Thursday, March 26, 2026
Thursday, March 26, 2026

ಹೆಣ್ಣುಮಕ್ಕಳ ದಿನ ಅರ್ಥಪೂರ್ಣ ಆಚರಿಸಿದ ಯುವ ಸಬಲೀಕರಣ ಇಲಾಖೆ

Date:

ಅ.11 ರ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಕು. ಶಾಲಿನಿ.ಎಸ್ ರವರು ‘ಒಂದು ದಿನದ ಯುವ ಕ್ರೀಡಾಧಿಕಾರಿ’ಯಾಗಿ ಆಯ್ಕೆಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರು.

ರಾಜ್ಯ ಸರ್ಕಾರ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ 18 ರಿಂದ 23 ವಯೋಮಿತಿಯ ಯುವತಿಯರಿಗೆ ‘ಒಂದು ದಿನದ ಯುವ ಕ್ರೀಡಾಧಿಕಾರಿ’ಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಆನ್‍ಲೈನ್ ಅರ್ಜಿ ಕರೆದಿದ್ದು ಅದರಂತೆ ಅರ್ಜಿ ಸಲ್ಲಿಸಿ, ಆಯ್ಕೆಯಾದ ಶಾಲಿನಿ.ಎಸ್ ನೆಹರೂ ಕ್ರೀಡಾಂಗಣದ ಮುಖ್ಯದ್ವಾರದಲ್ಲಿರುವ ಕ್ರೀಡಾ ಇಲಾಖೆಯಲ್ಲಿ ಅ.11 ರಂದು ಒಂದು ದಿನದ ಯುವ ಕ್ರೀಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸಹಾಯಕ ನಿರ್ದೇಶಕರ ಬಳಿ ಇಲಾಖೆಯ ಕಾರ್ಯವೈಖರಿ, ಕ್ರೀಡಾ ಚಟುವಟಿಕೆ ವಿಭಾಗ, ಕಾರ್ಯಕ್ರಮಗಳು, ಅದರ ಸಂಘಟನೆ, ಅನುದಾನ, ಒಳಾಂಗಣ, ಹೊರಾಂಗಣ ಕ್ರೀಡಾಂಗಣಗಳಲ್ಲಿನ ಸೌಕರ್ಯಗಳು, ನಿರ್ವಹಣೆ, ವ್ಯಾಯಾಮಶಾಲೆ, ಕ್ರೀಡಾ ಸಂಕೀರ್ಣದಲ್ಲಿನ ಈಜುಕೊಳ, ಟೆನಿಸ್ ಅಂಕಣ, ಸ್ಕೇಟಿಂಗ್ ಅಂಕಣ, ಕ್ರೀಡಾಂಗಣ ಸದಸ್ಯತ್ವ ಶುಲ್ಕ, ಸಿಬ್ಬಂದಿ ವಿವರ ಕುರಿತು ಹಾಗೂ ಜಿಲ್ಲಾ ಕ್ರೀಡಾಶಾಲೆ/ವಸತಿ ನಿಲಯದದ ಕುರಿತು ಸವಿಸ್ತಾರವಾಗಿ ತಿಳಿದುಕೊಂಡರು.

ನಂತರ ಜಿಲ್ಲಾ ಮಟ್ಟದ ವಾಲಿಬಾಲ್, ವಿಭಾಗ ಮಟ್ಟದ ಫುಟ್‍ಬಾಲ್ ಹಾಗೂ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜಿನ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಹಾಗೂ ಇಲಾಖೆ ಕುರಿತಾದ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಯುವ ಕ್ರೀಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಸಂತಸ ವ್ಯಕ್ತಪಡಿಸಿದರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prabhuling Kavalikatti ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ- ಪ್ರಭುಲಿಂಗ ಕವಳಿಕಟ್ಟಿ.

Prabhuling Kavalikatti ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ...

MESCOM ಮಾರ್ಚ್ 26. ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

World Tuberculosis Day ಕ್ಷಯರೋಗಿಗಳು ದುಶ್ಚಟಗಳಿಂದ ದೂರವಿದ್ದು ,ಪೌಷ್ಠಿಕ ಆಹಾರ ಸೇವಿಸಿದರೆ ರೋಗ ವಾಸಿ- ಡಾ.ಕೆ.ಎಸ್.ನಟರಾಜ್.

World Tuberculosis Day ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ...

Shimoga News ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು- ಎನ್.ಪ್ರಕಾಶ್

Shivamogga News ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಉನ್ನತ...