Saturday, December 6, 2025
Saturday, December 6, 2025

ಬಿಗ್ ಬಾಸ್ ಸೀಸನ್ 9 ಇಂದಿನಿಂದ ಕಲರ್ಸ್ ವಾಹಿನಿಯಲ್ಲಿ ಆರಂಭ

Date:

ಕನ್ನಡ ಕಿರುತೆರೆಯ ಜನಪ್ರಿಯತೆ ಪಡೆದುಕೊಂಡಿರುವ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 9 ಇಂದು (ಸೆ.24)ರ ಸಂಜೆ 6ರಿಂದ ಆರಂಭವಾಗಲಿದೆ.

ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದೆ. ಒಟ್ಟು 18 ಜನ ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕೆ ಹಣಾಹಣಿ ಇರಲಿದೆ ಎಂದು ಕಲರ್ಸ್‌ ಕನ್ನಡ ಮಾಹಿತಿ ನೀಡಿದೆ.

ಬಿಗ್‌ಬಾಸ್‌ ಒಟಿಟಿ ಆವೃತ್ತಿ ಮುಗಿದ ಬೆನ್ನಲ್ಲೇ, 9ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಶನಿವಾರ ಹಾಗೂ ಭಾನುವಾರ(ಸೆ.24-25ರಂದು) ನಟ ಕಿಚ್ಚ ಸುದೀಪ್ ಒಟ್ಟು 18 ಜನರನ್ನು ಬಿಗ್‌ಬಾಸ್ ಮನೆಯೊಳಕ್ಕೆ ಕಳುಹಿಸಿಕೊಡಲಿದ್ದಾರೆ. 100 ದಿನ ಈ ಬಿಗ್‌ಬಾಸ್ ಆಟ ನಡೆಯಲಿದೆ. ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಇದು ಪ್ರಸಾರವಾಗಲಿದೆ. 9ನೇ ಆವೃತ್ತಿ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆಗೆ 9 ಅನುಭವಿ ಸ್ಪರ್ಧಿಗಳು ಕಣದಲ್ಲಿರುತ್ತಾರೆ.

ಆದ್ದರಿಂದ, ಈ ಆವೃತ್ತಿಯನ್ನು ಪ್ರವೀಣರು ಮತ್ತು ನವೀನರ ಹಣಾಹಣಿ ಎಂದು ಕಲರ್ಸ್ ಕನ್ನಡ ಚಾನೆಲ್ ವರ್ಣಿಸಿದೆ.

9 ಅನುಭವಿ ಸ್ಪರ್ಧಿಗಳ ಪಟ್ಟಿಯಲ್ಲಿ ಒಟಿಟಿ ಆವೃತ್ತಿಯಲ್ಲಿ ಟಾಪ್ ಫೋರ್‌ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್‌ ಮತ್ತು ಸಾನ್ಯಾ ಅಯ್ಯರ್ ಇರುತ್ತಾರೆ. ಇವರ ಜೊತೆಗೆ ಹಿಂದಿನ ಬಿಗ್‌ಬಾಸ್ ಆವೃತ್ತಿಯಲ್ಲಿ ಆಡಿ ಜನಮೆಚ್ಚುಗೆ ಗಳಿಸಿದ 5 ಸ್ಪರ್ಧಿಗಳು ಇರಲಿದ್ದಾರೆ. ಈ ಪೈಕಿ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌ ಹಾಗೂ ಅನುಪಮಾ ಗೌಡ ಮನೆ ಪ್ರವೇಶಿಸುವುದು ಖಚಿತವಾಗಿದೆ. ಇನ್ನುಳಿದವರು ಯಾರು ಎನ್ನುವ ಕುತೂಹಲವನ್ನು ಚಾನೆಲ್‌ ಇನ್ನೂ ಉಳಿಸಿಕೊಂಡಿದೆ.

ಇವರ ಜೊತೆಗೆ ಮನೆ ಪ್ರವೇಶಿಸಲಿರುವ 9 ಜನ ಹೊಸ ಸ್ಪರ್ಧಿಗಳು ಯಾರು ಎಂಬುವುದು ಇಂದು ಶನಿವಾರದ ಸಂಚಿಕೆಯಲ್ಲಿ ತಿಳಿಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...