ಸೆಪ್ಟೆಂಬರ್ 27 ರಿಂದ ಇಂದಿನಿಂದ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಇನ್ನು ಮುಂದೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಕಲಾಪಗಳ ನೇರ ಪ್ರಸಾರ ಆರಂಭವಾಗಿವೆ. ಈ ಮೂಲಕ ಸಾಮಾನ್ಯ ಜನರು ಕೂಡ ತಮ್ಮ ಮನೆಯಲ್ಲಿ ಕುಳಿತು ಸುಪ್ರೀಂ ಕೋರ್ಟ್ ವಿಚಾರಣೆಯ ಕಲಾಪಗಳನ್ನು ವೀಕ್ಷಿಸಿಬಹುದಾಗಿದೆ.
ಸದ್ಯ ಸಾಂವಿಧಾನಿಕ ವಿಷಯಗಳ ನೇರ ಪ್ರಸಾರ ಮಾತ್ರ ನಡೆಯಲಿದೆ.
ಇಂದು ಏನೆಲ್ಲಾ ವಿಚಾರಣೆ ನಡೆಯಿತು..?
ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಮುಂದೆ ಸಂವಿಧಾನಕ್ಕೆ ವಿರುದ್ಧವೆಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗಳನ್ನ ಮಾತ್ರ ಇಂದಿನಿಂದ ತಿಳಿದುಕೊಳ್ಳಬಹುದು. ಅದರಂತೆ ಇಂದು ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ 10 ಪರ್ಸೆಂಟ್ ಮೀಸಲಾತಿ, ಶಿವಸೇನೆಯ ರಾಜಕೀಯ ವಿವಾದ, ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಸಂಘರ್ಷ, NRC-CAA ಮುಂತಾದ ಪ್ರಮುಖ ವಿಷಯಗಳ ಬಗ್ಗೆ ವಿಚಾರಣೆ ನಡೆದಿದೆ.
ಕಳೆದ ವಾರವಷ್ಟೇ ಈ ಪ್ರಕರಣಗಳ ಲೈವ್ ಸ್ಟ್ರೀಮಿಂಗ್ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.
ವಿಚಾರಣೆಯನ್ನ ವೀಕ್ಷಿಸಲು ಜನರು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ https://webcast.gov.in/scindia/ ಗೆ ಲಾಗಿನ್ ಆಗಬೇಕು.