ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ ಪ್ರಾರಂಭವಾಗಲಿದ್ದು, ಅಲಯನ್ಸ್ ಏರ್ ಈ ಸೇವೆ ನೀಡುತ್ತಿದೆ.
ಈಗಾಗಲೇ, ಇಂಡಿಗೋ ಏರ್ಲೈನ್ಸ್ ಸಂಜೆ ವೇಳೆಯಲ್ಲಿ ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ನೀಡುತ್ತಿದೆ.
ಆದರೆ, ಈ ಮಾರ್ಗದಲ್ಲಿ ಬೆಳಗ್ಗೆ ವಿಮಾನಸೇವೆ ಒದಗಿಸಬೇಕೆಂಬುದು ಹೆಚ್ಚಿನ ಪ್ರಯಾಣಿಕರ ಬೇಡಿಕೆಯಾಗಿತ್ತು. ಆದ್ದರಿಂದ ಅಲಯನ್ಸ್ ಏರ್ ಮೈಸೂರು,ಚೆನ್ನೈ ನಡುವೆ ವಿಮಾನ ಸೇವೆ ಆರಂಭಿಸಿದೆ.
ವಾರದಲ್ಲಿ 3 ದಿನ ವಿಮಾನ ಹಾರಾಟ ನಡೆಸಲಿದೆ. ವಿಮಾನವು ಚೆನ್ನೈನಿಂದ ಬೆಳಗ್ಗೆ 9.25ಕ್ಕೆ ಹೊರಡಲಿದೆ. 11 ಗಂಟೆಗೆ ಮೈಸೂರಿಗೆ ಬರಲಿದೆ. ನಂತರ ಮೈಸೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು, ಮಧ್ಯಾಹ್ನ 1.30ಕ್ಕೆ ಚೆನ್ನೈ ತಲುಪಲಿದೆ. 70 ಆಸನಗಳನ್ನು ಒಳಗೊಂಡಿರುವ ಐಷಾರಾಮಿ ವಿಮಾನ ಇದಾಗಿದೆ. ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಟಿಕೆಟ್ ದರ ತಲಾ 4,678 ರೂ. ನಿಗದಿಪಡಿಸಲಾಗಿದೆ.