ಶ್ರೀ ಕನಕದಾಸರು ಹರಿದಾಸರ ಪಂಕ್ತಿಯಲ್ಲಿ ಶ್ರೇಷ್ಠ ಹರಿದಾಸರ ಸಾಲಿಗೆ
ಸೇರಿದವರು ಶ್ರೀಕನಕದಾಸರು.
ಕನಕದಾಸರುಒಬ್ಬಕೀರ್ತನಕಾರರಾಗಿ,ಸಂಗೀತಕಾರರಾಗಿ,ಹರಿದಾಸರಾಗಿ ಹೆಸರುಗಳಿಸಿದ್ದಾರೆ.
ಇವರು ಶ್ರೀವ್ಯಾಸರಾಯರ ಪರಮಾಪ್ತ ಶಿಷ್ಯರು ಹಾಗೂ ಪುರಂದರದಾಸರ ಸಮಕಾಲೀನ ದಾಸರು.
ಇವರು ಹುಟ್ಟಿದ್ದು ಕರ್ನಾಟಕದ ಬಾಡ ಎನ್ನುವ ಗ್ರಾಮದಲ್ಲಿ. ತಂದೆ ಬೀರಪ್ಪ ಮತ್ತು ತಾಯಿ ಬಚ್ಚಮ್ಮ
ನವರು.ಕನಕದಾಸರ ಜನ್ಮನಾಮ ತಿಮ್ಮಪ್ಪನಾಯಕ
ಎಂದು. ಇವರು ಬಂಕಾಪುರ ಕೋಟೆಯ ಮುಖ್ಯ
ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು.ಆಗ ಬಂಕಾಪುರ ವಿಜಯನಗರ ಸಾಮ್ರಾಜ್ಯದ ಮುಖ್ಯ ಪಟ್ಟಣವಾಗಿತ್ತು.ಒಂದು ದಿನ ತಿಮ್ಮಪ್ಪನಾಯಕ
ಒಂದು ಕೆರೆಯ ಜೀರ್ಣೋದ್ಧಾರದ ಕೆಲಸ ಮಾಡಿಸುತ್ತಿದ್ದಾಗ ಬಂಗಾರದ ಪೆಟ್ಟಿಗೆ ಸಿಗುತ್ತದೆ.
ಆಗ ಊರ ಜನರು ತಿಮ್ಮಪ್ಪನಾಯಕ ಎನ್ನುವ ಹೆಸರು ಬದಲಾಯಿಸಿ ಕನಕನಾಯಕ ಎಂದು ಕರೆದರು.ಮುಖ್ಯ ಕಾವಲುಗಾರನಾಗಿದ್ದ ಕನಕನಾಯಕನಿಗೆ ಒಂದು ಸಾರಿ ನಡೆದ ಯುದ್ಧದಲ್ಲಿ ಪ್ರಾಣ ಉಳಿದಿದ್ದೇ ಪವಾಡ
ಆಗುತ್ತದೆ.ಕನಕನಾಯಕರ ಆರಾಧ್ಯದೈವ ಕಾಗಿನೆಲೆ
ಆದಿಕೇಶವ ದೇವರು,ಅವನ ಅನುಗ್ರಹದಿಂದಲೇ
ಪ್ರಾಣಾಪಾಯದಿಂದಪಾರಾದೆನೆಂದು ವೈರಾಗ್ಯ ಹೊಂದಿ ಕೋಟೆಕಾಯುವ ಕೆಲಸ ಬಿಟ್ಟು ಹರಿದಾಸಕೂಟಕ್ಕೆಸೇರುತ್ತಾರೆ.ಅಂದಿನಿಂದ ಕನಕನಾಯಕ ಹೋಗಿ ಕನಕದಾಸರಾಗುತ್ತಾರೆ.
ಪ್ರಹ್ಲಾದರಾಜರು ಹೇಗೆ ತನ್ನ ತಂದೆಯಾದ ಹಿರಣ್ಯಕಶಿಪುವಿಗೆದೇವರುಎಲ್ಲಕಡೆಯೂಇದ್ದಾನೆಎಂಬುದನ್ನುತೋರಿಸಿಕೊಟ್ಟರೋಹಾಗೆಯೇ
ಕನಕದಾಸರೂ ಕೂಡ ಲೋಕಕ್ಕೆ ದೇವರಿಲ್ಲದ ಜಾಗವೇ ಇಲ್ಲಎಂದು ಮನವರಿಕೆ ಮಾಡಿಕೊಟ್ಟ ಮಹಾನುಭಾವರು.ಶಿಷ್ಯರೆಲ್ಲರಿಗೆ ಒಂದು ಏಕಾದಶಿಯ ದಿನ ಶ್ರೀವ್ಯಾಸರಾಯ ಗುರುಗಳು
ಬಾಳೆಹಣ್ಣು ಕೊಟ್ಟು ಇದನ್ನು ಯಾರೂ ನೋಡದ ಜಾಗದಲ್ಲಿ ಸೇವಿಸಿ ಬನ್ನಿ ಎಂದು ಹೇಳುತ್ತಾರೆ.
