ಹೊಸ ಜಗತ್ತಿಗೆ ಕಾಲಿಟ್ಟ ಮಗುವಿಗೆ ತಾಯಿಯ ಎದೆಹಾಲೇ ಜೀವ ಸಂಜೀವಿನಿ.
ಪ್ರತಿವರ್ಷ ಆಗಸ್ಟ್ 1-7ರವರೆಗೆ ಬ್ರೆಸ್ಟ್ ಫೀಡಿಂಗ್ ವೀಕ್ (ಸ್ತನಪಾನ ವಾರ) ಎಂದು ಆಚರಿಸಲಾಗುತ್ತದೆ.
1990ರಿಂದ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಸೇರಿ ಸ್ತನಪಾನದ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ರೆಸ್ಟ್ ಫೀಡಿಂಗ್ ವೀಕ್ ಆಚರಿಸಲಾಗುತ್ತದೆ.
ಸ್ತನಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಸ್ತನಪಾನದಿಂದ ಪ್ರತಿವರ್ಷ ವಿಶ್ವದಾದ್ಯಂತ 8 ಲಕ್ಷ ಜೀವ ಉಳಿಸಲು ಸಾಧ್ಯವಾಗುತ್ತಿದೆ, ಅದರಲ್ಲೂ 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಪೋಷಕಾಂಶದ ಕೊರತೆ ಉಂಟಾಗದಿರಲು ಹಾಗೂ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನಪಾನ ಅವಶ್ಯಕ.
ಸಹಜವಾಗಿ ಹೆರಿಗೆಯನ್ನು ಅನುಭವಿಸಿದ್ದ ಮಹಿಳೆ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಬೇಕು. ಅದೇ ಸಿಜೇರಿಯನ್/ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಪಡೆದಿದ್ದರೆ ಅಂತಹ ತಾಯಂದಿರು ನಾಲ್ಕು ಗಂಟೆಯೊಳಗೆ ಎದೆಹಾಲನ್ನು ಉಣಿಸಬೇಕು. ಪ್ರತಿಯೊಂದು ತಾಯಿ ತನ್ನ ಮಗುವಿಗೆ ಆರು ತಿಂಗಳಗಳ ಕಾಲ ಕೇವಲ ಎದೆಹಾಲನ್ನು ಉಣಿಸಬೇಕು. ನಂತರ ಮಗುವಿನ ಬೆಳವಣಿಗೆ ಆದಂತೆ ಸ್ವಲ್ಪ ಸ್ವಲ್ಪವೇ ಮೃದು ಆಹಾರ, ಹಣ್ಣಿನ ರಸಗಳನ್ನು ನೀಡಬಹುದು. ತಾಯಿಗೆ ಹಾಲಿನ ಕೊರತೆ ಇಲ್ಲದೆ ಹೋದರೆ ಮಗುವಿಗೆ ಎರಡು ವರ್ಷಗಳ ಕಾಲ ಹಾಲುಣಿಸಬಹುದು. ಇದು ಮಗುವಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಅಮೃತ ಎನ್ನಬಹುದು ಎಂದು ವೈದ್ಯರು ಹೇಳುತ್ತಾರೆ.
ಆದರೆ ಇತ್ತೀಚಿನ ದಿನದಲ್ಲಿ ಕೆಲಸದ ಒತ್ತಡ ಹಾಗೂ ಫ್ಯಾಷನ್ ಹೆಸರಿನಲ್ಲಿ ಬಹುತೇಕ ಮಹಿಳೆಯರು ತಮ್ಮ ಮಕ್ಕಳಿಗೆ ಕಡಿಮೆ ಅವಧಿಯ ವರೆಗೆ ಹಾಲನ್ನು ಉಣಿಸುತ್ತಾರೆ. ಇದರಿಂದ ಮಗುವಿನ ಆರೋಗ್ಯವು ಬಹುಬೇಗ ಹದಗೆಡುವುದು. ಆದರೆ ಇದರ ಬಗ್ಗೆ ಯಾರು ಹೆಚ್ಚಿನ ಚಿಂತನೆ ನಡೆಸುವುದಿಲ್ಲ. ಮಗುವಿಗೆ ತಾಯಿಯ ಎದೆಹಾಲು ಆರೋಗ್ಯಕರವಾದ ಪೋಕಾಂಶಗಳನ್ನು ನೀಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುವುದು. ಅಲ್ಲದೆ ತಾಯಿಯ ಆರೋಗ್ಯದಲ್ಲೂ ಸಾಕಷ್ಟು ಉತ್ತಮ ಬದಲಾವಣೆಗಳು ಉಂಟಾಗುತ್ತವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಹಾಲುಣಿಸುವಾಗ ತಾಯಂದಿರು ಅನುಸರಿಸಬೇಕಾದ ಕ್ರಮಗಳು ಹೀಗಿವೆ.
