Friday, October 4, 2024
Friday, October 4, 2024

ದೇವಿ ಬ್ರಹ್ಮಚಾರಿಣಿ

Date:

ನವ ದುರ್ಗೆಯರಲ್ಲಿ ಒಬ್ಬಳಾದ ದೇವಿ ಬ್ರಹ್ಮಚಾರಿಣಿ ಯನ್ನು ನವರಾತ್ರಿಯ ದ್ವಿತೀಯ ದಿನ ಆರಾಧಿಸಿ ಪೂಜಿಸಿ ಸಂಕಲ್ಪ ಸಿದ್ದಿಗೆ ಪ್ರಾರ್ಥಿಸುತ್ತಾರೆ .
ಒಂದು ದಂತಕಥೆ ಪ್ರಚಲಿತದಲ್ಲಿರುವಂತೆ , ಕನ್ಯೆ ಪಾರ್ವತೀ ದೇವಿಯು ಪರಶಿವನನ್ನು ವರಿಸಲು ನಿರ್ಧರಿಸಿ ದಾಗ ತಂದೆತಾಯಿಯರು ಅಸಮ್ಮತಿ ಸೂಚಿಸುತ್ತಾರೆ . ಆದರೆ ದೇವಿಯ ನಿರ್ಧಾರ ಅಚಲ , ಅಲ್ಲದೆ ಶತ ಪ್ರಯತ್ನಮಾಡಿದರೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸುಮಾರು 5000 ವರ್ಷಗಳ ಕಾಲ ಘನ ಘೋರ ತಪಸ್ಸನ್ನು ಮಾಡುತ್ತಾಳೆ , ಶಿವನಿರುವೆಡೆಯಲ್ಲೆಲ್ಲ ಅವನ ಗಮನ ಸೆಳೆಯಲು ಕಾಡುಮೇಡುಗಳಲ್ಲಿ , ಬೆಟ್ಟಗುಡ್ಡಗಳಲ್ಲಿ , ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾಳೆ , ಅವನ ಕೆಲಸ ಕಾರ್ಯಗಳಲ್ಲಿ ಸಹಕರಿಸುತ್ತಾಳೆ , ಸಂಚರಿಸುತ್ತಾಳೆ . ದೇವರುಗಳು . ಸಹ ಶಿವನಲ್ಲಿ ಪ್ರೀತಿ ಪ್ರೇಮ ಕಾಮ ಜಾಗೃತವಾಗಲು ಕಾಮದೇವನನ್ನು ಪ್ರಚೋದಿಸುತ್ತಾರೆ , ಆದರೆ ಎಲ್ಲಾ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ . ಮತ್ತೊಂದೆಡೆ ಪಾರ್ವತಿಯ ತಪಸ್ಸಿಗೆ ಭಂಗ ತರಲು ಪ್ರಚಂಡಾ ಸುರ ರಾಕ್ಷಸನು ರಾಕ್ಷಸರೊಡನೆ ಸ್ವತಃ ಉಪಟಳ ನೀಡುವ ಮೂಲಕ ಪ್ರಯತ್ನಿಸಿ ದೇವಿಯ ಕೆಂಗಣ್ಣಿಗೆ ಗುರಿಯಾಗಿ ಭಸ್ಮವಾಗುತ್ತಾನೆ .
ಕೊನೆಗೂ ಶಿವನ ಅನೇಕ ಪರೀಕ್ಷೆಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ವತಿ ಗೆಲ್ಲುತ್ತಾಳೆ , ಆಗ ಶಿವನು ತನ್ನ ಸಂಕಲ್ಪವನ್ನು ಸಡಿಲಿಸಿ ಪಾರ್ವತಿಯನ್ನು ಮದುವೆಯಾಗುತ್ತಾನೆ .
ಪಾರ್ವತಿ ಗೆ ತನ್ನ ತಪಸ್ಸಿನ ಅವಧಿಯಲ್ಲಿ ಕೇವಲ ಬಿಲ್ವಪತ್ರೆ ಮತ್ತು ನದಿಯ ನೀರೇ ಆಹಾರವಾಗಿತ್ತು . ಪಾರ್ವತಿಯ ನಿಶ್ಚಲತೆ , ದೃಢತೆ , ಬ್ರಹ್ಮಚರ್ಯ ಪಾಲನೆ , ಕಷ್ಟ ಸಹಿಷ್ಣುತೆ , ಯ ಗುಣಗಳು ಮಹಿಳೆಯರಿಗೆ ಮಾರ್ಗದರ್ಶಿ . ಹಾಗಾಗಿ ಅವಳನ್ನು ಭಕ್ತಿ ಯಿಂದ ನವರಾತ್ರಿಯಲ್ಲಿ ಆರಾಧಿಸುತ್ತಾರೆ .
ಲೇ: ಎಮ್. ತುಳಸಿರಾಮ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...