ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಪ್ರಿರಿಲೀಸ್ ಇವೆಂಟ್ಗೆ ದಿನಗಣನೆ ಆರಂಭವಾಗಿದೆ. ಅ.21ರಂದು ಅದ್ದೂರಿಯಾಗಿ ನಡೆಯಲಿರುವ ಪ್ರಿರಿಲೀಸ್ ಇವೆಂಟ್ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಸಮಾಗಮ ಆಗಲಿದೆ.
ಇದೇ ವೇಳೆ ಕರ್ನಾಟಕದಾದ್ಯಂತ ಪುನೀತ್ ಫುಡ್ ಫೆಸ್ಟಿವಲ್ ಕೂಡ ನಡೆಯಲಿದೆ.
ಅ.22 ಮತ್ತು 23ರಂದು ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಟೈಟಲ್ನಲ್ಲಿ ಫುಡ್ ಫೆಸ್ಟಿವಲ್ ನಡೆಯಲಿದೆ. ಅಪ್ಪು ಅವರು ಈ ಹಿಂದೆ ಭೇಟಿ ಕೊಟ್ಟಿದ್ದ ಎಲ್ಲ ಹೋಟೆಲ್ಗಳಲ್ಲೂ ಫುಡ್ ಫೆಸ್ಟಿವಲ್ ನಡೆಯುತ್ತಿದ್ದು, ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಜನರಿಗೆ ಅವಕಾಶವಿದೆ. ವೆಜ್ ಜತೆಗೆ ನಾನ್ವೆಜ್ ಊಟದ ವ್ಯವಸ್ಥೆಯೂ ಇರಲಿದೆ.
ಅಪ್ಪುಗಾಗಿ ಹೋಟೆಲ್ ಮಾಲೀಕರು ಫುಡ್ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.
ಕರ್ನಾಟಕದಾದ್ಯಂತ ಫುಡ್ ಫೆಸ್ಟಿವಲ್ ಮಾಡುವ ಕನಸನ್ನು ಅಪ್ಪು ಕಂಡಿದ್ದರಂತೆ. ಅವರ ಕನಸನ್ನು ಈಗ ನನಸು ಮಾಡಲಾಗುತ್ತಿದೆ. ಆ್ಯಂಕರ್ ಅನುಶ್ರೀ, ನಟ ಧನಂಜಯ್ ಸೇರಿದಂತೆ ಹಲವು ನಟರು ಅಪ್ಪು ಭೇಟಿ ಮಾಡಿ ಭೋಜನ ಸವಿದಿದ್ದ ಹೋಟೆಲ್ಗಳಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.