Wednesday, April 23, 2025
Wednesday, April 23, 2025

ಡಿಜಿಟಲ್ ಇಂಡಿಯಾ ಯೋಜನೆ ಸಫಲ- ಐಎಂಎಫ್ ಶ್ಲಾಘನೆ

Date:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್​ ಇಂಡಿಯಾ ಫಲ ನೀಡಿದೆ.ಕಳೆದ 2 ವರ್ಷಗಳಿಂದ ಭಾರತ ಡಿಜಿಲೀಕರಣದಲ್ಲಿ ಮುಂಚೂಣಿಯಲ್ಲಿದೆ. ಇದರ ಬಳಕೆಯಿಂದ ಕೆಲ ಆಡಳಿತಾತ್ಮಕ ಸಮಸ್ಯೆಗಳೂ ಕೂಡ ನಿವಾರಣೆಯಾಗಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ತಿಳಿಸಿದೆ.

ಕೋವಿಡ್​ ನಂತರ ಡಿಜಿಟಲೀಕರಣ ಜಗತ್ತಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಭಾರತದಲ್ಲಿ ಇದರ ಬಳಕೆ ಹೆಚ್ಚಿದೆ. 2 ವರ್ಷಗಳಿಂದ ದೇಶ ಮುಂಚೂಣಿಯಲ್ಲಿದೆ. ಡಿಜಿಟಲ್​ ಸೌಕರ್ಯ ಒದಗಿಸಿರುವುದರಿಂದ ಆಡಳಿದಲ್ಲಿನ ದೋಷಗಳೂ ಮುಕ್ತಿ ಕಂಡಿವೆ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ಉಪನಿರ್ದೇಶಕ ಅನ್ನೆರ್ ಮೇರಿ ಗುಲ್ಡೆ ವೋಲ್ಫ್ ಹೇಳಿದ್ದಾರೆ.

ಕೊರೋನಾ ಸಂದರ್ಭದ ನಂತರ ಏಷ್ಯಾ ಮತ್ತು ಇತರಡೆಗಳಲ್ಲಿ ಗಮನಾರ್ಹವಾದ ಬದಲಾವಣೆ ಕಂಡುಬಂದಿದೆ. ಡಿಜಿಟಲೀಕರಣವು ಆಯಾ ಸಂಸ್ಥೆಗಳ ಉತ್ಪಾದಕತೆಯನ್ನೂ ಹೆಚ್ಚಿಸಿದೆ ಎಂದು ಪ್ರತಿಕ್ರಿಯಿಸಿದರು.

ಡಿಜಿಟಲೀಕರಣದಲ್ಲಿ ಜಾಗತಿಕವಾಗಿ ಭಾರತ 6.1 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ. ಅತಿ ಬೇಡಿಕೆ ಇರುವ ದೇಶಗಳಲ್ಲಿ ಇದು ಮುಂದಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...