ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಫಲ ನೀಡಿದೆ.ಕಳೆದ 2 ವರ್ಷಗಳಿಂದ ಭಾರತ ಡಿಜಿಲೀಕರಣದಲ್ಲಿ ಮುಂಚೂಣಿಯಲ್ಲಿದೆ. ಇದರ ಬಳಕೆಯಿಂದ ಕೆಲ ಆಡಳಿತಾತ್ಮಕ ಸಮಸ್ಯೆಗಳೂ ಕೂಡ ನಿವಾರಣೆಯಾಗಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ತಿಳಿಸಿದೆ.
ಕೋವಿಡ್ ನಂತರ ಡಿಜಿಟಲೀಕರಣ ಜಗತ್ತಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಭಾರತದಲ್ಲಿ ಇದರ ಬಳಕೆ ಹೆಚ್ಚಿದೆ. 2 ವರ್ಷಗಳಿಂದ ದೇಶ ಮುಂಚೂಣಿಯಲ್ಲಿದೆ. ಡಿಜಿಟಲ್ ಸೌಕರ್ಯ ಒದಗಿಸಿರುವುದರಿಂದ ಆಡಳಿದಲ್ಲಿನ ದೋಷಗಳೂ ಮುಕ್ತಿ ಕಂಡಿವೆ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ಉಪನಿರ್ದೇಶಕ ಅನ್ನೆರ್ ಮೇರಿ ಗುಲ್ಡೆ ವೋಲ್ಫ್ ಹೇಳಿದ್ದಾರೆ.
ಕೊರೋನಾ ಸಂದರ್ಭದ ನಂತರ ಏಷ್ಯಾ ಮತ್ತು ಇತರಡೆಗಳಲ್ಲಿ ಗಮನಾರ್ಹವಾದ ಬದಲಾವಣೆ ಕಂಡುಬಂದಿದೆ. ಡಿಜಿಟಲೀಕರಣವು ಆಯಾ ಸಂಸ್ಥೆಗಳ ಉತ್ಪಾದಕತೆಯನ್ನೂ ಹೆಚ್ಚಿಸಿದೆ ಎಂದು ಪ್ರತಿಕ್ರಿಯಿಸಿದರು.
ಡಿಜಿಟಲೀಕರಣದಲ್ಲಿ ಜಾಗತಿಕವಾಗಿ ಭಾರತ 6.1 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ. ಅತಿ ಬೇಡಿಕೆ ಇರುವ ದೇಶಗಳಲ್ಲಿ ಇದು ಮುಂದಿದೆ ಎಂದು ಹೇಳಿದರು.