ಹಾಲುಣಿಸುವಾಗ ಕೆಲವು ಎಚ್ಚರಿಕೆಯನ್ನು ತಾಯಂದಿರು ಗಮನಿಸಬೇಕಾಗುವುದು. ಮಗುವಿಗೆ ಉಸಿರುಗಟ್ಟುವಂತೆ ಮಾಡಿಕೊಂಡು ಹಾಲುಣಿಸಬಾರದು. ತೆರೆದ ಗಾಳಿ ಹಾಗೂ ಸುಲಭವಾಗಿ ಹಾಲುಣುವಂತೆ ಮಾಡಿಕೊಡಬೇಕು. ಕುಳಿತುಕೊಂಡೇ ಹಾಲುಣಿಸುವುದನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಇರುವಾಗ ಪ್ರತ್ಯೇಕ ಕೋಣೆಯಲ್ಲಿ ಆರಾಮವಾಗಿ ಕುಳಿತು, ಮಗುವಿಗೂ ತೊಂದರೆ ಉಂಟಾಗದಂತೆ ಮಾಡಿಕೊಂಡು ಹಾಲುಣಿಸಬೇಕು. ಎರಡು ಗಂಟೆಗಳಿಗೊಮ್ಮೆ ಮಗುವಿಗೆ ಹಾಲುಣಿಸುವ ರೂಢಿಯನ್ನು ಇಟ್ಟುಕೊಂಡರೆ ಮಗುವು ಆರೋಗ್ಯಯುತವಾಗಿ ಬೆಳವಣಿಗೆಯನ್ನು ಕಾಣುವುದು. ಜೊತೆಗೆ ತಾಯಿಗೂ ಎದೆಹಾಲು ಕಟ್ಟಿಕೊಳ್ಳುವ ಹಾಗೂ ನೋವು ಬರುವುದು ತಡೆಯಬಹುದು.
ಕೆಲವರು ಎದೆಹಾಲಿಗೆ ಪರ್ಯಾಯವಾಗಿ ಬೇರೆ ಆಹಾರವನ್ನು ನೀಡುವರು. ಇದರಿಂದ ಮಗುವಿನ ಜೀರ್ಣಕ್ರಿಯೆಯ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತದೆ. ಬಹುತೇಕ ತಾಯಂದಿರಿಗೆ ಯಾವ ರೀತಿಯ ಕಾಳಜಿ ಹಾಗೂ ಎದೆಹಾಲನ್ನು ಉಣಿಸುವ ಸರಿಯಾದ ಮಾರ್ಗದರ್ಶನ ಇರುವುದಿಲ್ಲ. ಹಾಗಾಗಿಯೇ ವಿಶ್ವ ಸ್ತನ್ಯಪಾನ ವಾರದ ಪ್ರಯುಕ್ತ ಎದೆ ಹಾಲನ್ನು ಉಣಿಸುವ ರೀತಿ ಹಾಗೂ ಸೂಕ್ತ ಮಾರ್ಗದರ್ಶನಗಳನ್ನು ಈ ಮುಂದೆ ನೀಡಲಾಗಿದೆ.
ಸ್ತನ್ಯಪಾನಕ್ಕಾಗಿ ಸಲಹೆಗಳು ನೋಡುವುದಾದರೆ ಹೀಗಿವೆ.