ಎಲ್ಲ ಶಿಷ್ಯರೂ ನಾವು ಯಾರಿಗೂ ಕಾಣದ ಹಾಗೆ
ಬಾಳೆಹಣ್ಣನ್ನು ಸೇವಿಸಿಬಂದೆವು ಎಂದು ಹೇಳುತ್ತಾರೆ.
ಆದರೆ ಕನಕದಾಸರು ಮಾತ್ರ ಹಣ್ಣನ್ನು ಸೇವಿಸದೆ ಕೈಯಲ್ಲಿ ಹಿಡಿದುಕೊಂಡುಬಂದದ್ದನ್ನು ನೋಡಿ ಗುರುಗಳು ಕನಕದಾಸರನ್ನು ವಿಚಾರಿಸಸಿದಾಗ”ಗುರುಗಳೇ ಯಾರೂ ನೋಡದ ಜಾಗ ನನಗೆ ಸಿಗಲಿಲ್ಲ,ಏಕೆಂದರೆ ಎಲ್ಲಾ ಕಡೆಯೂ ,
ಎಲ್ಲಾಜಾಗದಲ್ಲಿಯೂಭಗವಂತನಿದ್ದಾನೆ,ಅವನಿಲ್ಲದ ಸ್ಥಳವೇ ಇಲ್ಲ.ಹಾಗಾಗಿ ನಾನು ಬಾಳೆ ಹಣ್ಣನ್ನು ಸೇವಿಸಲಾಗಲಿಲ್ಲ ಎಂದು ಕನಕದಾಸರು ಉತ್ತರಕೊಡುತ್ತಾರೆ.
ಒಂದು ದಿನ ಗುರುಗಳಾದ ವ್ಯಾಸರಾಯರು ತಮ್ಮ
ಶಿಷ್ಯರಿಗೆ ನಿಮ್ಮಲ್ಲಿ ಯಾರು ಮೋಕ್ಷಕ್ಕೆ ಹೋಗಲು
ಅರ್ಹತೆ ಪಡೆದಿದ್ದೀರಿ?ಎಂದು ಕೇಳುತ್ತಾರೆ.ಬೇರೆ ಎಲ್ಲಾ ಶಿಷ್ಯರುಗಳು ಉತ್ತರ ಕೊಟ್ಟಾದ ಮೇಲೆ,ಕನಕದಾಸರನ್ನು “ಕನಕಾ ನಿನ್ನ ಉತ್ತರವೇನು?ಎಂದು ಕೇಳುತ್ತಾರೆ.ಕನಕದಾಸರು
ಗುರುಗಳೇ “ನಾನು ಹೋದರೆ ಹೋಗಬಹುದು”
ಎಂದು ಹೇಳುತ್ತಾರೆ.ಅಂದರೆ ನಾನು ಎನ್ನುವ ಅಹಂಕಾರ ಹೋದರೆ ಮೋಕ್ಷದ ಮೆಟ್ಟಿಲು ಹತ್ತಲಿಕ್ಕೆ
ಯೋಗ್ಯತೆ ಬರುತ್ತದೆ.
ಅವರು ಕಡಲ ತಡಿಯಲ್ಲಿರುವ ಉಡುಪಿ ಕ್ಷೇತ್ರಕ್ಕೆ
ಬಂದಾಗ ಕೃಷ್ಣದೇವರು ಅವರ ಭಕ್ತಿಗೆ ಓಗೊಟ್ಟು ಕಿಂಡಿಯಲ್ಲಿ ದರ್ಶನ ಕೊಡುತ್ತಾರೆ.ಕನಕದಾಸರಿಗೆ
ಶ್ರೀಕೃಷ್ಣದರ್ಶನಕೊಟ್ಟಕಿಂಡಿಯು”ಕನಕನಕಿಂಡಿ”
ಎಂದೇ ಹೆಸರು ಪಡೆದಿದೆ. ಇವರುಅನೇಕಕೀರ್ತನೆಗಳನ್ನು,ಉಗಾಭೋಗ
ಗಳನ್ನು,ಮುಂಡಿಗೆಗಳನ್ನು ರಚಿಸಿದ್ದಾರೆ.ಇವರು ರಚಿಸಿರುವ ಐದು ಮುಖ್ಯಕಾವ್ಯಕೃತಿಗಳೆಂದರೆ ಮೋಹನ ತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತೆ,ಹರಿಭಕ್ತಿಸಾರ,ಮೋಹನ ತರಂಗಿಣಿ
ಮತ್ತು ನರಸಿಂಹಸ್ತವ.ಕೇಶವನಾಮದ “ಈಶ ನಿನ್ನ ಚರಣ ಭಜನೆ “ಎಂಬ ಕೀರ್ತನೆಯೂ ಇವರ ರಚನೆಯಾಗಿದೆ.
ಕನಕದಾಸರು ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅನನ್ಯವಾದುದು.
ಶ್ರೀಕನಕದಾಸರ ಜಯಂತಿಯ ದಿನವಾದ ಇಂದು ಶ್ರೀದಾಸರ ಸ್ಮರಣೆಮಾಡಿ ,ಭಕ್ತಿಯ ನಮನಗಳನ್ನು ಸಲ್ಲಿಸೋಣ.
ಲೇ: ಜಯಭೀಮ ಜೊಯಿಸ್.ಶಿವಮೊಗ್ಗ.