Friday, October 4, 2024
Friday, October 4, 2024

ಎರಡನೇ ಟಿ20 ಒದ್ದೆ ಅಂಕಣ ನಿಮಿತ್ತ ಟಿ8 ಆಗಿ ಪರಿವರ್ತನೆ ಭಾರತಕ್ಕೆ ಜಯ

Date:

8 ಓವರ್‌ಗಳಿಗೆ ಸೀಮಿತಗೊಂಡ ಎರಡನೆಯ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಭಾರತ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 5 ವಿಕೆಟಿಗೆ 90 ರನ್‌ ಮಾಡಿದರೆ, ಭಾರತ 7.2 ಓವರ್‌ಗಳಲ್ಲಿ 4 ವಿಕೆಟಿಗೆ 92 ರನ್‌ ಬಾರಿಸಿತು. ಪ್ರಥಮ ಪಂದ್ಯವನ್ನು ಆಸೀಸ್‌ 4 ವಿಕೆಟ್‌ಗಳಿಂದ ಗೆದ್ದಿತ್ತು. ಕೊನೆಯ ಏಕದಿನ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ.

ಚೇಸಿಂಗ್‌ ಸಂದರ್ಭದಲ್ಲಿ ನಾಯಕ ರೋಹಿತ್‌ ಶರ್ಮ ಸಿಡಿದು ನಿಂತರು. ಹೇಝಲ್‌ವುಡ್‌ ಅವರ ಮೊದಲ ಓವರ್‌ನಲ್ಲೇ 3 ಸಿಕ್ಸರ್‌ ಎತ್ತಿದರು. ಕಪ್ತಾನನ ಕೊಡುಗೆ ಅಜೇಯ 46 ರನ್‌ (20 ಎಸೆತ, 4 ಬೌಂಡರಿ, 4 ಸಿಕ್ಸರ್‌). ದಿನೇಶ್‌ ಕಾರ್ತಿಕ್‌ ಅಂತಿಮ ಓವರ್‌ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ಗೆಲುವು ಸಾರಿದರು.
ಒದ್ದೆ ಅಂಗಳದಿಂದಾಗಿ ಪಂದ್ಯ ಎರಡೂವರೆ ಗಂಟೆ ವಿಳಂಬಗೊಂಡಿತು. 9.15ಕ್ಕೆ ಟಾಸ್‌ ಹಾರಿಸಿ, 9.30ಕ್ಕೆ ಪಂದ್ಯವನ್ನು ಪ್ರಾರಂಭಿಸಲಾಯಿತು.

ಭಾರತದ ಬೌಲಿಂಗ್‌ ಆರಂಭಿ ಸಿದವರು ಹಾರ್ದಿಕ್‌ ಪಾಂಡ್ಯ. ಇದರಲ್ಲಿ ಎರಡು ಬೌಂಡರಿ ಸೇರಿದಂತೆ 10 ರನ್‌ ದೊರಕಿತು. ಅಕ್ಷರ್‌ ಪಟೇಲ್‌ ಅವರಿಗೂ ಬೌಂಡರಿ ಸ್ವಾಗತ ಸಿಕ್ಕಿತು. ಆದರೆ, 3ನೇ ಎಸೆತದಲ್ಲಿ ಕ್ಯಾಮರಾನ್‌ ಗ್ರೀನ್‌ ರನೌಟಾಗಿ ನಿರ್ಗಮಿಸಿದರು. ಕಳೆದ ಪಂದ್ಯದ ಹೀರೋ ಗ್ರೀನ್‌ ಇಲ್ಲಿ 5 ರನ್ನಿಗೆ ವಾಪಸಾದರು. ಓವರ್‌ನ ಅಂತಿಮ ಎಸೆತದಲ್ಲಿ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಬೌಲ್ಡ್‌ ಆದರು. ಅವರದು ಗೋಲ್ಡನ್‌ ಡಕ್‌ ಆಗಿತ್ತು.

ಚಹಲ್‌ ಎಸೆದ 3ನೇ ಓವರ್‌ ದುಬಾರಿಯಾಯಿತು. ಆಸೀಸ್‌ 12 ರನ್‌ ಬಾರಿಸಿತು. ಮುಂದಿನ ಓವರ್‌ನ ಪ್ರಥಮ ಎಸೆತದಲ್ಲೇ ಅಕ್ಷರ್‌ ಪಟೇಲ್‌ ಮತ್ತೊಂದು ವಿಕೆಟ್‌ ಬೇಟೆಯಾಡಿದರು.

ಟಿಮ್‌ ಡೇವಿಡ್‌ ಬೌಲ್ಡ್‌ ಆದರು. ಈ ಓವರ್‌ನಲ್ಲಿ ಅವರು ನೀಡಿದ್ದು 4 ರನ್‌.

ಬುಮ್ರಾ ದಾಳಿಗೆ ಇಳಿದದ್ದು 5ನೇ ಓವರ್‌ನಲ್ಲಿ. ಇಲ್ಲಿ ಅವರಿಗೆ ಆಸೀಸ್‌ ನಾಯಕನ ವಿಕೆಟ್‌ ಸಿಕ್ಕಿತು. ಆರನ್‌ ಫಿಂಚ್‌ 31 ರನ್‌ ಮಾಡಿ ಬೌಲ್ಡ್‌ ಆದರು. 5 ಓವರ್‌ ಮುಕ್ತಾಯಕ್ಕೆ ಆಸೀಸ್‌ 4 ವಿಕೆಟಿಗೆ 46 ರನ್‌ ಗಳಿಸಿಕೊಂಡಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...