ಮಗುವಿನ ಹಾವ ಭಾವಗಳನ್ನು ಹೆಚ್ಚು ಗಮನಿಸಬೇಕಾಗುವುದು. ಮಗು ಅಳುವುದು ಹಸಿವಿನ ಚಿಹ್ನೆ. ನಿಮ್ಮ ಮಗುವಿಗೆ ಅವನು / ಅವಳು ಹಸಿವಿನಿಂದ ಬಳಲುತ್ತಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲು ಬೇರೂರಿಸುವಿಕೆ, ತುಟಿಗಳನ್ನು ನೆಕ್ಕುವುದು, ಕೈಗಳಿಂದ ಬಾಯಿಯನ್ನು ಸ್ಪರ್ಶಿಸುವುದು ಮುಂತಾದ ವರ್ತನೆಯನ್ನು ತೋರುತ್ತಾರೆ. ಆಗ ನೀವು ಮಗುವಿಗೆ ಹಸಿವಾಗಿದೆ ಎನ್ನುವುದನ್ನು ಅರಿಯಬೇಕು. ಮಗು ಬೆಳೆದಂತೆ ನಿಮ್ಮ ಮಗುವಿನ ಅಗತ್ಯತೆಗಳು ಬದಲಾಗುತ್ತವೆ. ನೀವು ಹೆಚ್ಚಾಗಿ ಅಥವಾ ಹೆಚ್ಚು ಸಮಯದವರೆಗೆ ಸ್ತನ್ಯಪಾನ ಮಾಡಬೇಕಾಗಬಹುದು. ನಿಮ್ಮ ಮಗುವಿಗೆ ಹಾಲುಣಿಸುವಾಗ ಗಡಿಯಾರವನ್ನು ನೋಡಬೇಡಿ ಮತ್ತು ನಿಮ್ಮ ಪ್ರವೃತ್ತಿಗೆ ಅನುಗುಣವಾಗಿ ಹೋಗಬೇಡಿ. ಮಗುವಿಗೆ ಹೊಟ್ಟೆ ತುಂಬಿದ ಬಳಿಕ ಹಾಲುಕುಡಿಯುವುದನ್ನು ನಿಲ್ಲಿಸುತ್ತದೆ. ಅದರ ಆಧಾರದ ಮೇಲೆ ನೀವು ಹಾಲುಣಿಸುವುದನ್ನು ನಿಲ್ಲಿಸಬೇಕು.
ಧೂಮಪಾನ ಮಾಡಬೇಡಿ
ಸ್ತನ್ಯಪಾನ ಮಾಡುವ ಮೊದಲು ಅಥವಾ ಸಮಯದಲ್ಲಿ ಧೂಮಪಾನ ಮಾಡಬೇಡಿ. ಏಕೆಂದರೆ ಧೂಮಪಾನವು ಹಾಲಿನ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯ ಸಮಸ್ಯೆಗಳಿಗೆ ತೀವ್ರ ಅಪಾಯಗಳನ್ನುಂಟುಮಾಡುವುದರ ಹೊರತಾಗಿ, ಇದು ಹಾಲಿನ ರುಚಿಯ ಜೊತೆಗೆ ನಿಮ್ಮ ಮಗುವಿನ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
ಸೆಕೆಂಡ್ ಹ್ಯಾಂಡ್ ಹೊಗೆ ಕೂಡ ಹಠಾತ್ ಶಿಶು ಸಾವಿನ ಸಿಂಡ್ರೋಮ್, ಬಾಲ್ಯದ ಆಸ್ತಮಾ, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ತಾಯಿಯ ಎದೆಹಾಲು ಹೆಚ್ಚಿಸಲು ಮನೆಮದ್ದುಗಳು
ಚೆನ್ನಾಗಿ ನೀರು ಮತ್ತು ಹಾಲು ಕುಡಿಯಿರಿ
ನೀರು ಮತ್ತು ಹಾಲು ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿರುವಂತೆಯೇ ತಾಯಿಹಾಲಿನ ಉತ್ಪಾದನೆಯಲ್ಲಿಯೂ ನೀರು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸುವಲ್ಲಿ ಅತ್ಯುತ್ತಮವಾದುದು ಹಸುವಿನ ಹಾಲು. ಇದರಲ್ಲಿ ಶೇಖಡಾ ಎಂಭತ್ತು ಅಪ್ಪಟ ನೀರು ಇರುವುದರಿಂದ ಹಾಗೂ ಹಾಲಿನಲ್ಲಿರುವ ಇತರ ಪೋಷಕಾಂಶಗಳು ತಾಯಿಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
ಬೇರೆ ಸಮಯದಲ್ಲಿ ಎಂಟು ಲೋಟ ನೀರು ನಿಮಗೆ ಅಗತ್ಯವಿದೆ. ಪ್ರಥಮ ತಿಂಗಳುಗಳಲ್ಲಿ ಈ ಪ್ರಮಾಣವನ್ನು ಸುಮಾರು ಹನ್ನೆರಡು ಲೋಟಗಳಿಗೆ ಹೆಚ್ಚಿಸುವುದು ಒಳಿತು.
