. ಈ ಮಸೀದಿಗಾಗಿ ದಾನವೆಂದು ಹಣ ಸಿಗುತ್ತಿದೆ.ಅದರಲ್ಲಿ ಶೇ.40 ರಷ್ಟು ದಾನ ಹಿಂದೂಗಳ ನೀಡಿರುವುದು ಬೆಳಕಿಗೆ ಬಂದಿದೆ. ಶೇ.30 ರಷ್ಟು ದಾನ ಕಂಪನಿಗಳಿಂದ ಹಾಗೂ ಶೇ.30ರಷ್ಟು ಮುಸಲ್ಮಾನರಿಂದ ದೊರೆತಿದೆ.
ಮಸೀದಿಯ ಟ್ರಸ್ಟನ ಸಚಿವ ಅತಹರ್ ಹುಸೇನ್ ಇವರು, ಆಗಸ್ಟ್ 2020 ರಲ್ಲಿ ದಾನದ ವಿಷಯವಾಗಿ ಬ್ಯಾಂಕ್‌ನ ಖಾತೆಯ ಮಾಹಿತಿ ನೋಡಿದರೆ, ಅದರ ಪ್ರಕಾರ ನಮಗೆ 40 ಲಕ್ಷ ರೂಪಾಯ ದೊರೆತಿದೆ. ಇದರಲ್ಲಿ ಶೇ.30ರಷ್ಟು ಹಣ ಕಂಪೆನಿಗಳಿಂದ, ಶೇ.30 ರಷ್ಟು ಮುಸಲ್ಮಾನರಿಂದ ಮತ್ತು ಶೇ.40ರಷ್ಟು ಹಣ ಹಿಂದೂಗಳಿಂದ ದೊರೆತಿದೆ, ಎಂದು ಹೇಳಿದರು.
ಐಸ್ಟನ ಮಾಹಿತಿಯ ಪ್ರಕಾರ ಗುಪ್ತ ದಾನ ನೀಡುವವರಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಾಗಿದೆ. ಮಸೀದಿಗಾಗಿ ದಾನ ನೀಡುವವರಲ್ಲಿ ಮೊಟ್ಟಮೊದಲನೆಯ 11 ಜನರು ಹಿಂದೂಗಳೇ ಆಗಿದ್ದಾರೆ ಎಂದು ತಿಳಿಸಿದೆ.