ದೇವಿ ಚಂದ್ರ ಘಂಟಿ ;
ಶಿವ ಮಹಾ ಪುರಾಣದ ಅನ್ವಯ , ಚಂದ್ರ ಘಂಟಿ ಯಲ್ಲಿ ಚಂದ್ರಶೇಖರನ ರೂಪದಲ್ಲಿ ಶಿವನ ” ಶಕ್ತಿ “. ಶಿವನ (ಅರ್ಧನಾರೀಶ್ವರ) ಪ್ರತಿಯೊಂದು ಅಂಶವು ಶಕ್ತಿಯಿಂದ ಕೂಡಿದೆ.
ಚಂದ್ರಘಂಟಿದೆವಿಯನ್ನು ಚಂದ್ರ ಚೂಡ – ಚಂಡಿಕಾ – ರಣಚಂಡಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ.
ಚಂದ್ರಘಂಟಿ ಹತ್ತು ಕೈಗಳನ್ನು ಹೊಂದಿದ್ದು ತ್ರಿಶೂಲ, ಗದೆ ,ಬಿಲ್ಲು ಬಾಣ , ಕತ್ತಿ , ಕಮಲ ಪುಷ್ಪ ,ಘಂಟೆ , ಕಮಂಡಲು ಗಳನ್ನು ಪಿಡಿದಿದ್ದು, ಒಂದು ಕೈ ಅಭಯಮುದ್ರೆ ಅಥವ ಆಶೀರ್ವಾದ ಕ್ಕಾಗಿ ಇದೆ .ಹಣೆಯ ಮೇಲೆ ಘಂಟೆಯನ್ನು ಚಿತ್ರಿಸುವ ಅರ್ಧjಚಂದ್ರ , ಹಣೆಯ ಮಧ್ಯದಲ್ಲಿ ಮೂರನೇ ಕಣ್ಣನ್ನು ಹೊಂದಿದ್ದಾಳೆ . ಸಿಂಹಾರೂಡಳು.
ಚಂದ್ರಘಂಟಿ ದೇವಿಯಲ್ಲಿ ರೂಪ ಸೌಂದರ್ಯ, ತೇಜಸ್ಸಿನೊಡನೆ ಧೈರ್ಯ , ಶೌರ್ಯ, ಸಾಹಸಗಳೂ ಸಮ್ಮಿಳಿತ ವಾಗಿವೆ .
ದಯಾಮಯಿ , ಮಾತೃ ಹೃದಯಿ , ಕರುಣಾಮಯಿ ತನ್ನ ಭಕ್ತರಿಗೆ ಶಾಂತಿ ಸಮೃದ್ಧಿ ನೀಡಿ ತಾಯಿ ಪ್ರೇಮ ನೀಡುವಳು .
ರಾಕ್ಷಸ ಸಂಹಾರ ಯುದ್ಧದಲ್ಲಿ ದೇವಿಯ ಘಂಟೆಯಿಂದ ಉತ್ಪತ್ತಿಯಾಗಿ ಬರುತ್ತಿದ್ದ ಗುಡುಗಿನ ಶಬ್ದಕ್ಕೆ ದಿಗ್ಬ್ರಮೆ ಗೊಂಡು ರಾಕ್ಷಸರು ಪಾರ್ಶ್ವವಾಯು ಪೀಡಿತರಾದರೆಂಬ ಮಾತು ಜನಪದರಲ್ಲಿದೆ . ದುಷ್ಟರಿಗೆ ರಾಕ್ಷಸರಿಗೆ ಸಿಂಹ ಸ್ವಪ್ನ ವಾಗಿದ್ದಾಳೆ .
ನವರಾತ್ರಿ ಯ ಮೂರನೇ ದಿನ ದೇವಿಯ ಅನುಗ್ರಹಕ್ಕಾಗಿ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಶಾಂತಿ ಸಮೃದ್ಧಿ ಪಡೆಯುತ್ತಾರೆ .