ಬೆಳ್ಳುಳ್ಳಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿಗೆ ತಾಯಿಹಾಲನ್ನು ಹೆಚ್ಚಿಸುವ ಶಕ್ತಿಯೂ ಇದೆ. ಮೂರು ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಲೋಟ ನೀರಿನಲ್ಲಿ ಕುದಿಸಿ. ಕುದಿಬಂದ ಬಳಿಕ ಜ್ವಾಲೆಯನ್ನು ಚಿಕ್ಕದಾಗಿಸಿ ಈ ನೀರು ಕಾಲುಭಾಗವಾಗುವವರೆಗೂ ಮುಂದುವರೆಸಿ. ಈಗ ಒಂದು ಕಪ್ ಹಸುವಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿ ಬರಿಸಿ. ಕುದಿಬಂದ ಬಳಿಕ ಇಳಿಸಿ ಸೋಸಿ ಅರ್ಧ ಚಮಚ ಜೇನು ಸೇರಿಸಿ ಕಲಕಿ. ಈ ದ್ರವವನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಸುಮಾರು ಆರು ತಿಂಗಳವರೆಗೂ ಇದನ್ನು ಕುಡಿಯುವುದು ಶ್ರೇಯಸ್ಕರ.
ಪ್ರತಿದಿನ ಕೆಲವು ಬಾದಾಮಿ ಮತ್ತು ಗೋಡಂಬಿಗಳನ್ನು ಕುರುಕುವ ಮೂಲಕವೂ ತಾಯಿಹಾಲನ್ನು ಹೆಚ್ಚಿಸಬಹುದು. ಆದರೆ ಒಂದು ದಿನಕ್ಕೆ ಹತ್ತಕ್ಕಿಂತ ಹೆಚ್ಚು ಬಾದಾಮಿ ಅಥವಾ ಗೋಡಂಬಿಯನ್ನು ಸೇವಿಸಬೇಡಿ.
ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳನ್ನು ಹೆಚ್ಚಾಗಿ ಸೇವಿಸಿ
ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳಲ್ಲಿ ತಾಯಿಹಾಲನ್ನು ಹೆಚ್ಚಿಸುವ ಪೋಷಕಾಂಶಗಳಿವೆ. ಇವುಗಳನ್ನು ಸಾಧ್ಯವಾದಷ್ಟು ಹಸಿಯಾಗಿ ಸೇವಿಸಿ. ತೆಳುವಾದ ಬಿಲ್ಲೆಗಳಂತೆ ಕತ್ತರಿಸಿ ಪ್ರತಿ ಊಟದಲ್ಲಿ ಸಲಾಡ್ ರೂಪದಲ್ಲಿ ಸೇವಿಸಿ. ಇದರಲ್ಲಿ ಬೀಟ್ ರೂಟ್ ಅತ್ಯುತ್ತಮವಾಗಿದೆ.
ತುಳಸಿ ಎಲೆಗಳಲ್ಲಿ ಅತ್ಯುತ್ತಮ ಪ್ರಮಾಣದ ವಿಟಮಿನ್ ಕೆ. ಇದೆ. ಈ ಪೋಷಕಾಂಶ ರಕ್ತಹೆಪ್ಪುಗಟ್ಟುವ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ಹೆಚ್ಚಿಸಲೂ ನೆರವಾಗುತ್ತದೆ. ಈಗ ತಾನೇ ಹೂಬಿಟ್ಟ ತುಳಸಿ ಗಿಡದ ಎಲೆಗಳು ತಾಯಿಹಾಲಿಗೆ ಅತ್ಯುತ್ತಮವಾಗಿವೆ. ಹೂಗಳ ಕೆಳಭಾಗದ ಸುಮಾರು ಹತ್ತು ಎಲೆಗಳನ್ನು ಚೆನ್ನಾಗಿ ಕೊಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಒಂದು ನಿಮಿಷ ಕುದಿದ ಬಳಿಕ ಉರಿಯನ್ನು ತುಂಬಾ ಚಿಕ್ಕದಾಗಿಸಿ ಐದು ನಿಮಿಷ ಬಿಡಿ. ಬಳಿಕ ಈ ನೀರನ್ನು ನೋಸಿ ಎರಡು ಹನಿ ಜೇನುತುಪ್ಪವನ್ನು ಸೇರಿಸಿ. ತಣಿದ ಬಳಿಕ ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಬಾರಿಗೆ ಅರ್ಧ ಕಪ್). ಮಗುವಿಗೆ ಆರು ತಿಂಗಳು ತುಂಬುವವರೆಗೂ ಈ ನೀರನ್ನು ಕುಡಿಯಬಹುದು.